Kannada NewsKarnataka NewsLatest

​ಪ್ರಥಮೇಶ ಮಹಿಳಾ ಸಂಘದ ನೊಂದಣಿ ಪತ್ರ ಹಸ್ತಾಂತರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್​

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ:​ ಕಂಗ್ರಾಳಿ ಕೆ ಎಚ್ ಗ್ರಾಮದ ಮಹಿಳೆಯರು ಸ್ವ ಉದ್ಯೋಗ ಮಾಡುವುದಕ್ಕಾಗಿ ಆರಂಭಿಸಿರುವ ಪ್ರಥಮೇಶ ಮಹಿಳಾ ಸಂಘವನ್ನು ನೊಂದಣಿ ಮಾಡಿಸಿಕೊಟ್ಟಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಮಂಗಳವಾರ ನೊಂದಣಿ ಪತ್ರವನ್ನು ಸಂಘದ ಸದಸ್ಯರಿಗೆ ಹಸ್ತಾಂತರಿಸಿದರು.
​ಸ್ವಯಂ ಉದ್ಯೋಗ ಮಾಡುವ ಆದರ್ಶ ಕಾರ್ಯಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇದಕ್ಕೆ ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ಮಾಡಲು ಸಿದ್ದನಿದ್ದೇನೆ. ಜೊತೆಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ​ಕೊಡುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಪೂನಂ ಬೆನ್ನಾಳಕರ್ , ಸರಿತಾ ಪಾಟೀಲ, ಅನಿತಾ ಪಾಟೀಲ, ಲಕ್ಷ್ಮೀ ಪಾಟೀಲ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
https://pragati.taskdun.com/latest/kptcl-exam-scandal-2-accused-arrestedbelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button