Latest

ಕೊನೆಗೂ ಬೋನಿಗೆ ಬಿದ್ದ ಚಿರತೆ; ಆಪರೇಷನ್ ಯಶಸ್ವಿ

ಪ್ರಗತಿವಾಹಿನಿ ಸುದ್ದಿ, ಮೈಸೂರು: ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಮುಳ್ಳೂರು ರಸ್ತೆಯಲ್ಲಿ ಬೈಕ್ ಸವಾರನ ಮೇಲೆ ದಾಳಿ ಮಾಡಿದ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಳೆದ ರಾತ್ರಿ ಪಟ್ಟಣದ ಸ್ಟೇಡಿಯಂ ಬಳಿ ಹಾಗೂ ಮುಳ್ಳೂರು ರಸ್ತೆಯಲ್ಲಿ ಕಾಣಿಸಿ ಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯಲು ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಓಡುತ್ತಿದ್ದ ಚಿರತೆ ರಾಜ್‌ ಪ್ರಕಾಶ್‌ ವಿದ್ಯಾಸಂಸ್ಥೆಯ ಬಳಿ ಬೈಕ್‌ ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಎರಗಿದೆ. ಚಿರತೆ ದಾಳಿಗೆ ಹೆದರಿದ ಬೈಕ್ ಸವಾರ ದ್ವಿಚಕ್ರ ಸಮೇತ ರಸ್ತೆಗೆ ಉರುಳಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಹುಣಸೂರು, ಮೈಸೂರು ಭಾಗದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬೋನಿಗೆ ಬಿದ್ದ ಚಿರತೆಗೆ ಪಶುವೈದ್ಯ ಇಲಾಖೆಯ ಡಾ.ಮಂಜುನಾಥ್ ಅವರು ಅರಿವಳಿಕೆ‌ ಚುಚ್ಚು ಮದ್ದು ನೀಡಿ ಸಾಗಾಟಕ್ಕೆ ಸಹಕರಿಸಿದರು.

ಇಂದಿನಿಂದ ‘ಬಿಚ್ಚಿದ ಜೋಳಿಗೆ’ ತಿರುಗಾಟ…

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button