ಇಂಜಿನಿಯರ್, ಡಾಕ್ಟರ್ ಆಗುವುದಕ್ಕಿಂತ ಮೊದಲು ಮಾನವನಾಗು; ಕನ್ನಡವನ್ನು ಕನ್ನಡಿಗರಿಂದ ಮಾತ್ರ ಕಾಪಾಡಲು ಸಾಧ್ಯ; ಡಾ. ಬಸವರಾಜ ಜಗಜಂಪಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿಯ ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಬಳಗದ ವತಿಯಿಂದ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಧ್ವಜಾರೋಹನ ನೇರವೆರಿಸಿ ಮಾತನಾಡಿದ ಅವರು, ಇಂಗ್ಲೀಷ್ ಅಡುಗೆ ಮನೆಯಲ್ಲಿರಲಿ, ಕನ್ನಡ ಹೆಬ್ಬಾಗಿಲಿನಲ್ಲಿರಲಿ. ಜಗದ ಏಳಿಗೆ ಕನ್ನಡಿಗರಿಂದ ಸಾಧ್ಯ. ಸಮಾಜದ ಸಂಪತ್ತಾಗಿ ಕನ್ನಡಿಗರು ಬೆಳೆಯಿರಿ ಎಂದು ಹಾರೈಸಿದರು.
ನಮ್ಮ ದೇಶದ ಮಾನ್ಯತೆ ಪಡೆದ 15 ಭಾಷೆಗಳಲ್ಲಿ ಕನ್ನಡವು ಒಂದು. ಇಂಜಿನಿಯರ್, ಡಾಕ್ಟರ್ ಆಗುವುದಕ್ಕಿಂತ ಮೊದಲು ಮಾನವನಾಗು. ಕನ್ನಡವನ್ನು ಕಾಪಾಡುವುದು ಕನ್ನಡಿಗರಿಂದ ಮಾತ್ರ ಸಾಧ್ಯ. ಯುವಕರೇ ಈ ಶತಮಾನ ನಿಮ್ಮ ಕೈಯಲ್ಲಿದೇ, ಅಂತ:ಕರಣ ಕಳೆದುಕೊಂಡು, ಕೇವಲ ವೈಯಕ್ತಿಯತೆಗೆ ಸಿಮಿತಗೊಳ್ಳದೇ, ಸಾಮಾಜಿಕವಾಗಿ ಬೆಳೆಯಿರಿ. ನಿಮ್ಮ ಆಸಕ್ತಿಯನ್ನು ಪೊಷಿಸಿಕೊಳ್ಳಿ ಎಂದು ಕರೆ ನೀಡಿದರು. ಡಾ. ಪ್ರಭಾಕರ ಕೋರೆಯವರು ಸಮಾಜದ ಏಳ್ಗೆಗಾಗಿ ಶ್ರಮಿಸಿ ಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದಾರೆ. ಈ ಮಹಾವಿದ್ಯಾಲಯದಲ್ಲಿ ಪರಿಸರ ಸ್ನೇಹಿ ವಾತಾವರಣವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ – ನಮ್ಮ ಕರ್ನಾಟಕದ ಅಳಿಯ ಋಷಿ ಸುನ್ನಕ್ ಇಂಗ್ಲೇಂಡ್ ಪ್ರಧಾನಿ. ಬೆಳಗಾವಿಯಲ್ಲಿ ಕನ್ನಡವನ್ನು ಉಳಿಸುವಲ್ಲಿ ಬೆಳೆಸುವಲ್ಲಿ ಕೆ ಎಲ್ ಇ ಸಂಸ್ಥೆ ಬಹುಮುಖ್ಯ ಪಾತ್ರ ವಹಿಸಿದೆ. ಜಗತ್ತಿನ ಶ್ರೇಷ್ಟ ೧೦ ಸಾಫ್ಟವೇರ್ ನಗರಗಳಲ್ಲಿ ನಮ್ಮ ಬೆಂಗಳೂರು ಒಂದು. ನಮ್ಮ ದೇಶದ ಆರ್ಥಿಕತೆಯಲ್ಲಿ ಬೆಂಗಳೂರಿನ ಪಾತ್ರ ದೊಡ್ಡದು. ನಮ್ಮ ಕನ್ನಡಿಗರು ಜಗತ್ತಿನಾದ್ಯಂತ ತಮ್ಮದೇ ಆದ ಛಾಪು ಮುಡಿಸಿದ್ದಾರೆ. ಇಂದಿಗೂ ಸಹಿತ ಕನ್ನಡ ರಾಜ್ಯೋತ್ಸವ ಕೇವಲ ಕರ್ನಾಟಕಕ್ಕೆ ಸಿಮಿತವಾಗದೇ ಮುಂಬಯಿ, ದೆಹಲಿ, ಗುರಗಾಂವ್, ಚೆನ್ನೈನಲ್ಲಿ, ಸಾಗರದಾಚೇ ಅಮೇರಿಕಾ, ಸಿಂಗಾಪುರ, ದುಬೈ, ಐರ್ಲೆಂಡ್, ಮುಂತಾದ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.
ಗೌರವಾನ್ವಿತ ಅಥಿತಿಗಳಾದ ಡಾ. ಎಮ್. ಟಿ. ಕುರಣಿ, ಶ್ರೀ. ಎಮ್. ಡಿ ಅಲಾಸೆ ಅವರ ಕನ್ನಡ ಸೇವೆಯನ್ನು ಗುರುತಿಸಿ ಸತ್ಕರಿಸಲಾಯಿತು. ವಿದ್ಯಾರ್ಥಿಗಳಾದ ಮನೋಜ ಸೋಗಿ, ಪೂರ್ಣಿಮಾ ಖಡ್ಡನವರ, ಅಂಜನಾ ಚೌಗಲೆ ಕನ್ನಡದ ಕುರಿತು ಮಾತನಾಡಿದರು.
ಸುಮೇಧಾ ಸದಾಶಿವ, ಓಂಕಾರ ದಿವಟೆ, ಶಿವಾನಂದ ವಿಭೂತೆ, ಹಳೆಯ ವಿದ್ಯಾರ್ಥಿ ವಿನಾಯಕ ಗುಡೊಡಗಿ, ಉಪನ್ಯಾಸಕ ಶ್ರೀ. ಮಹೇಶ ಸನ್ನಿಯನ್ನವರ, ಡಾ. ಅರವಿಂದ ದೇಶಿ ತಮ್ಮ ಸುಮಧುರ ಕಂಠದಿಂದ ಕನ್ನಡದ ಪ್ರೀತಿ ಹೆಚ್ಚಿಸಿದರು.
ಮಹಾಲಕ್ಷ್ಮಿ ಅರಮಣಿ, ಪೂಜಾ ಚೌಗಲಾ, ಅಂಕೀತಾ ಮಾನೆ ನೃತ್ಯ ಪ್ರದರ್ಶಿಸಿದರು. ಎಕಪಾತ್ರಾಭಿನಯವನ್ನು ಮಯುರಿ ಉದಗಟ್ಟಿ ಮಾಡಿದರು. ಕು. ಪೂಜಾ ಚೌಗಲೆ ಹಾಗೂ ಸಂಗಡಿಗರು ಸ್ವಾಗತಗೀತೆಯನ್ನು ಹಾಡಿದರು. ಸಂಯೋಜಕರಾದ ಡಾ. ಬಾಹುಬಲಿ ಅಕಿವಾಟೆ ಸ್ವಾಗತಿಸಿದರು. ಪ್ರೊ. ಸಚಿನ್ ಮೆಕ್ಕಳಕಿ ಅಥಿತಿಯನ್ನು ಪರಿಚಯಿಸಿದರು. ಕು. ಸ್ಪೂರ್ತಿ ಸುರಪೂರ ವಂದಿಸಿದರು. ಕು. ಅಪೂರ್ವಾ ತಂಗಡಿ ಹಾಗೂ ಕು. ಚೈತ್ರಾ ಕಲ್ಯಾಣಿ ನಿರೂಪಿಸಿದರು.
ಕೆ.ಎಲ್.ಇ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ವೆಂಕಟರೆಡ್ಡಿ, ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, 500ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿಕಲಚೇತನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಗುರಿ; ಸಂಸದ ಅಣ್ಣಾಸಾಹೇಬ ಜೊಲ್ಲೆ
https://pragati.taskdun.com/politics/anna-saheb-jollechikkodithree-wheler-distrubition/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ