ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂತಾರಾ ಚಿತ್ರದ ಭೂತಕೋಲ ವಿಚಾರವಾಗಿ ನಟ ಚೇತನ್ ಹೇಳಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಇದರ ಬೆನ್ನಲ್ಲೇ ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ, ಈ ತರಹದ ವಿಚಾರವನ್ನು ಇಗ್ನೋರ್ ಮಾಡಬೇಕು ಎಂದು ಹೇಳಿದ್ದಾರೆ.
ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಬಹುಜನ ಸಂಸ್ಕೃತಿ ಎಂಬ ಚೇತನ್ ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಉಪೆಂದ್ರ ಇಂತಹ ವಿಚಾರಗಳನ್ನು ಇಗ್ನೋರ್ ಮಾಡಬೇಕು. ಇಂತಹ ವಿಚಾರಗಳು ಮಾತನಾಡಿದಷ್ಟು ಬೆಳೆಯುತ್ತಾ ಹೋಗುತ್ತದೆ. ಹಾಗಾಗಿ ಈ ವಿಚಾರಗಳ ಬಗ್ಗೆ ಮಾತನಾಡಬಾರದು ಎಂದರು.
ನಮಗೆ ದೈವದ ಕುರಿತು ನಂಬಿಕೆ ಇದೆ. ಪೂಜೆ, ದೈವಾರಾಧನೆ, ಭೂತಕೋಲ ಯಾವುದೇ ಇರಲಿ. ಅದು ನಮ್ಮ ನಂಬಿಕೆ. ನಂಬಿಕೆ ವಿಚಾರವಾಗಿ ಹೆಚ್ಚು ಮಾತನಾಡಬಾರದು. ಅದು ನಮ್ಮ ಮನಸ್ಸಿನಲ್ಲಿರಬೇಕು. ಇವತ್ತಿಗೂ ನಮ್ಮ ತಂದೆ ನಮ್ಮ ಮನೆಯಲ್ಲಿ ನಾಗರಪೂಜೆ ಮಾಡುತ್ತಾರೆ. ನಂಬಿಕೆ ವಿಚಾರದಲ್ಲಿ ಹೆಚ್ಚು ಮಾತನಾಡಬಾರದು ಎಂದು ಹೇಳಿದ್ದಾರೆ.
ದೈವ ನರ್ತನ ಮಾಡುವವರಿಗೆ ಮಾಸಾಶನ ಘೋಷಣೆ
https://pragati.taskdun.com/latest/daiva-nartanamasashanaannouncesunil-kumar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ