Kannada News

ಯರಗಟ್ಟಿ ಬಳಿ ಭೀಕರ ಅಪಘಾತ (ವಿಡಿಯೋ ಸಹಿತ ಸುದ್ದಿ)

ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ – ಯರಗಟ್ಟಿಯ ಮುತ್ತೂಟ್ ಫೈನಾನ್ಸ್ ಬಳಿ ಗುರುವಾರ ಬೆಳಗ್ಗೆ ಕಾರ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಓರ್ವ ಸಾವಿಗೀಡಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಟ್ರಕ್ ಚಾಲಕ ರಂಗಪ್ಪ ಪಾಟೀಲ (30) ಸ್ಥಳದಲ್ಲೇ ಸಾವನ್ನಪ್ಪಿದ್ದು ಕಾರಿನಲ್ಲಿದ್ದ ಗೌಡಪ್ಪಗೌಡ ಅಮರೇಗೌಡ (25), ವೀರಭದ್ರಗೌಡ ಎಸ್. ಡಬಿ(32) ಈ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
 ಅಮರೇಗೌಡ ಮಾಲಿಪಾಟೀಲ (58), ಹನುಮಂತಗೌಡ ಬೆಟಗೇರಿ(23) ಅವರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ದೃಷ್ಯ ಅತ್ಯಂತ ಭೀಕರವಾಗಿತ್ತು.
ಈ ಕುರಿತು ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button