Kannada NewsKarnataka NewsLatest

ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ ನಲ್ಲಿ ಮಿಂಚಿದ ಬೆಳಗಾವಿಯ ಮಾಸ್ಟರ್ ಸ್ವಿಮ್ಮರ್ಸ್  

ಪ್ರಗತಿವಾಹಿನಿ ಸುದ್ದಿ, ಬೆಳಗಾವಿಬೆಂಗಳೂರಿನ ಕಾರ್ಪೊರೇಷನ್ ಸ್ವಿಮ್ಮಿಂಗ್ ಪೂಲ್, ವಿಜಯನಗರ ಅಕ್ವಾಟಿಕ್ ಸೆಂಟರ್ ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 23ನೇ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್- 2022 ರಲ್ಲಿ  ಬೆಳಗಾವಿಯ ಸ್ವಿಮ್ಮರ್ಸ್ ಕ್ಲಬ್‌ನ ಮಾಸ್ಟರ್ ಈಜುಗಾರರು ಒಟ್ಟು 127 ಚಿನ್ನದ ಪದಕ14 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಅಮೋಘ ಸಾಧನೆಗೈದಿದ್ದಾರೆ.

30-34ರ ವಯೋಮಾನದವರ ವಿಭಾಗದಲ್ಲಿ ಸೋನಾಲಿ ಪಾಟೀಲ್ 4 ಚಿನ್ನ, 2 ಬೆಳ್ಳಿ
75-79ರ ವಿಭಾಗದಲ್ಲಲಿ ಕ್ಷ್ಮಣ್ ಕುಂಬಾರ್ 3 ಚಿನ್ನ,  ರಿದಮ್ ತ್ಯಾಗಿ (40-44) 2 ಚಿನ್ನ, 2 ಬೆಳ್ಳಿ
ಜಗದೀಶ್ ಗಸ್ತಿ (40-44) 1 ಚಿನ್ನ, 4 ಬೆಳ್ಳಿ,  ಅರುಂಧತಿ ಸಖರೆ ( 35-39) 1 ಚಿನ್ನ, 4 ಬೆಳ್ಳಿ
ಬಲವಂತ ಪತ್ತಾರ್ ( 75-79) 1 ಚಿನ್ನ, 2 ಬೆಳ್ಳಿ, 2 ಕಂಚು ಪಡೆದಿದ್ದಾರೆ.

ವಿಜೇತ  ಈಜುಗಾರರು ನವೆಂಬರ್ 25 ರಿಂದ 27 ರವರೆಗೆ ಅಂಬಾಲಾ ಕ್ಯಾಂಟ್‌ನ ವಾರ್ ಹೀರೋಸ್ ಮೆಮೋರಬಲ್ ಸ್ಟೇಡಿಯಂನಲ್ಲಿ ನಡೆಯಲಿರುವ 18 ನೇ ಮಾಸ್ಟರ್ಸ್ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್- 2022 ಕ್ಕೆ ಆಯ್ಕೆಯಾಗಿದ್ದಾರೆ.

ಈ ಈಜುಗಾರರು KLE ಯ ಸುವರ್ಣ JNMC ಈಜುಕೊಳ (ಒಲಿಂಪಿಕ್ ಗಾತ್ರ) ಬೆಳಗಾವಿಯಲ್ಲಿ ತಮ್ಮ ಈಜು ತರಬೇತಿಯನ್ನು ಅಭ್ಯಾಸ ಮಾಡಿದ್ದಾರೆ.  ಉಮೇಶ್ ಕಲಘಟಗಿ, ಅಜಿಂಕ್ಯ ಮೆಂಡ್ಕೆ, ಅಕ್ಷಯ್ ಶೇರೆಗಾರ್, ನಿತೀಶ್ ಕುಡುಚ್ಕರ್ ಮತ್ತು ಗೋವರ್ಧನ್ ಕಾಕತ್ಕರ್ ಅವರಿಂದ  ಮಾರ್ಗದರ್ಶನ   ಪಡೆಯುತ್ತಿದ್ದಾರೆ.

ಈ ಈಜುಗಾರರ ಸಾಧನೆಗೆ ಡಾ. ಪ್ರಭಾಕರ ಕೋರೆ, ಅವಿನಾಶ ಪೋತದಾರ ಮತ್ತು ಈಜುಗಾರರ ಕ್ಲಬ್ ಬೆಳಗಾವಿಯ ನಮ್ಮ ಸಂಸ್ಥಾಪಕ ಸದಸ್ಯರು ಮಕಿ ಕಪಾಡಿಯಾ ಶ್ರೀಮತಿ ಲತಾ ಕಿತ್ತೂರ ಮತ್ತು ಶ್ರೀ ಸುಧೀರ ಕುಸನೆ, ಶ್ಲಾಘಿಸಿದ್ದಾರೆ.

18 ರಂದು ಬಸಾಪುರದಲ್ಲಿ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button