Kannada NewsKarnataka News
ಬೆಳಗಾವಿ: ಒಂದು ವರ್ಷದ ಮಗುವಿಗೆ ಕಟ್ಟಿದ್ದ ಜೋಳಿಗೆಗೆ ನೇಣು ಹಾಕಿಕೊಂಡು ಯುವ ರೈತ ಆತ್ಮಹತ್ಯೆ, ಮಗನ ಪ್ರಥಮ ಹುಟ್ಟುಹಬ್ಬ ಆಚರಿಸಿ ಮರುದಿನವೆ ನೇಣಿಗೆ ಶರಣು
ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಯುವ ರೈತ ರಾಜಶೇಖರ ಫಕೀರಪ್ಪ ಬೋಳೆತ್ತಿನ (34) ಕೃಷಿ ಚುಟುವಟಿಕೆಗೆ ಮಾಡಿದ ಸಾಲ ಮಾಡಿ ಅದನ್ನು ತಿರಿಸಲಾಗದೆ ಬೆಳಗಾವಿಯ ವಿನಾಯಕ ನಗರದಲ್ಲಿ ತನ್ನ ಬಾಡಿಗೆ ಮನೆಯಲ್ಲಿ ಮಂಗಳವಾರ ತನ್ನ ಒಂದು ವರ್ಷದ ಮಗುವಿಗೆ ಕಟ್ಟಿದ್ದ ಜೋಳಿಗೆಗೆ ನೇಣು ಹಾಕಿಕೊಂಡು ದಾರುಣ್ಯ ಸಾವು ಕಂಡಿದ್ದಾನೆ.
ಗ್ರಾಮದಲ್ಲಿ ತನ್ನ ತಂದೆಯ ಹೆಸರಿನಲ್ಲಿದ್ದ ಜಮಿನಿನಲ್ಲಿ ಕೃಷಿ ಮಾಡಿ ಅತಿವೃಷ್ಟಿ ಹಾಗೂ ಕರೊನಾ ಹಾವಳಿ ಮತ್ತು ಈ ವರ್ಷದ ವಿಪರೀತ ಮಳೆಯಿಂದ ಜಮೀನದಲ್ಲಿಯ ಸೋಯಾಬಿನ್ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು.
ತಂದೆಯ ಹೆಸರಿನಲ್ಲಿ ಕೈಗಡ, ಬ್ಯಾಂಕ್ ಮತ್ತು ಇದ್ದ ಜಮೀನಿನಲ್ಲಿ ಕೆಲ ಬಾಗ ಬೇರೆಯವರಿಗೆ ಗಿರವಿ ಇಟ್ಟು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ.
ಸಾಲಬಾದೆಗೆ ಹೆದರಿ ತನ್ನ ಮಗನ ಪ್ರಥಮ ಹುಟ್ಟುಹಬ್ಬ ಆಚರಿಸಿ ಮರುದಿನವೆ ಪುಟ್ಟಾಣಿ ಮಕ್ಕಳು ಹಾಗೂ ಹೆಂಡತಿಗೆ ಊರಿಗೆ ತೆರಳುವಂತೆ ಬೆದರಿಸಿ ತಾನು ನೇಣಿಗೆ ಶರಣಾಗಿದ್ದಾನೆ.
ಮೃತ ರೈತನ ತಾಯಿ, ತಂದೆ, ಪತ್ನಿ, ಇಬ್ಬರು ಮಕ್ಕಳು, ಸಹೋದರಿಯರು ಹಾಗೂ ಸಂಬಂಧಿಗಳ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಬೆಳಗಾವಿ ಕ್ಯಾಂಪ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://pragati.taskdun.com/latest/violation-of-protocal-channaraja-hattiholi-boycott-eranna-kadadi-took-the-class/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ