Kannada NewsKarnataka NewsLatest

ಆನಂದ ಮಾಮನಿ ನಿಧನ: ಸೂತಕದ ಮನೆಯಲ್ಲಿ ಕಿತ್ತೂರು ಉತ್ಸವ ನಡೆಯುತ್ತಾ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನಸಭೆಯ ಹಾಲಿ ಉಪಾಧ್ಯಕ್ಷ ಆನಂದ ಮಾಮನಿ ಶನಿವಾರ ರಾತ್ರಿ ನಿಧನರಾದರು. ಈ ಹಿನ್ನೆಲೆಯಲ್ಲಿ ಭಾನುವಾರದಿಂದ 3 ದಿನಗಳ ಕಾಲ ನಡೆಯಬೇಕಿದ್ದ ಕಿತ್ತೂರು ಉತ್ಸವಕ್ಕೆ ಕರಿನೆರಳು ಬಿದ್ದಿದೆ.

ಆನಂದ ಮಾಮನಿ ಹಾಲಿ ಶಾಸಕರು, ಅಷ್ಟೇ ಅಲ್ಲ ವಿಧಾನಸಭೆಯ ಹಾಲಿ ಉಪಾಧ್ಯಕ್ಷರು. ಹೀಗಿರುವಾಗ ರಾಜ್ಯ ಸರಕಾರ ಶೋಕಾಚರಣೆ ಘೋಷಿಸಲೇಬೇಕಾಗುತ್ತದೆ. ಒಂದು ದಿನದ ಶೋಕಾಚರಣೆಯೋ, 3 ದಿನದ ಶೋಕಾಚರಣೆಯೋ ಇನ್ನೂ ಘೋಷಣೆ ಹೊರಬಿದ್ದಿಲ್ಲ.

ಈ ಹಿನ್ನೆಲೆಯಲ್ಲಿ ಶೋಕಾಚರಣೆ ಸಂದರ್ಭದಲ್ಲಿ ರಾಜ್ಯ ಸರಕಾರದ ಅಧಿಕೃತ ಉತ್ಸವ, ಮನರಂಜನೆ ಕಾರ್ಯಕ್ರಮಗಳನ್ನು ನಡೆಸುವುದು ಸಾಧ್ಯವಿಲ್ಲ.

ಆನಂದ ಮಾಮನಿ ಅವರು ಮೃತದೇಹ ಭಾನುವಾರ ಜಿಲ್ಲೆಗೆ ಬರಲಿದೆ. ಸಂಜೆ ಸವದತ್ತಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಉತ್ಸವವಾಗಿ ಕಿತ್ತೂರು ಉತ್ಸವ ಘೋಷಣೆಯಾಗಿದೆ. ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಭಾನುವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿತ್ತೂರು ಉತ್ಸವ ಉದ್ಘಾಟಿಸಬೇಕಿದೆ.

ಸೂತಕದ ಮನೆಯಲ್ಲಿ ಕಿತ್ತೂರು ಉತ್ಸವ ನಡೆಸುವುದು ಸಾಧ್ಯವೇ? ರಾಜ್ಯಸರಕಾರದ ನಿರ್ಧಾರ ಇನ್ನೂ ಹೊರಬಿದ್ದಿಲ್ಲ.

ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ತೆರಳಿ ಆನಂದ ಮಾಮನಿ ಪಾರ್ಥಿವ ಶರೀರದ ದರ್ಶನ ಪಡೆದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಸವದತ್ತಿ ಶಾಸಕ ಆನಂದ ಮಾಮನಿ ಇನ್ನಿಲ್ಲ

https://pragati.taskdun.com/politics/anand-mamani-nomore/

 

https://pragati.taskdun.com/politics/kitturu-utsava-2022belagavimahantesha-didagowdar/

ಕಿತ್ತೂರು ಉತ್ಸವಕ್ಕೆ ಸರ್ವಸಿದ್ಧತೆ: ಶಾಸಕ ಮಹಾಂತೇಶ ದೊಡಗೌಡರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button