Latest
ವೋಟರ್ ಐಡಿ ಗೋಲ್ ಮಾಲ್; ಮುಖ್ಯಸ್ಥರಿಬ್ಬರು ನಾಪತ್ತೆ; ಪತ್ನಿಯರು ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೋಟರ್ ಐಡಿ ಅಕ್ರಮಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಹಾಗೂ ಕೃಷ್ಣೇ ಗೌಡ ನಾಪತ್ತೆಯಾಗಿದ್ದು, ಇದೀಗ ಪೊಲೀಸರು ಅವರ ಪತ್ನಿಯರನ್ನು ವಶಕ್ಕೆ ಪಡೆದಿದ್ದಾರೆ.
ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಪತ್ನಿ ಐಶ್ವರ್ಯ ಚಿಲುಮೆ ಸಂಸ್ಥೆಯ ನಿರ್ದೇಶಕಿ ಆಗಿದ್ದು ಪ್ರಸ್ತುತ ಐಶ್ವರ್ಯ ಹಾಗೂ ದಾಖಲೆಗಳನ್ನು ಟಿ.ಬೇಗೂರು ತೋಟದ ಮನೆಗೆ ಸಾಗಿಸಿದ್ದ ಕೃಷ್ಣೇ ಗೌಡ ಅವರ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೋಟರ್ ಐಡಿ ಪರೀಷ್ಕರಣೆ ಹೆಸರಲ್ಲಿ ಚಿಲುಮೆ ಸಂಸ್ಥೆ ಅಕ್ರಮವೆಸಗಿರುವುದು ಕಂಡುಬಂದಿದ್ದು, ಬಿಬಿಎಂಪಿ ದೂರು ಆಧರಿಸಿ ನಿನ್ನೆ ಹಲಸೂರು ಗೇಟ್ ಪೊಲೀಸರು ಚಿಲುಮೆ ಸಂಸ್ಥೆಯ ನಾಲ್ವರನ್ನು ವಶಕ್ಕೆ ಪಡೆದಿದ್ದರು. ಇಂದು ಮತ್ತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್
https://pragati.taskdun.com/d-k-shivakumarreactionvoter-id-scam/




