ಎಲೆಕ್ಟ್ರಿಕಲ್ ಬೈಕ್ ತಯಾರಿಸಿದ ಅರಭಾವಿ ಮಠದ ಯುವಕ ; ಬೆನ್ನು ತಟ್ಟಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ; ಗೋಕಾಕ : ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರೀಕಲ್ ಬೈಕ್ನ್ನು ತಯಾರಿಸುವ ಮೂಲಕ ಅರಭಾವಿ ಮಠದ ಯುವಕ ಮಾದರಿಯಾಗುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾನೆ.
ಮೂಡಲಗಿ ತಾಲೂಕಿನ ಅರಭಾವಿ ಮಠದ ಅಮಿತ ರಾಮಪ್ಪ ಬಿಲಕುಂದಿ ಎಂಬ ಡಿಪ್ಲೋಮಾ ಪದವೀಧರ ಹೊಚ್ಚ ಹೊಸ ಎಲೆಕ್ಟ್ರಿಕಲ್ ಬೈಕ್ ನಿರ್ಮಾಣ ಮಾಡುವ ಮೂಲಕ ಪರಿಸರ ಸ್ನೇಹಿಯಾಗಿದ್ದಾನೆ.
ಮೊದಲಿಗೆ ಹಳೆಯ ಹೊಂಡಾ ಬೈಕ್ ತೆಗೆದುಕೊಂಡು ಎಲೆಕ್ಟ್ರಿಕಲ್ ವಾಹನವನ್ನಾಗಿ ಪರಿವರ್ತಿಸಿ ಅದಕ್ಕೆ ತಕ್ಕದಾದ ಬ್ಯಾಟರಿ ಜೋಡಿಸಿದ್ದಾನೆ. ವಾಹನದ ಹಿಂದಿನ ಚಕ್ರ ಸೇರಿದಂತೆ ಎಲ್ಲ ಎಲೆಕ್ಟ್ರಿಕಲ್ ವಸ್ತುಗಳನ್ನು ಬಳಸಿದ್ದಾನೆ. ಎಲ್ಲ ವಸ್ತುಗಳನ್ನು ಕೋಯಂಬತ್ತೂರಗಳಲ್ಲಿ ಖರೀದಿಸಿ ಪ್ರತಿಯೊಂದು ಬಿಡಿ ಭಾಗಗಳನ್ನು ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕಲ್ ವಸ್ತುಗಳನ್ನು ಬಳಕೆ ಮಾಡಿದ್ದಾರೆ.
ಈಗಾಗಲೇ ಈ ಬೈಕ್ ತಾಲೂಕಿನಾದ್ಯಂತ ಹೆಸರು ಮಾಡಿದ್ದು, ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿಯೂ ಸುತ್ತಿ ಬಂದಿದೆ. ಒಮ್ಮೆ ಚಾರ್ಜ ಮಾಡಿದರೆ 130 ರಿಂದ 150 ಕಿ.ಮೀ ವರೆಗೆ ಎಲೆಕ್ಟ್ರಿಕಲ್ ಬೈಕ್ ಓಡುವ ಸಾಮರ್ಥ್ಯ ಪಡೆದಿದೆ. 1 ತಿಂಗಳಲ್ಲಿ ಬೈಕ್ ತಯಾರಿಸಿದ್ದು, ಇದಕ್ಕಾಗಿ ಆತ 1 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾನೆ. ಮೊದಲಿನಿಂದಲೂ ಬೈಕ್ ತಯಾರಿಸುವ ಹವ್ಯಾಸಿಯಾಗಿರುವ ಈತ ಏನಾದರೊಂದು ಹೊಸತನವನ್ನು ಸಮಾಜಕ್ಕೆ ಅರ್ಪಿಸುತ್ತಲೇ ಬಂದಿದ್ದಾನೆ. ಎಲೆಕ್ಟ್ರಿಕಲ್ ಬೈಕ್ಗೆ ಅಪಾರ ಅನುಭವವನ್ನು ಹೊಂದಿರುವ ಈತನಿಗೆ ಎಲೆಕ್ಟ್ರಿಕಲ್ ಬೈಕ್ ತಯಾರಿಸುವ ಹಾಗೂ ಮಾರುಕಟ್ಟೆಗೆ ಪರಿಚಯಿಸುವ ಅಕಾಂಕ್ಷೆ ಹೊಂದಿದ್ದಾನೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ :
ಈತನ ಸಾಧನೆಗೆ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಅರಭಾವಿ ಕ್ಷೇತ್ರದ ಹೆಮ್ಮೆ ಎಂದು ಹೇಳಿರುವ ಅವರು, ಎಲೆಕ್ಟ್ರಿಕಲ್ ಬೈಕ್ ತಯಾರಿಸಿರುವ ಬಿಲಕುಂದಿ ಸಾಧನೆಗೆ ಎಲ್ಲ ರೀತಿಯ ಸಹಕಾರ ಹಾಗೂ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಂಕರ ಬಿಲಕುಂದಿ, ಕಾಶಪ್ಪ ನಿಂಗನ್ನವರ, ಹನಮಂತ ಚಿಪ್ಪಲಕಟ್ಟಿ, ಭೀಮಶಿ ಅಂತರಗಟ್ಟಿ, ರಾಜು ಜಕ್ಕಾನಟ್ಟಿ, ಅರಭಾವಿ ಪಟ್ಟಣ ಪಂಚಾಯತ ವ್ಯಾಪ್ತಿಯ ಮುಖಂಡರು ಉಪಸ್ಥಿತರಿದ್ದರು.
ದಿ ಉಮೇಶ ಕತ್ತಿ ನಿವಾಸಕ್ಕೆ ಬಿ.ಎಲ್.ಸಂತೋಷ್ ಭೇಟಿ
https://pragati.taskdun.com/politics/b-l-santoshramesh-kattiumesh-katti-home/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ