ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತ ಎಲ್ಲ ಸ್ಮಾರ್ಟ್ ಸಾಧನಗಳಿಗೆ ಯುಎಸ್ ಬಿ ಮಾದರಿಯ ಏಕರೂಪದ ಸಿ ಚಾರ್ಜಿಂಗ್ ಪೋರ್ಟ್ ಬರಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಸರಕಾರ ರಚಿಸಿರುವ ಅಂತರ್ ಸಚಿವಾಲಯದ ಕಾರ್ಯಪಡೆಯ ಸಭೆಯಲ್ಲಿ ಚಾರ್ಜಿಂಗ್ ಪೋರ್ಟ್ ತಯಾರಿಕೆ ಪಾಲುದಾರರು ಒಮ್ಮತಕ್ಕೆ ಬಂದ ಬಳಿಕ ಎಲ್ಲ ಸ್ಮಾರ್ಟ್ ಸಾಧನಗಳಿಗಾಗಿ ಯುಎಸ್ ಬಿ ಮಾದರಿಯ ಸಿ ಚಾರ್ಜಿಂಗ್ ಪೋರ್ಟ್ ಬಳಕೆಗೆ ತೀರ್ಮಾನಿಸಲಾಗಿದೆ ಎಂದರು.
ಇನ್ನು ‘ಸ್ಮಾರ್ಟ್ ಫೋನ್‌ಗಳು, ಟ್ಯಾಬ್‌ಗಳು ಮತ್ತು ಲ್ಯಾಪ್‌ಟಾಪ್ ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಚಾರ್ಜಿಂಗ್ ಪೋರ್ಟ್ ಆಗಿ ಯುಎಸ್ ಬಿ ಟೈಪ್ – ಸಿ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಮಧ್ಯಸ್ಥಗಾರರ ನಡುವೆ ವ್ಯಾಪಕ ಒಮ್ಮತ ಮೂಡಿದ್ದು, ಫೀಚರ್ ಫೋನ್‌ಗಳಿಗಾಗಿ ವಿಭಿನ್ನ ಚಾರ್ಜಿಂಗ್ ಪೋರ್ಟ್ ಅನ್ನು ಅಳವಡಿಸಿಕೊಳ್ಳಬಹುದು ಎಂದು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.
ಭಾರತದ ಈ ನಗರದಲ್ಲಿ 11 ವಿದೇಶಿ ತಳಿಯ ನಾಯಿಗಳಿಗೆ ನಿಷೇಧ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ