Latest

ಭಾರಿ ಮಳೆ; ಕುಸಿದು ಬಿದ್ದ ಮಹಾರಾಣಿ ಕಾಲೇಜು ಗೋಡೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಸಾಂಸ್ಕೃತಿಕ ನಗರದ ಆಕರ್ಷಣೆಯಾದ ಅರಮನೆ ಕೋಟೆಯ ಗೋಡೆ ಕುಸಿದು ಬಿದ್ದ ಬೆನ್ನಿಗೇ ನಗರದ ಇನ್ನೊಂದು ಪಾರಂಪರಿಕ ಕಟ್ಟಡ ಕುಸಿದ್ದು ಬಿದ್ದಿದೆ.

ನಗರದ ಜೆ ಎಲ್ ಬಿ ರಸ್ತೆ ಯಲ್ಲಿರುವ 106 ವರ್ಷಗಳ ಇತಿಹಾಸವಿರುವ ಮಹಾರಾಣಿ ವಿಜ್ಞಾನ ಕಾಲೇಜಿನ ಪಾರಂಪರಿಕ ಕಟ್ಟಡದ ಗೋಡೆ ಕುಸಿದು ಬಿದ್ದಿದ್ದು, ಭಾರಿ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.

ರಸಾಯನ ವಿಜ್ಞಾನ ಮತ್ತು ಪ್ರಾಣಿ ವಿಜ್ಞಾನ ವಿಭಾಗದ ಪ್ರಯೋಗಾಲಯದ ಪರಿಕರಗಳೆಲ್ಲವೂ ಮಣ್ಣಿನಡಿ ಸೇರಿದ್ದು ಸುಮಾರು 40 ಲಕ್ಷರೂ. ನಷ್ಟ ಅಂದಾಜಿಸಲಾಗಿದೆ. ಬೆಳಿಗ್ಗೆ ತರಗತಿಗಳು ಆರಂಭವಾಗುವ ಹೊತ್ತಿಗೇ ಈ ಕಟ್ಟಡ ಕುಸಿದಿದ್ದು ಕಟ್ಟಡ ಬಿರುಕು ಬಿಡುತ್ತಿರುವುದನ್ನು ಮೊದಲೇ ಗಮನಿಸಿದ್ದರಿಂದ ಸಂಭಾವ್ಯ ದುರಂತ ತಪ್ಪಿದೆ.

ಶಿಥಿಲವಾಗಿದ್ದ ಕಟ್ಟಡದಲ್ಲಿ ರಸಾಯನ ವಿಜ್ಞಾನ ಪ್ರಯೋಗಾಲಯದ ಕೊಠಡಿ ಇದ್ದು ಶುಕ್ರವಾರ ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿಗಳು ಪ್ರಯೋಗಕ್ಕೆ ಬರಬೇಕಿತ್ತು.ಆದರೆ ಬಿರುಕು ಮೂಡಿದ್ದನ್ನು ಗಮನಿಸಿದ ವಿಭಾಗದ ಮುಖ್ಯಸ್ಥ ಕೆ.ಕೆ.ಪದ್ಮನಾಭ ಅವರು ತಕ್ಷಣ ವೇಳೆ ಪ್ರಾಂಶುಪಾಲರ ಗಮನಕ್ಕೆ ತಂದರು. ಪ್ರಾಂಶುಪಾಲ ಡಾ.ಡಿ.ರವಿ ಅವರು ಧಾವಿಸಿ ಬಂದು ಕೊಠಡಿಗೆ ಬೀಗ ಹಾಕಿಸಿದ್ದಲ್ಲದೆ, ಎಲೆಕ್ಟ್ರಿಕ್ ಸಂಪರ್ಕವನ್ನು ಕಡಿತಗೊಳಿಸಿದರು. ಕಟ್ಟಡದ ಒಳಗೆ ಯಾರೂ ಪ್ರವೇಶಿಸದಂತೆ ಸೂಚಿಸಲಾಗಿದೆ ಹಾಗೂ ಘಟನೆಯ ಹಿನ್ನೆಲೆ 2 ದಿನಗಳ ಕಾಲ ಕಾಲೇಜಿಗೆ ರಜೆಯನ್ನು ಘೋಷಿಸಲಾಗಿದೆ.ಪಾರಂಪರಿಕ ಕಟ್ಟಡದ ದುರಸ್ತಿಗಾಗಿ ಸರಕಾರ ಈಗಾಗಲೇ ಎರಡು ಕೋಟಿ ರೂ. ಬಿಡುಗಡೆ ಮಾಡಿದೆ. ಕಾಮಗಾರಿಯ ಭೂಮಿಪೂಜೆ ಅ.23ರ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಿರುಕುಗಳು ಹೆಚ್ಚಾಗಿದ್ದವು ಎಂದು ಪ್ರಾಂಶುಪಾಲ ಡಾ.ರವಿ ಅವರು ತಿಳಿಸಿದ್ದಾರೆ.

Home add -Advt

ಐತಿಹಾಸಿಕ ಕಟ್ಟಡ ಮಹಾರಾಜ 10ನೇ ಚಾಮರಾಜೇಂದ್ರ ಒಡೆಯರ್ ಅವರ ಪತ್ನಿ ಕೆಂಪನಂಜಮ್ಮಣಿಯವರಿಗಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗಗಳೊಂದಿಗೆ ಮಹಾರಾಣಿ ಹುಡುಗಿಯರ ಶಾಲೆಯನ್ನು 1881 ರ ಮಾರ್ಚ್ 16 ರಂದು ಪ್ರಾರಂಭಿಸಲಾಗಿತ್ತು. 1902 ರಲ್ಲಿ ಈ ಶಾಲೆಯು ಮಹಾರಾಣಿ ಕಾಲೇಜ್ ಆಗಿ ಮೇಲ್ದರ್ಜೆಗೇರಿತ್ತು.ಪ್ರಸ್ತುತ ಕಟ್ಟಡವನ್ನು1916ರಲ್ಲಿ ಕಟ್ಟಲಾಗಿತ್ತು. ಮೊದಲು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿದ್ದ ಕಾಲೇಜು 1920 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಯಿತು. 1979 ರಲ್ಲಿ ಇದನ್ನು ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಮಹಾರಾಣಿ ಕಲಾ ಕಾಲೇಜು ಎಂದು ಎರಡು ಪ್ರತ್ಯೇಕ ಕಾಲೇಜುಗಳಾಗಿ ವಿಭಜಿಸಲಾಯಿತು. ಈಗ ಕಾಲೇಜು ಸ್ವಾಯತ್ತೆ ಪಡೆದಿದ್ದು ಸುಮಾರು 3850 ವಿದ್ಯಾರ್ಥಿನಿಯರಿಗೆ ಜ್ಞಾನಾರ್ಜನೆ ಕೇಂದ್ರವಾಗಿದೆ. ಇವರಲ್ಲಿ ಬಹುತೇಕರು ಮೈಸೂರಿನ ಹಳ್ಳಿ ಭಾಗದಿಂದ ಬರುತ್ತಿರುವ ವಿದ್ಯಾರ್ಥಿನಿಯರಾಗಿದ್ದಾರೆ. ಇಲ್ಲಿ 350ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ ಇದ್ದು ಸ್ನಾತಕೋತ್ತರ ಮತ್ತು ಪದವಿ ಸೇರಿ 30ಕ್ಕೂ ಹೆಚ್ಚು ವಿಭಾಗಗಳಿವೆ.

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ

https://pragati.taskdun.com/latest/mysorechamundi-hilllandslide/

Related Articles

Back to top button