ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಭಾರತೀಯ ಸೇನೆಯ ಸೈನಿಕ ಶಿವಾಜಿ ನಾಗಪ್ಪ ತಳವಾರ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ 8ನೇ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
2020ರ ಅ.4ರಂದು ಶಿವಾಜಿ ನಾಗಪ್ಪ ತಳವಾರ ಅವರು ನಾವಗೆ ಗ್ರಾಮದಿಂದ ತನ್ನ ಪಲ್ಸರ್ ಬೈಕ್ ನಲ್ಲಿ ಕೆಲಸದ ನಿಮಿತ್ತ ಮೈಸೂರುನಲ್ಲಿ ನೌಕರಿಗೆ ಹಾಜರಾಗಲು ಹೋರಟಿದ್ದರು. ಅಂದು ರಾತ್ರಿ 8:30ರ ಸುಮಾರಿಗೆ ದೊಡ್ಡಘಟ್ಟ ಕೊರಟಗೆರೆ ರಸ್ತೆಯಲ್ಲಿ ಲಾರಿ ಬೈಕ್ ನಡುಎ ಅಪಘಾತ ಸಂಭವಿಸಿ ಬೈಕ್ ಸವಾರ ಶಿವಾಜಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಬೀರೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ಪಿ.ಕೆ.ಎಸ್. ಆಸ್ಪತ್ರೆ ಬೀರೂರುದವರು ಕುಟುಂಬಸ್ತರಿಗೆ ಮೃತ ದೇಹ ಹಸ್ತಾಂತರಿಸಿದ್ದರು. ಈ ಪ್ರಕರಣದಲ್ಲಿ ಮೃತನ ಅವಲಂಬಿತರಾದ (ಹೆಂಡತಿ) ಹನಮವ್ವ ತಳವಾರ, ಆನಂದ ತಳವಾರ (ತಂದೆ) ಯಶೋದಾ ತಳವಾರ (ತಾಯಿ)ರವರುಗಳು ಅಪಘಾತ ಪರಿಹಾರ ನ್ಯಾಯಾಲಯ ಅಂದರೆ 8ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಮೋಟಾರ ಅಪಘಾತ ಪರಿಹಾರ ಟ್ರಿಬ್ಯುನಲ್ ಬೆಳಗಾವಿಯಲ್ಲಿ ದಾವೆ ಹಾಕಿ 1,00,00,000 ರೂ ಪರಿಹಾರವನ್ನು ಕೇಳಿದ್ದರು.
ಮೃತ ಶಿವಾಜಿ ನಾಗಪ್ಪ ತಳವಾರ ಇವರು ಭಾರತ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಅಪಘಾತ ಸಮಯದಲ್ಲಿ 52,753 ರೂ ಸಂಬಳ ಮತ್ತು ಭತ್ಯೆ ಇರುತ್ತಿತ್ತು, ಅವರನ್ನು ಅವಲಂಬಿಸಿದ್ದ ಹೆಂಡತಿ ಮತ್ತು ತಂದೆ ತಾಯಿರವರನ್ನು ಪರಿಗಣಿಸಿ ನ್ಯಾಯಾಲಯವು ಒಟ್ಟು ರೂ.40,43,600 ಮತ್ತು ಬಡ್ದಿ ಮೃತರ ಕುಟುಂಬಕ್ಕೆ ಕೊಡಲು ಆದೇಶ ನೀಡಿದೆ.
ನಾಗನೂರ : ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
https://pragati.taskdun.com/latest/mudalaginaganuru-townbalachandra-jarakiholi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ