Karnataka NewsLatest

ಆಯುಧ ಪೂಜೆಗೆ 50 ರೂ. ಕೊಟ್ಟ ಸರಕಾರದ ವಿರುದ್ಧ ಅಸಮಾಧಾನ

ಪ್ರಗತಿವಾಹಿನಿ ಸುದ್ದಿ, ಮಂಡ್ಯ: ರಾಜ್ಯ ಸರಕಾರ ಆಯುಧ ಪೂಜೆ ಮಾಡಲು 50 ರೂ. ಕೊಟ್ಟಿರುವುದಕ್ಕೆ ಇಲ್ಲಿನ KSRTC ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಕಾರ ದಸರಾ ಸಂದರ್ಭದಲ್ಲಿ KSRTC ಘಟಕಗಳಲ್ಲಿ ಆಯುಧ ಪೂಜೆ ಮಾಡಲು ಹಣ ಬಿಡುಗಡೆ ಮಾಡಿದ್ದು ಈ ಪೈಕಿ ಪ್ರಾದೇಶಿಕ ಕಾರ್ಯಾಗಾರಕ್ಕೆ 2 ಸಾವಿರ ರೂ., ವಿಭಾಗೀಯ ಕಾರ್ಯಾಗಾರಕ್ಕೆ ಒಂದು ಸಾವಿರ ರೂ. ಹಾಗೂ  ಒಂದು ಬಸ್ ಗೆ 50 ರೂ. ನೀಡಿದೆ. ಕೆಲವೆಡೆ 100 ರೂ. ನೀಡಲಾಗಿದೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಬ್ಬಂದಿ ಈ ದುಬಾರಿ ಕಾಲದಲ್ಲಿ 50 ರೂ. ಕೊಡುವುದು ಸರಕಾರಕ್ಕೆ ಗೌರವವಲ್ಲ. ತನ್ನ ಬೊಕ್ಕಸದಲ್ಲಿ ಕೋಟಿಗಟ್ಟಲೆ ಆದಾಯ ಭರಿಸಿಕೊಳ್ಳುವ ಸರಕಾರ ಇಂದಿನ ದುಬಾರಿ 50 ರೂ.ಗೆ ನಾಲ್ಕು ಲಿಂಬೆಹಣ್ಣು ಸಹ ಸಿಗದ ಸಂದರ್ಭದಲ್ಲಿ ಪುಡಿಗಾಸು ಕೊಟ್ಟು ಅವಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟು ಹಣ ಕೊಟ್ಟು ಮೇಲಿಂದ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಲು ಹೇಳಿರುವುದು ಹಾಸ್ಯಾಸ್ಪದ.  ಸರಕಾರ ಹಣವನ್ನೇ ನೀಡದಿದ್ದರೂ ಪರವಾಗಿಲ್ಲ, ನಮ್ಮ ಜೀವನಕ್ಕೆ ಆಧಾರವಾದ ಬಸ್ ಗಳನ್ನು ನಾವೇ ಪೂಜೆ ಮಾಡಿಕೊಳ್ಳುತ್ತೇವೆ. ಕೊಡುವುದಾದರೆ ಕನಿಷ್ಠ ಪಕ್ಷ 500 ರೂ. ಆದರೂ ಕೊಡಲಿ ಎಂದು ಸಿಬ್ಬಂದಿ ಹೇಳಿದ್ದಾರೆ.

ಗಾಂಧಿ ಜಯಂತಿಯಂದು ನಕಲಿ ಗಾಂಧಿಗಳ ಬಗ್ಗೆ ಮಾತನಾಡಲ್ಲ; ರಾಹುಲ್ ಗಾಂಧಿಗೆ ಸಿಎಂ ಬೊಮ್ಮಾಯಿ ಕೌಂಟರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button