ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಜಿದ್ದಿಗೆ ಬಿದ್ದಿವೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ 5ನೇ ದಿನಕ್ಕೆ ಕಾಲಿಟ್ಟಿದ್ದು, ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾಗುತ್ತಿರುವ ಮಂಡ್ಯ, ಮೇಲುಕೋಟೆ ಭಾಗದಲ್ಲಿ ಸಾಗಿದೆ. ಕಾಂಗ್ರೆಸ್ ಯಾತ್ರೆಗೆ ಈಗಾಗಲೇ ಜೆಡಿಎಸ್ ಪಂಚರತ್ನ ಯಾತ್ರೆ ಘೋಷಿಸಿದ್ದರೆ ಇದೀಗ ಭಾರತ್ ಜೋಡೋಗೆ ಪರ್ಯಾಯವಾಗಿ ಆಡಳಿತಾರೂಢ ಬಿಜೆಪಿ ಕೂಡ ಯಾತ್ರೆಗೆ ಸಿದ್ಧತೆ ನಡೆಸಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಂಡು ರಾಜ್ಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಲ್ಲಿ ಹುರುಪು, ಉತ್ಸಾಹ ತುಂಬಿದ್ದಾರೆ. ಮೈಸೂರು, ಹಳೇ ಮೈಸೂರು, ಮಂಡ್ಯ, ಮೇಲುಕೋಟೆ ಭಾಗದಲಿ ಪಾದಯಾತ್ರೆ ಸಂಚಲನ ಮೂಡಿಸಿದೆ. ಭಾರತ್ ಜೋಡೋಗೆ ಪರ್ಯಾಯ ಯಾತ್ರೆ ಬಗ್ಗೆ ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಪರ್ಯಾಯ ಯಾತ್ರೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಮೊದಲು ನಾವೇ ಸಿದ್ಧತೆ ನಡೆಸಿದ್ದೆವು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ನನ್ನ ನೇತೃತ್ವದಲ್ಲಿ ಯಾತ್ರೆ ಆರಂಭವಾಗಬೇಕಿತ್ತು. ಆದರೆ ದಸರಾ ಕಾರ್ಯಕ್ರಮ ಬಂದಿದ್ದರಿಂದ ತಾತ್ಕಾಲಿಕವಾಗಿ ನಿಂತಿದೆ ಎಂದರು.
ಭಾರತ್ ಜೋಡೋ ಯಾತ್ರೆಗೆ ಸೋನಿಯಾ ಗಾಂಧಿ ಆಗಮಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಭಾರತ್ ಜೋಡೋಗೆ ಯಾರೇ ಬದರೂ ನಮಗೆ ತೊಂದರೆಯಿಲ್ಲ. ಇದು ಬಿಜೆಪಿ ಮೇಲೆ ಯಾವುದೇ ರೀತಿಯ ಪರಿಣಾಮವನ್ನೂ ಬೀರಲ್ಲ ಎಂದು ಹೇಳಿದರು.
ಭೀಕರ ರಸ್ತೆ ಅಪಘಾತ; ಶಾಸಕ ಅರವಿಂದ್ ಬೆಲ್ಲದ್ ಚಿಕ್ಕಪ್ಪ ದುರ್ಮರಣ
https://pragati.taskdun.com/latest/dharwadshivanna-belladdeathaccident/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ