ಪ್ರಗತಿವಾಹಿನಿ ಸುದ್ದಿ; ನೇಸರಗಿ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ, ರೈತರ, ಮಹಿಳೆಯರ , ಉದ್ಯೋಗ ಅದ್ಯಯನ, ಆನ್ ಲೈನ್ ಶಿಕ್ಷಣ ಪಡೆಯುವ , ಡಿಜಿಟಲ್, ಆನ್ ಲೈನ್ ನಲ್ಲಿ ಉದ್ಯೋಗ ನಿರ್ವಹಿಸುವ ಪುರುಷ ಮಹಿಳೆಯರಿಗೆ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ಅತ್ಯುನ್ನತ ಕೆಲಸ ನಿರ್ವಹಿಸುತ್ತಿದೆ ಎಂದು ಚೆನ್ನಮ್ಮನ ಕಿತ್ತೂರ ಶಾಸಕರಾದ ಮಹಾಂತೇಶ ದೊಡಗೌಡರ ಹೇಳಿದರು.
ಇಲ್ಲಿನ ಶ್ರೀ ಚನ್ನವೃಷಬೇಂದ್ರ ಕಲ್ಯಾಣ ಮಂಟಪ ನೇಸರಗಿಯಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಸಿ ಎಸ್ ಸಿ ಇ – ಆಡಳಿತ ಇಂಡಿಯಾ ಲಿಮಿಟೆಡ್ ಇವರ ಆಶ್ರಯದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದಲ್ಲಿ ಪಾಲ್ಗೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜ್, ಸರ್ಕಾರಿ ಐಟಿಐ ಕಾಲೇಜ್,ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನೇಸರಗಿ ಇದರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಿಂದಿನ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಆಗಿನ ಕಾರ್ಯಕ್ರಮದಲ್ಲಿ ಮಾತನಾಡಿ ಸರ್ಕಾರದ ಯೋಜನೆಗಳು ಜನರ ಕೈಗೆ ಸೇರುವ ಹೊತ್ತಿಗೆ ಶೇ. 80. ಹಣ ಪೋಲಾಗಿ ಜನರಿಗೆ 20% ಮಾತ್ರ ಸಿಗುತ್ತಿದ್ದು ವಿಪರ್ಯಾಸ ಎಂದಿದ್ದರು. ಆದರೆ ಈಗ ಚಾಯ್ ಮಾರುವ ವ್ಯಕ್ತಿ ಮುಖ್ಯಮಂತ್ರಿಗಳಾಗಿ, ನಂತರ ಅಖಂಡ ಭಾರತ ದೇಶದ ಪ್ರಧಾನ ಮಂತ್ರಿಗಳಾಗಿ 100 ಕ್ಕೆ 100% ರಷ್ಟು ಎಲ್ಲಾ ಯೋಜನೆಗಳ ಅನುಧಾನ ಜನರಿಗೆ ಅವರವರ ಖಾತೆಗಳಿಗೆ ಒದಗಿಸುವ ವ್ಯವಸ್ಥೆ ಮಾಡಿದ್ದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಸಲ್ಲುತ್ತದೆ ಎಂದರು.
ದೇಶದ ಎಲ್ಲಾ ಸಮುದಾಯದ ಜನರ ಅಭಿವೃದ್ಧಿಗೆ ರೈತರ ಪ್ರಧಾನಮಂತ್ರಿ ಸಮ್ಮಾನ್ ಯೋಜನಾ, ಬಡ ಮಹಿಳೆಯರ ಉದ್ದಾರಕ್ಕೆ ಉಜ್ವಲ ಗ್ಯಾಸ್ ವಿತರಣೆ ಮಾಡಿ ಬಡ ಮಹಿಳೆಯರ ಕಷ್ಟ ನಿವಾರಣೆ, ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆಯಾದ ಜೆ ಜೆ ಎಂ ಮುಖಾಂತರ ನೀರಿನ ಸೌಲಭ್ಯ ದೊರಕಿಸಿ ಹೆಣ್ಣು ಮಕ್ಕಳ ಕಷ್ಟದಲ್ಲಿ ಬಾಗಿಯಾದ ಮೊದಲ ಪ್ರಧಾನಿಯಾದರು. ಸ್ವ ಉದ್ಯೋಗ ಕೈಗೊಳ್ಳಲು ಮುದ್ರಾ ಯೋಜನೆಯಡಿ 10 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ, ಕರೋನಾ ಸಮಯದಲ್ಲಿ 80 ಕೋಟಿ ಜನರಿಗೆ ಆಹಾರ ಒದಗಿಸಿ, ಮೂರು ವಿಭಾಗಗಳ ವ್ಯಾಕ್ಸಿನ್ ವಿತರಣೆ ಮತ್ತು ಏಕ್ ದೇಶ ಏಕ್ ಭಾರತ ಯೋಜನೆ, ಆರ್ಟಿಕಲ್ 371 ರದ್ದು, ಡಿಜಿಟಲ್ ಇಂಡಿಯಾ, ಸ್ವದೇಶಿ ,ಆನಲೈನ್ ಶಿಕ್ಷಣ, ಪರೀಕ್ಷಾ ಮುಖಾಂತರ ಅನೇಕ ಜನರ ಉದ್ಯೋಗದ ಕೇಂದ್ರವಾಗಲು ಪ್ರಧಾನಿ ಮೋದಿ ಪಾತ್ರ ದೊಡ್ಡದಿದ್ದು ಹಾಗೇಯೇ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಎಲ್ಲಾ ಜನಾಂಗಗಳ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡುತ್ತಿದ್ದು ಇದರ ಉಪಯೋಗ ಪಡೆದು ಮೊಬೈಲ್ ಮೂಲಕ ಡಿಜಿಟಲ್, ಆನಲೈನ್ ಶಿಕ್ಷಣ ಪ್ರಯೋಜನ ಪಡೆದು ತಮ್ಮ ಭವಿಷ್ಯದಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಸಿಕೊಂಡು ತಮ್ಮ ತಮ್ಮ ಕುಟುಂಬಕ್ಕೆ ಆಧಾರಸ್ಥಂಬವಾಗಬೇಕು. ಬಡ ಉತ್ತಮ ವಿದ್ಯಾರ್ಥಿಗಳ ಉತ್ತೇಜನಕ್ಕೆ ಮೊನ್ನೆ ಆಧಿವೇಷನದಲ್ಲಿ ಪ್ರಶ್ನೆ ಕೇಳಿದ್ದು ಅದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ನಮ್ಮ ತಂದೆ ದಿ.ಬಸವಂತರಾಯ ಪೌಂಡೇಷನ ವತಿಯಿಂದ ಕಿತ್ತೂರ್ ಮತ್ತು ನೇಸರಗಿಯಲ್ಲಿ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು ಇದರ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳಿಗೆ ಶಾಸಕ ಮಹಾಂತೇಶ ದೊಡಗೌಡರ ಕರೆ ನೀಡಿದರು.
ಗ್ರಾಮೀಣ ಡಿಜಿಟಲ್ ಸೌಲಭ್ಯಗಳ ಕುರಿತು ಸಿಎಸ್ ಸಿಇ ಆಡಳಿತ ಬೆಳಗಾವಿ ಜಿಲ್ಲಾ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಕರೆರುದ್ರನ್ನವರ,ಅರ್ಬನ್ ಬ್ಯಾಂಕ್ ನಿರ್ದೆಶಕ ಮಹಾಂತೇಶ ಕೂಲಿನವರ,ಪ್ರಥಮ ದರ್ಜೆ ಪದವಿ ಕಾಲೇಜ ಪ್ರಾಸ್ಸುಪಾಲರಾದ ಮಾರುತಿಗೌಡ ವಾಯ್ ಹಿತ್ತಾಲಗೌಡರ ಅವರು ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಎಪಿಎಂಸಿ ನಿರ್ದೆಶಕ ಬಿ ಎಪ್ ಕೊಳದೂರ,ಯುವ ದುರೀಣ ಅಮೀತ ವ್ಹಿ ಪಾಟೀಲ, ಸರ್ಕಾರಿ ಪದವಿ ಪೂರ್ವ ಕಾಲೇಜ ಪ್ರಾನ್ಸುಪಾಲರಾದ ಎನ್ ಎಂ ಕುದರಿಮೋತಿ,ಐಟಿಐ ಕಾಲೇಜ ಪ್ರಾನ್ಸುಪಾಲರಾದ ಕೆ ಬಿ ಇಟಗಿ, ಎಸ್ ಎಂ ಪಾಟೀಲ,ಮಲ್ಲೆಶಪ್ಪ ಮಾಳಣ್ಣವರ,ಶಂಕರ ತಿಗಡಿ,ವೀರಪ್ಪಣ್ಣ ಚೋಭಾರಿ, ಮಹಾಂತೇಶ ಮೊಹರೆ, ಶ್ರೀಶೈಲ ಕಮತಗಿ, ಸೋಮಪ್ಪ ಮಾಳಣ್ಣವರ,ಸೋಮನಗೌಡ ಪಾಟೀಲ,ಅಡಿವಪ್ಪ ಹೊಸಮನಿ,ಶಶಿಧರ ಪಾಟೀಲ, ಪತ್ರಕರ್ತ ಸಿ ವಾಯ್ ಮೆನಸಿಕಾಯಿ, ಅಡಿವಪ್ಪ ಚಿಗರಿ ಎಲ್ಲ ಭೋದಕ, ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಾರಿಗೆ ನಿಗಮಕ್ಕೆ ಮೇಜರ್ ಸರ್ಜರಿ; ನಾಲ್ಕು ನಿಗಮ ವಿಲೀನಕ್ಕೆ ನಿರ್ಧಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ