ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೇಶದಲ್ಲಿ ಎಂಎಸ್ಎಂಇಗಳು ಎದುರಿಸುತ್ತಿರುವ ಬೆಳವಣಿಗೆಯ ನಿಧಿಯ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸೆಲ್ಫ್ ರಿಲಾಯಂಟ್ ಫಂಡ್ (ಎಸ್ಆರ್ ಐ) ಆತ್ಮನಿರ್ಭರ ಭಾರತ್ ಭಾಗವಾಗಿ 10,000 ಕೋಟಿ ರೂ. ಆಲ್ಟರ್ನೇಟಿವ್ ಇನ್ವೆಸ್ಟ್ ಮೆಂಟ್ ಫಂಡ್ ಅನ್ನು ಸ್ಥಾಪಿಸಿದೆ.
ಈ ನಿಧಿಯು ಮದರ್ ಫಂಡ್-ಡಾಟರ್ ಫಂಡ್ ರಚನೆಯನ್ನು ಹೊಂದಿದ್ದು, ಇದರಲ್ಲಿ ಎಸ್ಆರ್ ಐ ಫಂಡ್ ಸಹ ಮದರ್ ಫಂಡ್ ನ ರೀತಿಯಲ್ಲಿ ಡಾಟರ್ ಫಂಡ್ ನ ಕಾರ್ಪಸ್ ನ ಶೇ.20 ರವರೆಗೆ ಹೂಡಿಕೆ ಮಾಡುತ್ತದೆ. ಅಲ್ಲದೇ ಡಾಟರ್ ಫಂಡ್ ಗಳು ಹೊರಗಿನ ಮೂಲಗಳಿಂದ ಬಂಡವಾಳದ ಶೇ.80 ರಷ್ಟು ಸಮತೋಲನವನ್ನು ಸಂಗ್ರಹಿಸುತ್ತವೆ. ಹೀಗಾಗಿ 10,000 ಕೋಟಿ ರೂ. ಎಸ್ಆರ್ ಐಫಂಡ್ ನ 5 ಪಟ್ಟು ಹೆಚ್ಚು ದೊರೆಯುತ್ತದೆ. ಈ ಮೂಲಕ ಎಂಎಸ್ಎಂಇಗಳಲ್ಲಿ ಹೂಡಿಕೆ ಮಾಡಬಹುದಾದ ನಿಧಿಯ ಮೌಲ್ಯ 50,000 ಕೋಟಿ ರೂ. ಆಗಲಿದೆ.
ಆತ್ಮನಿರ್ಭರ ಭಾರತ ಗುರಿಯನ್ನು ತಲುಪುವುದಕ್ಕೆ ಕೊಡುಗೆ ನೀಡಲು ಗ್ರಾಮೀಣ ಆರ್ಥಿಕತೆಗಳಲ್ಲಿ ಉದ್ಯಮಶೀಲತ್ವ ಮನೋಭಾವವನ್ನು ಹುಟ್ಟುಹಾಕುವಲ್ಲಿ ಮತ್ತು ಉದ್ಯೋಗವನ್ನು ಸೃಷ್ಟಿಸುವಲ್ಲಿ ಎಂಎಸ್ಎಂಇಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿವೆ. ಪ್ರಸ್ತುತ ಬಂಡವಾಳ ಕ್ಷೇತ್ರದಲ್ಲಿರುವ ಅಂತರವನ್ನು ಕಡಿಮೆ ಮಾಡಲು ಮತ್ತು ಬೆಳವಣಿಗೆಯ ಬಂಡವಾಳವಾಗಿ ಎಂಎಸ್ಎಂಇಗಳಲ್ಲಿ ಹೂಡಿಕೆ ಮಾಡಲು ಡಾಟರ್ ಫಂಡ್ ಗಳಿಗೆ ಬಂಡವಾಳವನ್ನು ಒದಗಿಸುವ ಮೂಲಕ ಎಂಎಸ್ಎಂಇ ವಲಯಕ್ಕೆ ಹೂಡಿಕೆಯ ಹರಿವನ್ನು ವೇಗಗೊಳಿಸುವ ದಿಸೆಯಲ್ಲಿ ಈ ನಿಧಿ ಗುರಿಯನ್ನು ಹೊಂದಿದೆ.
ಎಸ್ಆರ್ ಐ ಫಂಡ್ ಅಕ್ಟೋಬರ್ 2021 ರಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು ಮತ್ತು ಅಂದಿನಿಂದ 38 ಡಾಟರ್ ಫಂಡ್ ಗಳಿಗೆ ಅನುಮೋದನೆಯನ್ನು ನೀಡಿದ್ದು, 5000 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಎಸ್ಆರ್ ಐ ಫಂಡ್ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ ಕೇವಲ ಒಂದು ವರ್ಷದಲ್ಲಿ ತನ್ನ ಕಾರ್ಪಸ್ ಫಂಡ್ ನ ಗುರಿಯನ್ನು ಶೇ.50 ರಷ್ಟು ಹೆಚ್ಚಿಸಿಕೊಳ್ಳುವ ಬದ್ಧತೆಯನ್ನು ತೋರಿದೆ. ಈ ಮೂಲಕ ಇದು ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಂಡ್ ಗಳಲ್ಲಿ ಒಂದೆನಿಸಿದೆ. ಡಾಟರ್ ಫಂಡ್ ಗಳ ನಿಯೋಜನೆಯ ಮೇಲೆ ಎಸ್ಆರ್ ಐ ಫಂಡ್ ನಿಂದ ಬದ್ಧವಾಗಿರುವ ಫಂಡ್ ಗಳು ಈಗಾಗಲೇ 20,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ 125 ಕ್ಕೂ ಹೆಚ್ಚು ಎಂಎಸ್ಎಂಇಗಳಿಗೆ ಪ್ರಯೋಜನವನ್ನು ನೀಡಿದೆ.
ಎಸ್ಆರ್ ಐ ಫಂಡ್ ನೊಂದಿಗೆ ಎಂಪನೇಲ್ ಮಾಡಲಾಗಿರುವ ಡಾಟರ್ ಫಂಡ್ ಗಳು ಟಾಟಾ ಕ್ಯಾಪಿಟಲ್ ಹೆಲ್ತ್ ಕೇರ್ ಫಂಡ್, ಆವಿಷ್ಕಾರ್ ಇಂಡಿಯಾ ಫಂಡ್, ಎಸ್ ವಿಎಲ್-ಎಸ್ಎಂಇ ಫಂಡ್, ಗಜಾ ಕ್ಯಾಪಿಟಲ್ ಇಂಡಿಯಾ ಫಂಡ್, ಅವಾನ ಸಸ್ಟೇನೇಬಿಲಿಟಿ ಫಂಡ್, ಐಸಿಐಸಿಐ ವೆಂಚರ್ಸ್ ನ ಇಂಡಿಯಾ ಅಡ್ವಾಂಟೇಜ್ ಫಂಡ್ ಎಸ್5 I, ಓಮ್ನಿವೋರ್ ಅಗ್ರಿಟೆಕ್ ಮತ್ತು ಕ್ಲೈಮೇಟ್ ಸಸ್ಟೇನೇಬಿಲಿಟಿ ಫಂಡ್ 3, ಫೈರ್ ಸೈಡ್ ವೆಂಚರ್ಸ್ ಇನ್ವೆಸ್ಟ್ ಮೆಂಟ್ ಫಂಡ್ III, ನಾಬ್ವೆಂಚರ್ಸ್ ಫಂಡ್ 1, ಮಹಾರಾಷ್ಟ್ರ ಡಿಫೆನ್ಸ್ ಅಂಡ್ ಏರೋಸ್ಪೇಸ್ ವೆಂಚರ್ ಫಂಡ್ ಇತ್ಯಾದಿಗಳು.
ತನ್ನ ಮೊದಲ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿರುವ ಎಸ್ಆರ್ ಐ ಫಂಡ್ ನಿಂದ ಪರಿಣಾಮಕಾರಿಯಾಗಿ ಹೂಡಿಕೆಯನ್ನು ಪಡೆಯಲು ಡಾಟರ್ ಫಂಡ್ ಗಳಿಗೆ ಪಾರದರ್ಶಕ ಮತ್ತು ಪ್ರಾಮಾಣಿಕ ಕಾರ್ಯವಿಧಾನವನ್ನು ಸ್ಥಾಪಿಸಲು ಅನನ್ಯ ತಂತ್ರಜ್ಞಾನದ ಪ್ಲಾಟ್ ಫಾರಂ ಅನ್ನು ಆರಂಭಿಸುವ ಮೂಲಕ ಎಸ್ಆರ್ ಐ ಫಂಡ್ ತನ್ನ ಕಾರ್ಯಾಚರಣೆಗಳನ್ನು ಮತ್ತಷ್ಟು ವ್ಯವಸ್ಥಿತಗೊಳಿಸಿದೆ. ಈ ಟೆಕ್ ಪ್ಲಾಟ್ ಫಾರ್ಮ್ ಆರಂಭದ ಜೊತೆಗೆ ಎಆರ್ ಐ ಫಂಡ್ ತಡೆರಹಿತ ಮತ್ತು ಪಾರದರ್ಶಕ ಆನ್ ಲೈನ್ ಪ್ಲಾಟ್ ಫಾರ್ಮ್ ಅನ್ನು ಒದಗಿಸುತ್ತಿದೆ. ಇದು ಅರ್ಥಪೂರ್ಣವಾದ ಮದರ್ ಫಂಡ್-ಡಾಟರ್ ಫಂಡ್ ಸಂವಾದಗಳನ್ನು ಸುಗಮಗೊಳಿಸುತ್ತದೆ. ಅದೇರೀತಿ, ಶಾಸನಬದ್ಧ ಮತ್ತು ಆಡಳಿತಾತ್ಮಕ ಅನುಸರಣೆ ಮತ್ತು ವರದಿ ಮಾಡಲು ಸಹ ಸಹಾಯ ಮಾಡುತ್ತದೆ. ಇದು ಫಂಡ್ ನ ಪರಿಣಾಮಕಾರಿ ಕಾರ್ಯಾಚರಣೆಗಳನ್ನು ವೇಗಗೊಳಿಸುತ್ತದೆ.
ಎಸ್ಆರ್ ಐ ಫಂಡ್ ನ ಮೊದಲ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಎನ್ ವಿಸಿಎಫ್ಎಲ್ ನ ಅಧ್ಯಕ್ಷ ಮತ್ತು ಎನ್ಎಸ್ಐಸಿಯ ಸಿಎಂಡಿ ಗೌರಂಗ್ ದೀಕ್ಷಿತ್ ಅವರು, “ಎಸ್ಆರ್ ಐ ಫಂಡ್ ನ ಯಶಸ್ವಿ ಮೊದಲ ವರ್ಷದ ವಾರ್ಷಿಕೋತ್ಸವವು ಎಂಎಸ್ಎಂಇ ವ್ಯವಹಾರಗಳಿಗೆ ಬಂಡವಾಳದ ಕ್ರೋಢೀಕರಣವನ್ನು ವಿಸ್ತರಣೆ ಮಾಡುವ ಮತ್ತು ವೈವಿಧ್ಯಮಯಗೊಳಿಸುವಲ್ಲಿ ಭಾರತ ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸುತ್ತಿದೆ. ಹೆಚ್ಚಿದ ಬಂಡವಾಳ ಹರಿವು ಖಂಡಿತವಾಗಿಯೂ ಉದ್ಯಮಗಳು ತಮ್ಮ ಪೂರ್ಣ ಪ್ರಮಾಣದ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡುತ್ತದೆ. ಅದೇ ರೀತಿ ಎಂಎಸ್ಎಂಇಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಹೊಂದಲು ಸಹಾಯ ಮಾಡುತ್ತದೆ’’ ಎಂದರು.
ಎಸ್ ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ನ ಎಂಡಿ & ಸಿಇಒ ಅಮಿತವ ಚಟರ್ಜಿ ಅವರು ಮಾತನಾಡಿ, “ತನ್ನ ಮೊದಲ ವರ್ಷದ ಕಾರ್ಯಾಚರಣೆಯಲ್ಲಿ ಎಸ್ಆರ್ ಐ ಫಂಡ್ ತನ್ನ ಎಂಪೆನಲ್ಡ್ ಡಾಟರ್ ಫಂಡ್ ಗಳ ಮೂಲಕ ಹವಾಮಾನ, ಕೃಷಿ, ರಕ್ಷಣೆ, ಶಿಕ್ಷಣ, ಫಾರ್ಮಾ ಮತ್ತು ಕೈಗಾರಿಕೆಗಳಂತಹ ವೈವಿಧ್ಯಮಯ ವಲಯಗಳಲ್ಲಿ 125 ಕ್ಕೂ ಹೆಚ್ಚು ಎಂಎಸ್ಎಂಇಗಳಿಗೆ 2300 ಕೋಟಿ ರೂಪಾಯಿಗಿಂತ ಹೆಚ್ಚಿನ ಇಕ್ವಿಟಿ ನಿಧಿಯನ್ನು ಒದಗಿಸಿದೆ’’ ಎಂದು ತಿಳಿಸಿದರು.
ಎಸ್ ಬಿಐಸಿಎಪಿ ವೆಂಚರ್ಸ್ ನ ಎಂಡಿ & ಸಿಇಒ ಸುರೇಶ್ ಕೋಝಿಕೋಟ್ ಅವರು ಮಾತನಾಡಿ, “ಎಸ್ಆರ್ ಐ ಫಂಡ್ ನ ಮೊದಲ ವಾರ್ಷಿಕೋತ್ಸವದಂದು ಈ ರೀತಿಯ ಮೊದಲ ತಂತ್ರಜ್ಞಾನ ಪ್ಲಾಟ್ ಫಾರ್ಮ್ ಅನ್ನು ಆರಂಭಿಸಲು ನಾವು ಸಂತೋಷಪಡುತ್ತೇವೆ. ಟೆಕ್ ಪ್ಲಾಟ್ ಫಾರ್ಮ್ ಆರಂಭವು ಎಸ್ಆರ್ ಐ ಫಂಡ್ ನ ಪ್ರಮಾಣೀಕೃತವಾದ ಅನುಮೋದನೆ ಪ್ರಕ್ರಿಯೆಯನ್ನು ನಿರ್ಮಾಣ ಮಾಡುತ್ತದೆ. ಅದೇ ರೀತಿ ಪ್ರಭಾವದ ಪ್ರಮಾಣವನ್ನು ಗರಿಷ್ಠಗೊಳಿಸಲು ದಕ್ಷತೆಯೊಂದಿಗೆ ಉನ್ನತ ಮಟ್ಟದ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ’’ ಎಂದು ಹೇಳಿದರು.
ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ