Latest

ಅಧಿಕಾರಿಗಳು ವಿನ್ಯಾಸ ಮಾಡುವಾಗ ಏನ್ ಮಾಡ್ತಾ ಇದ್ರಿ? ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಹೇಳಿಕೆ ಬೆನ್ನಲ್ಲೇ ಇದೀಗ ಗುಂಬಜ್ ಮಾದರಿಯ ಬಸ್ ನಿಲ್ದಾಣಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ.

4 ದಿನಗಳಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣ ತೆರವುಗೊಳಿಸುವಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಜಿಲ್ಲಾಡಳಿತಕ್ಕೆ ಸೂಚಿಸಿರುವ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಒಬ್ಬ ಸಂಸದನಾಗಿ ಸಾಮನ್ಯ ಜ್ಞಾನವೂ ಇಲ್ಲ ಎಂದರೆ ಹೇಗೆ? ಅಧಿಕಾರಿಗಳು ವಿನ್ಯಾಸ ಮಾಡುವಾಗ ಏನು ಮಾಡುತ್ತಿದ್ದಿರಿ? ಆಗ ಸುಮ್ಮನಿದ್ದು ಈಗ ವಿವಾದ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಗುಂಬಜ್ ಒಡೆಯುತ್ತೇನೆ ಎನ್ನಲು ಪ್ರತಾಪ್ ಸಿಂಹ ಯಾರು? ಅವರ ಮನೆಯಿಂದ ದುಡ್ಡು ಹಾಕಿ ಬಸ್ ನಿಲ್ದಾಣ ನಿರ್ಮಿಸಿದ್ದಾರಾ? ಅಧಿಕಾರಿಗಳು ಪ್ಲಾನ್ ಸಿದ್ಧಪಡಿಸಿಯೇ ಮಾಡಿದ್ದು. ವಿನ್ಯಾಸ ಮಾಡುವಾಗ ಏನು ಮಾಡುತ್ತಿದ್ದರು? ಈಗ ಗುಂಬಜ್ ಮಾದರಿಯ ಬಸ್ ನಿಲ್ದಾಣ ಒಡೆಯುತ್ತೇನೆ ಎಂದರೆ ಏನರ್ಥ?ಎಂದು ಕಿಡಿಕಾರಿದ್ದಾರೆ.

ಅನಗತ್ಯವಾಗಿ ಅಶಾಂತಿ ವಾತಾವರಣ ನಿರ್ಮಿಸಲು ಪ್ರತಾಪ್ ಸಿಂಹ ಈ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಯಾವಾಗಲೂ ವಿವಾದಗಾನ್ನು ಸೃಷ್ಟಿಸುತ್ತಲೇ ಇರುತ್ತಾರೆ. ಒಬ್ಬ ಸಂಸದನಾದವನಿಗೆ ಜ್ಞಾನವಿರಬೇಕು. ಅಧಿಕಾರಿಗಳು ಪ್ಲಾನ್ ಮಾಡುವಾಗ ನೋಡಿರಲಿಲ್ಲವೇ? ಎಂದು ಗುಡುಗಿದರು.

ನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ ಸಿಗದೇ 5 ವರ್ಷದ ಮಗು ಸಾವು

https://pragati.taskdun.com/5-years-boydeathdog-bite/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button