ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 67ನೇ ಕರ್ನಾಟಕ ರಾಜ್ಯೋತ್ಸವವನ್ನು ಮಂಗಳವಾರ ಅದ್ಧೂರಿಯಾಗಿ ಆಚರಿಸಿ ಎಲ್ಲರೂ ಮನೆಗೆ ಹೋಗಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರೆ, 80 ಸಾವಿರ ಜನರಿಗೆ ಹೋಳಿಗೆ ಊಟ ವ್ಯವಸ್ಥೆ ಮಾಡಿದ್ದ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಬುಧವಾರ ಬೆಳ್ಳಂಬೆಳಗ್ಗೆ ಮತ್ತೆ ಅದೇ ಸರದಾರ ಹೈಸ್ಕೂಲ್ ಮೈದಾನಕ್ಕೆ ಧಾವಿಸಿದರು.
ಬೆಳಗ್ಗೆ 6 ಗಂಟೆಗೇ ಸ್ವಚ್ಛತಾ ಸಿಬ್ಬಂದಿ ಜೊತೆಗೆ ಆಗಮಿಸಿದ ಸ್ವಾಮೀಜಿ ಮೈದಾನದಲ್ಲಿ ಊಟ ಮಾಡಿ ಬೀಸಾಕಿದ್ದ ಪ್ಲೇಟ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಉಸ್ತುವಾರಿ ನೋಡಿಕೊಂಡರು. ಬೆಳಗ್ಗೆ ಸ್ವಚ್ಛತಾ ಸಿಬ್ಬಂದಿ ಕಲಿಸುವಂತೆ ನಿನ್ನೆಯೇ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗೆ ವಿನಂತಿಸಿದ್ದ ಸ್ವಾಮೀಜಿ, ಇಂದು ಬೆಳಗ್ಗೆ ಸ್ವತಃ ತಾವೇ ಮುಂದೆ ನಿಂತು ಸ್ವಚ್ಛಗೊಳಿಸುವ ಕಾರ್ಯ ವೀಕ್ಷಿಸಿ, ಮಾರ್ಗದರ್ಶನ ನೀಡಿದರು.
ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದೇವೆ. ಹೋಳಿಗೆ ಊಟದ ವ್ಯವಸ್ಥೆಯೂ ಎಲ್ಲರ ಸಹಕಾರದಿಂದ ಅಚ್ಚುಕಟ್ಟಾಗಿ ನಡೆಯಿತು. ಆದರೆ ಅಷ್ಟಕ್ಕೇ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಮೈದಾನವನ್ನು ಸ್ವಚ್ಛಗೊಳಿಸದೆ ತ್ಯಾಜ್ಯಗಳನ್ನು ಹಾಗೆಯೇ ಬಿಟ್ಟು ಹೋಗುವುದು ನಾಗರಿಕತೆ ಲಕ್ಷಣವಲ್ಲ. ಹಾಗಾಗಿ ಈಗ ಬಂದು ಎಲ್ಲವನ್ನು ಸ್ವಚ್ಛಗೊಳಿಸುತ್ತಿದ್ದೇನೆ. ಬೆಳಗ್ಗೆ 10 ಗಂಟೆಯ ಮೊದಲು ಎಲ್ಲವೂ ಸ್ವಚ್ಛವಾಗಬೇಕು. ಜೊತೆಗೆ ಡಿಡಿಟಿ ಪೌಡರ್ ಸಿಂಪರಣೆ ಮಾಡಬೇಕೆಂದು ಸೂಚಿಸಿದ್ದೇನೆ ಎಂದು ಸ್ವಾಮೀಜಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಸ್ವಾಮೀಜಿಯ ಕನ್ನಡ ಕಳಕಳಿ ಜೊತೆಗೆ ಸಾಮಾಜಿಕ ಜವಾಬ್ದಾರಿ ಮಾದರಿಯಾಗಿದೆ.
ಬೆಳಗಾವಿ ಕನ್ನಡ ಹಬ್ಬದಲ್ಲಿ ಹೋಳಿಗೆ ಊಟ ಉಂಡವರೆಷ್ಟು ಗೊತ್ತೇ?
https://pragati.taskdun.com/latest/do-you-know-how-much-holige-food-is-served-at-belgaum-kannada-festival/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ