Latest

ನ.2 ಜನ್ಮದಿನ: ಶಾರುಖ್ ಖಾನ್ ಬಾಲ್ಯ ಕಳೆದಿದ್ದು ಕರ್ನಾಟಕದ ಯಾವ ಊರಿನಲ್ಲಿ ಗೊತ್ತೆ ?

ಪ್ರಗತಿ ವಾಹಿನಿ ಸುದ್ದಿ, ಮುಂಬೈ
ಶಾರುಖ್ ಖಾನ್  ಖ್ಯಾತ ನಟ ಎಂಬುದು ಎಲ್ಲರಿಗೂ ಗೊತ್ತು, ಆದರೆ ಅವರು ಬಾಲ್ಯ ಕಳೆದಿದ್ದು ಕರ್ನಾಟದ ಊರೊಂದರಲ್ಲಿ ಎಂಬುದು ಬಹಳ ಜನರಿಗೆ ತಿಳಿಯದ ವಿಷಯ.
  ಹೌದು, ಬಾಲಿವುಡ್‌ಕಾ ಬಾದ್ ಶಾ ಖ್ಯಾತಿಯ ಶಾರುಕ್ ಖಾನ್ ಕರ್ನಾಟಕದ ಮಂಗಳೂರಿನಲ್ಲಿ ಬಾಲ್ಯದ ೫ ವರ್ಷಗಳನ್ನು ಕಳೆದಿದ್ದಾರೆ. ಈ ಬಗ್ಗೆ ಬಹಳ ಹಿಂದೆ ಒಮ್ಮೆ ಶಾರುಖ್ ಸ್ವತಃ ಒಮ್ಮೆ ಟ್ವೀಟ್ ಕೂಡ ಮಾಡಿದ್ದಾರೆ.
  ಮಂಗಳೂರಿಗೂ ಬಾಲಿವುಡ್ ಮತ್ತು ಟಾಲಿವುಡ್ ಚಿತ್ರರಂಗಕ್ಕೂ ಬಹಳ ನಂಟಿದೆ. ಬಾಲಿವುಡ್‌ನ ಖ್ಯಾತ ನಾಮರಾದ ಸುನೀಲ್ ಶೆಟ್ಟಿ, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಅನುಷ್ಕಾ ಶೆಟ್ಟಿ ಮೊದಲಾದವರು ಮಂಗಳೂರು ಮೂದವರೇ. ಆದರೆ ಬಾಲಿವುಡ್‌ನ ಕಿಂಗ್ ಖಾನ್‌ಗಳಲ್ಲಿ ಒಬ್ಬರಾದ ಶಾರುಕ್‌ಗೂ ಮಂಗಳೂರಿನ ನಂಟಿರುವುದು ಹೆಚ್ಚು ಸುದ್ದಿಯಾಗದೇ ಉಳಿದಿದೆ.
  *ಬಾಲ್ಯ ಕಳೆದಿದ್ದು ಮಂಗಳೂರಲ್ಲಿ*
ಶಾರುಕ್ ಖಾನ್‌ರ ಅಜ್ಜ ಇಫ್ತಿಖಾರ್ ಅಹಮ್ಮದ್ ಅವರು ಮಂಗಳೂರಿನ ಪೋರ್ಟ್ನಲ್ಲಿ ೧೯೬೦ರ ದಶಕದಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಶಾರುಕ್ ಖಾನ್ ೧೯೬೫ರ ನವೆಂಬರ್ ೨ರಂದು ದೆಹಲಿಯಲ್ಲಿ ಜನಿಸಿದರು. ಬಳಿಕ ಶಾರುಕ್ ಅವರ ತಾಯಿ ಶಾರುಕ್‌ರನ್ನು ಮಂಗಳೂರಿನಲ್ಲಿ ಅಜ್ಜನ ಬಳಿಗೆ ಕರೆ ತಂದರು. ಅಲ್ಲಿಂದ ಸುಮಾರು ೫ ವರ್ಷಗಳ ಕಾಲ ಶಾರುಕ್ ಖಾನ್ ಮಂಗಳೂರಿನಲ್ಲಿಯೇ ಬೆಳೆದರು.
  *ಬಾಲ್ಯದ ಫೋಟೊ*
ಶಾರುಕ್ ಖಾನ್ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಬಾಲ್ಯದ ಫೋಟೊಗಳನ್ನು ಅನೇಕ ಬಾರಿ ಹಾಕಿದ್ದಾರೆ. ಬಹಳ ಹಿಂದೆಯೇ ಒಮ್ಮೆ,  ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು, ಇದು ಯಾವ ಊರಿನಲ್ಲಿ ತೆಗೆದ ಚಿತ್ರ ? ಎಂದು ಪ್ರಶ್ನಸಿದ್ದು ಅದಕ್ಕೆ ಶಾರುಕ್ ಮಂಗಳೂರು ಎಂದು ಉತ್ತರಿಸಿದ್ದಾರೆ. ನನ್ನ ಬಾಲ್ಯದ ಫೋಟೊಗಳೆಲ್ಲ ಮಂಗಳೂರಿನಲ್ಲೇ ತೆಗೆದಿದ್ದು ಎಂದು ಶಾರುಕ್ ಹೇಳಿದ್ದಾರೆ.
  ಇನ್ನು, ಶಾರುಕ್ ಬಾಲ್ಯದಲ್ಲಿ ಅನೇಕ ಬಾರಿ ಬೆಂಗಳೂರಿಗೂ ಭೇಟಿ ನೀಡಿದ್ದರು. ಬೆಂಗಳೂರಿನ ಪ್ಯಾಲೇಸ್ ರೋಡ್, ನಂದಿದುರ್ಗ ರಸ್ತೆ ಮೊದಲಾದ ಸ್ಥಳಗಳ ನೆನಪು ಸದಾ ಇರುತ್ತದೆ ಎಂದು ಶಾರುಕ್‌ಖಾನ್ ಹೇಳಿದ್ದಾರೆ.
https://pragati.taskdun.com/latest/invest-karnataka-2022pm-narendra-modispeach/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button