ಯಮನಕಮರಡಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ; ಯಮನಕಮರಡಿ: ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಯಮನಕಮರಡಿ ಕ್ಷೇತ್ರದಲ್ಲಿ ನಾವು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಗ್ರಾಮದ ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲದಲ್ಲಿ ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್, ನೋಟಬುಕ್ ಹಾಗೂ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ 100 ಕುರ್ಚಿ ಹಾಗೂ ಒಂದು ಸೌಂಡ್ ಸಿಸ್ಟಿಮ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಮ್ಮ ಭಾಗದಲ್ಲಿ ಇತಿಹಾಸದಲ್ಲಿ ಉಳಿಯುವಂತ ಕೆಲಸ ಮಾಡಬೇಕು. ಬರಿ ಅಧಿಕಾರಿಗೋಸ್ಕರ್ ಹಾಗೂ ಶಾಸಕ ಸ್ಥಾನಗೋಸ್ಕರ್ ಕೆಲಸ ಮಾಡೋದಲ್ಲ. ಮಾಡಿರುವ ಅಭಿವೃದ್ಧಿ ಕಾರ್ಯಗಳು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ನಾನು ಯಮನಕಮರಡಿ ಕ್ಷೇತ್ರಕ್ಕೆ ಬರುವ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ ಎಂದರು.
ನಿಜವಾದ ಇತಿಹಾಸ ತಿಳಿದುಕೊಳ್ಳಿ:
ಇರುವ ಇತಿಹಾಸವನ್ನು ಜನತೆಗೆ ಮುಟ್ಟಿಸುವ ಮಹತ್ವದ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆದರೆ ಜನರು ಸುಳ್ಳು ಇತಿಹಾಸವನ್ನು ಬಹು ಬೇಗನೆ ನಂಬುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಜನರು ನಿಜವಾದ ಇತಿಹಾಸದತ್ತ ಮುಖ ಮಾಡಿ ವಿಷಯ ಅರ್ಥ ಮಾಡಿಕೊಳ್ಳುವತ್ತ ಮುಂದಾಗಬೇಕು ಎಂದು ಕರೆ ನೀಡಿದರು.
ಈಗಾಗಲೇ ಮಕ್ಕಳಿಗೆ ಅನುಕೂಲವಾಗಲೆಂದು ಕ್ಷೇತ್ರದ ವಿವಿಧ ಗ್ರಾಮಗಲ್ಲಿ ಪ್ರೌಢಶಾಲೆಗಳನ್ನು ನಿರ್ಮಿಸಲಾಗಿದೆ. ಸದ್ಯ ಪದವಿ ಕಾಲೇಜು ಅವಶ್ಯವಿರುವದರಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಯತ್ತ ಬೆಳಕು ಚೆಲ್ಲುವ ಕಾರ್ಯ ನಡೆಯುವ ಭರವಸೆ ನೀಡಿದ ಅವರು, ಹಿಂದೆ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆದಾಗ ಮಂತ್ರಿಗಳು ಹಾಗೂ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿ ನೋಡಲು ಯಮನಕಮರಡಿಗೆ ಆಗಮಿಸಿದ್ದರು. ಇಲ್ಲಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ನಮಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಮೆಚ್ಚುಗೆ ಬರಲು ಗ್ರಾಮಸ್ಥರ ಹಾಗೂ ಗ್ರಾಮದ ಹಿರಿಯರ ಸಹಕಾರ ಹಾಗೂ ಸಂಘಟಿತ ಪ್ರಯತ್ನವೇ ಕಾರಣವಾಗಿದೆ ಎಂದರು.
ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರೆ ಜೀವನದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ. ಅದ್ದರಿಂದ ವಿದ್ಯಾರ್ಥಿಗಳು ಇಂತಹ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ಸ್ವೀಕರಿಸುವ ಮೂಲಕ ಮುಂದಿನ ಶಿಕ್ಷಣದಲ್ಲಿ ಇನ್ನು ಹೆಚ್ಚಿನ ಅಂಕಗಳನ್ನು ಗಳಿಸಿ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
ಇದೇ ವೇಳೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ನೋಟಬುಕ್ ವಿತರಿಸಿದರು. ಅಲ್ಲದೇ ಮಹಾವಿದ್ಯಾಲಯಕ್ಕೆ 100 ಕುರ್ಚಿ ಹಾಗೂ ಒಂದು ಸೌಂಡ್ ಸಿಸ್ಟಿಮ್ ವಿತರಿಸಿದರು. ನಂತರ ವೇದಿಕೆ ಮೇಲಿರುವ ಗಣ್ಯರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಸನ್ಮಾನಿಸಿದರು.
ಈ ವೇಳೆ ಹುಣಸಿಕೊಳ್ಳಮಠದ ಗುರು ರಾಚೋಟಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯಮನಕಮರಡಿ ಗ್ರಾಪಂ ಅಧ್ಯಕ್ಷೆ ವಂದನಾ ತುಬಚಿ, ಈರಣ್ಣಾ ಬಿಸಿರೊಟ್ಟಿ, ಗ್ರಾಪಂ ಸದಸ್ಯ ಓಂಕಾರ ತುಬಚಿ, ಅಸ್ಲಂ ಪಖಾಲಿ, ರವಿ ಚಿನ್ರಾಳೆ, ಶಿವಶಂಕರ ಶಿಳ್ಳಿ, ಕಿರಣ ರಜಪೂತ, ದಸ್ತಗೀರ್ ಬಸ್ಸಾಪುರೆ, ಶೌಕತ್ ಖಾಜಿ, ರಾಜು ಮಾರ್ಯಾಳಿ, ಫಜಲ್ ಮಕಾಂದಾರ ಸೇರಿದಂತೆ ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲದ ನಿರ್ಧೇಶಕರು ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಇದ್ದರು.
ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಬೆಳಗಾವಿ ಜಿಲ್ಲಾ ಅಭಿಯಾನಕ್ಕೆ ಚಾಲನೆ
https://pragati.taskdun.com/vhpbelagavi-abhiyanauttara-karnataka/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ