Latest

11 ಲಕ್ಷದ ಕಾರಿನ ರಿಪೇರಿಗೆ ಶೋ ರೂಂ ನೀಡಿದ ಅಂದಾಜು ವೆಚ್ಚ 22 ಲಕ್ಷ !

ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು – ವೋಕ್ಸ್ ವ್ಯಾಗನ್ ಕಾರನ್ನು ರಿಪೇರಿ  ಮಾಡಿಸಲು ಶೋ ರೂಂ ಗೆ ಬಿಟ್ಟಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು, ಶೋ ರೂಂ ನವರು ನೀಡಿದ ಅಂದಾಜು ವೆಚ್ಚ ನೋಡಿ ಅಕ್ಷರಶಃ ಹೌಹಾರಿದ್ದಾರೆ.
  ಬೆಂಗಳೂರಿನ ಅನಿರುದ್ಧ ಗಣೇಶ ಎಂಬುವವರು ಹೊಂದಿರುವ ಕಾರಿನ ಬೆಲೆ 11 ಲಕ್ಷ. ಬೆಂಗಳೂರು ಪ್ರವಾಹದ ಸಂದರ್ಭದಲ್ಲಿ ಕಾರು ಸಂಪೂರ್ಣ ಮುಳುಗಿತ್ತು. ಕಾರು ಸಂಪೂರ್ಣ ದುರಸ್ತಿ ಮಾಡಿಸಲು ಅವರು ಶೋ ರೂಂಗೆ ಬಿಟ್ಟಿದ್ದರು. ದುರಸ್ತಿ ಕಾರ್ಯ ಬಹಳಷ್ಟಿರುವುದರಿಂದ ಅಂದಾಜು ವೆಚ್ಚದ ಪಟ್ಟಿ ನೀಡುವಂತೆ ಕೋರಿದ್ದರು.
  ಶೋ ರೂಂನವರು ಇವರ 11 ಲಕ್ಷದ ಕಾರಿನ ದುರಸ್ತಿ ವೆಚ್ಚ 22 ಲಕ್ಷ ಆಗುತ್ತದೆ ಎಂದು ಪಟ್ಟಿ ನೀಡಿದ್ದಾರೆ.
  ಅಲ್ಲದೇ ಕಾರಿನ ಇನ್ಶುರೆನ್ಸ್ ದಾಖಲಾತಿಗಳ ಕೆಲಸಕ್ಕೆ ಶೋ ರೂಂ ನವರು 44,840 ರೂ. ನಮೂದಿಸಿದ್ದಾರೆ. ಈ ಬಗ್ಗೆ ವೋಕ್ಸ್ ವ್ಯಾಗನ್ ಕಂಪನಿಗೆ ನೇರವಾಗಿ ವಿಚಾರ ಮಾಡಲಾಗಿ ಅವರು ವಿಮಾ ದಾಖಲಾತಿ ಕೆಲಸಕ್ಕೆ 5000 ರೂ. ವೆಚ್ಚವಾಗುತ್ತದೆ ಎಂದು ತಿಳಿಸಿದರು ಎಂಬುದಾಗಿ ಅನಿರುದ್ಧ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
https://pragati.taskdun.com/politics/data-useper-personindiapm-modi/

Related Articles

Back to top button