Latest

ಅತ್ಯಾಚಾರ ಆರೋಪಿಗೆ ಜಾಮೀನು; ವರ್ಷದೊಳಗೆ ಸಂತ್ರಸ್ತೆ ಮದುವೆಯಾಗಲು ಹೈಕೋರ್ಟ್ ಆದೇಶ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್, ಸಂತ್ರಸ್ತೆಯನ್ನು ವರ್ಷದೊಳಗೆ ವಿವಾಹವಾಗುವಂತೆ ಆದೇಶ ನೀಡಿದೆ.

ರೇಪ್ ಕೇಸ್ ನಲ್ಲಿ ಬಂಧಿತನಾಗಿರುವ 26 ವರ್ಷದ ಯುವಕನಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ಬಾಂಬೆ ಹೈಕೋರ್ಟ್ ಏಕಸದಸ್ಯ ಪೀಠ, ಅತ್ಯಾಚಾರ ಬಾದಿತ ಸಂತ್ರಸ್ತೆಯನ್ನು ವಿವಾಹವಾಗಬೇಕು ಎಂದು ನ್ಯಾಯಾಧೀಶೆ ಭಾರತಿ ಡಾಂಗ್ರೆ ತಿಳಿಸಿದಾರೆ.

ಅತ್ಯಾಚಾರ ಆರೋಪಿ ಯುವಕ ಹಾಗೂ ಸಂತ್ರಸ್ತೆ 22 ವರ್ಷದ ಯುವತಿ ಇಬ್ಬರೂ ಸಮ್ಮತಿ ಸಂಬಂಧದಲ್ಲಿಯೇ ಇದ್ದರು. ಆದರೆ ಯುವತಿ ಗರ್ಭಿಣಿಯಾಗುತ್ತಿದ್ದಂತೆ ಯುವಕ ಯುವತಿಯನ್ನು ನಿರ್ಲಕ್ಷ್ಯ ಮಾಡಲು ಆರಂಭಿಸಿದ್ದ. ಇದರಿಂದ ಬೇಸತ್ತ ಯುವತಿ 2020ರಲ್ಲಿ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದಳು.

ದೂರಿನ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಯುವಕನನ್ನು ಬಂಧಿಸಿದ್ದರು. ತಾನು ಗರ್ಭಿಣಿ ಎಂಬುದನ್ನು ಕುಟುಂಬದವರಿಗೆ ತಿಳಿಸಲು ಇಷ್ಟಪಡದ ಯುವತಿ ಮನೆಯನ್ನೇ ತೊರೆದಿದ್ದಳು. ಬಳಿಕ ಮುಂಬೈನ ಆಸ್ಪತ್ರೆಯೊಂದರಲ್ಲಿ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಜನವರಿ 30, 2020ರಂದು ಯುವತಿ ಮಗುವನ್ನು ಒಂದು ಭವನದ ಮುಂದೆ ಬಿಟ್ಟು ಹೋಗಿದ್ದಳು. ಮಗುವನ್ನು ಬಿಟ್ಟು ಹೋಗಿದ್ದ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿತ್ತು. ಅಂದಿನಿಂದ ಯುವತಿ ನಾಪತ್ತೆಯಾಗಿದ್ದು, ಈವರೆಗೂ ಯುವತಿಯ ಪತ್ತೆಯಾಗಿಲ್ಲ. ತನ್ನ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಅರಿತು ಮಹಿಳೆ ಬಹುಶ: ನ್ಯಾಯದ ದಾರಿಯಿಂದ ಪಲಾಯನ ಮಾಡಲು ಕಾರಣವಾಗಿರಬಹುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದೀಗ ಆರೋಪಿ ಯುವಕ ಸಂತ್ರಸ್ತ ಯುವತಿ ವಿವಾಹವಾಗಲು ಹಾಗೂ ಮಗುವಿನ ಪಿತೃತ್ವ ಜವಾಬ್ದಾರಿ ಅಂಗೀಕರಿಸಲು ಸಿದ್ಧ ಎಂದು ಹೈಕೋರ್ಟ್ ಗೆ ತಿಳಿಸಿದ್ದಾನೆ. ಆದರೆ ಭವನದ ಮುಂದೆ ಪತ್ತೆಯಾಗಿದ್ದ ಮಗುವನ್ನು ಶಿಶುಪಾಲನಾ ಕೇಂದ್ರಕ್ಕೆ ಒಪ್ಪಿಸಲಾಗಿತ್ತು. ಈಗಾಗಲೇ ಆ ಮಗುವನ್ನು ದತ್ತು ನೀಡಲಾಗಿದೆ ಎಂದು ಮುಂಬೈ ಪೊಲೀಸರು ಹೈಕೋರ್ಟ್ ಗೆ ತಿಳಿಸಿದ್ದಾರೆ.

ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಹೈಕೊರ್ಟ್, ಸಂತ್ರಸ್ತೆಯನ್ನು ಶೀಘ್ರವೇ ಪತ್ತೆ ಮಾಡುವಂತೆ ಪೊಲೀಸರಿಗೆ ಸೂಚಿಸಿದೆ. ಒಂದು ವರ್ಷದೊಲಗೆ ಸಂತ್ರಸ್ತೆ ಪತ್ತೆಯಾದರೆ ಆರೋಪಿ ಆಕೆಯೊಂದಿಗೆ ವಿವಾಹವಾಗಬೇಕು. ಒಂದು ವರ್ಷವಾದರೂ ಯುವತಿ ಪತ್ತೆಯಾಗದಿದ್ದಲ್ಲಿ ಆರೋಪಿ ಷರತ್ತಿಗೆ ಬದ್ಧನಾಗಿರಬೇಕಿಲ್ಲ ಎಂದು ಕೋರ್ಟ್ ತಿಳಿಸಿದೆ.

ನ.1ರಂದು ಎಲ್ಲರ ಮನೆಯ ಮೇಲೆ ಕನ್ನಡಧ್ವಜ ಹಾರಿಸಿ: ನಾಡೋಜ ಡಾ.ಮಹೇಶ ಜೋಶಿ ಕರೆ

https://pragati.taskdun.com/latest/kannada-rajyotsavakannada-flagedr-mahesh-joshi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button