Latest

ಬಿ.ಬಿ.ಎಂ.ಪಿ ಮತದಾರರ ಪರಿಷ್ಕರಣೆ ಕುರಿತು ಸತ್ಯಾಂಶಗಳು – ಸಿಎಂ ಕಚೇರಿಯಿಂದ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮತದಾರರ ಪಟ್ಟಿ ಪರಿಷ್ಕರಣೆ ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಸ್ಪಷ್ಟೀಕರಣಗಳನ್ನು ನೀಡಿದ್ದಾರೆ.
ಆರೋಪ 1. ಕಾಂಗ್ರೇಸ್‌ ಮತದಾರರನ್ನು ಗುರಿಯಾಗಿಸಿ ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ:
 ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ಪರಿಷ್ಕರಣೆಯ ಯಾವುದೇ ಜವಾಬ್ದಾರಿಯನ್ನು ನೀಡಿರುವುದಿಲ್ಲ, ಕೇವಲ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಆದೇಶ ನೀಡಲಾಗಿರುತ್ತದೆ.
 ಭಾರತ ಚುನಾವಣಾ ಆಯೋಗವು ನೀಡಿದ PSE ದತ್ತಾಂಶ ಮತ್ತು ಸ್ವೀಕೃತಗೊಂಡ ಅರ್ಜಿಗಳನ್ನು ಪರಿಗಣಿಸಿ, ಸರ್ಕಾರಿ ಅಧಿಕಾರಿಗಳು ಮನೆ-ಮನೆ ಬೇಟಿ ನೀಡಿ, ಒದಗಿಸಿದ ವರದಿಯನ್ನು ಆಧರಿಸಿ ಮತದಾರರನ್ನು ಕೈಬಿಡಲಾಗಿರುತ್ತದೆ.
 ಆದರೆ ವಾಸ್ತವವಾಗಿ, 2017ರಲ್ಲಿ ಅಂದಿನ ಸಿದ್ದರರಾಮಯ್ಯನವರ ಕಾಂಗ್ರೇಸ್‌ ಸರ್ಕಾರವು ಚಿಲುಮೆ ಸಂಸ್ಥೆಗೆ ಮತದಾರರ ಪರಿಷ್ಕರಣೆ ಕಾರ್ಯವನ್ನು ಹಾಗೂ ಕೆಲವು ಕಡೆ ಬಿ.ಎಲ್.ಓ ಗಳನ್ನೂ ಕೂಡ ಭರ್ತಿಮಾಡಿಕೊಳ್ಳುವ ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನೂ ಕಾನೂನು ಬಾಹಿರವಾಗಿ ನೀಡಲಾಗಿರುತ್ತದೆ.
 ತಾವು ಮಾಡಿರುವ, ತಮ್ಮ ಅವಧಿಯಲ್ಲಿ ಮಾಡಿರುವ ಕಾನೂನು ಬಾಹಿರ ಚಟುವಟಿಕೆಯನ್ನು/ಕಾರ್ಯವನ್ನು ಇಂದಿನ ನಮ್ಮ ಸರ್ಕಾರದ ಮೇಲೆ ಸುಲ್ಳು ಆರೋಪ ಮಾಡುತ್ತಿರುವುದು, ಭೂತದ ಬಾಯಿಯಲ್ಲಿ ಭಗವದ್ಗೀತೆ ಹೇಳಿದಂತಿದೆ.
ಆರೋಪ 2. ಚಿಲುಮೆ – ಬಿ.ಜೆ.ಪಿ ಅನುಮತಿ ನೀಡಿದ ಸಂಸ್ಥೆ:
 ಚಿಲುಮೆ ಸಂಸ್ಥೆಯನ್ನು ಚುನಾವಣಾ ಪೂರ್ವ ತಯಾರಿ ಪ್ರಕ್ರೀಯೆಯಲ್ಲಿ ಮೊದಲು ಪರಿಚಯಿಸಿದ್ದು, ಕ್ರಾಂಗ್ರೇಸ್‌ ಆಡಳಿತ ಅವಧಿಯಲ್ಲಿ, ಶ್ರೀ ಸಿದ್ದರಾಮಯ್ಯನವರೇ ಸಿ.ಎಂ. ಆಗಿದ್ದರು ಎನ್ನುವುದು ವಿಪರ್ಯಾಸದ ಸಂಗತಿ.
 ಪರಿಷ್ಕರಣೆ ಕಾರ್ಯವು ಸಂಪೂರ್ಣವಾಗಿ ಸರ್ಕಾರಿ ಅಧಿಕಾರಿಗಳು ಕೈಗೊಳ್ಳಬೇಕಾದ ಕಾರ್ಯವಾಗಿದ್ದಾಗ್ಯೂ, ಚಿಲುಮೆ ಸಂಸ್ಥೆ ಅಂದಿನ ಸರ್ಕಾರ ನೀಡಿರುವುದು ಅಕ್ರಮವಾಗಿರುತ್ತದೆ.
 ಇದೇ ಸಿದ್ದರಾಮಯ್ಯನವರ ಅವಧಿಯಲ್ಲಿ, ದಿನಾಂಕ: 15.09.2017ರಂದು ಕೆ.ಆರ್.‌ ಪುರ ತಹಶೀಲ್ದಾರ್‌ರವರು ಚಿಲುಮೆ ಟ್ರಸ್ಟ್‌ಗೆ ನೀಡಿರುವ ಆದೇಶದಲ್ಲಿ, ಮತದಾರರ ಪರಿಷ್ಕರಣೆ ಕಾರ್ಯಕ್ಕೆ ಚಿಲುಮೆ ಸಂಸ್ಥೆಯು ಬಿ.ಎಲ್.ಓ ಗಳ ಭರ್ತಿಮಾಡಿಕೊಂಡು ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನೂ ಸಹ ಕಾನೂನು ಬಾಹಿರವಾಗಿ ನೀಡಲಾಗಿರುತ್ತದೆ. ಅದಲ್ಲದೆ, ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನೂ ಕೂಡ ಚಿಲುಮೆ ಸಂಸ್ಥೆಗೆ ಕಾನೂನು ಬಾಹಿರವಾಗಿ ಅಧಿಕಾರನ್ನು ನೀಡಲಾಗಿರುತ್ತದೆ.
ಆರೋಪ 3. ಕಾಂಗ್ರೇಸ್‌ ಶಾಸಕರ ಕ್ಷೇತ್ರಗಳನ್ನು ಗುರಿಯಾಗಿಸಿ ಹೆಚ್ಚು ಮತದಾರರನ್ನು ಕೈಬಿಡಲಾಗುತ್ತಿದೆ.
 ಶುದ್ಧ ಸುಳ್ಳು.
 ಉದಾ: ಬಿ.ಬಿ.ಎಂ.ಪಿ ವ್ಯಾಪ್ತಿಯ ೨೮ ಕ್ಷೇತ್ರಗಳ ಪೈಕಿ ಅತೀ ಕಡಿಮೆ ಮತದಾರರನ್ನು ಕೈಬಿಟ್ಟ ೫ ಕ್ಷೇತ್ರಗಳ ಪೈಕಿ ೩ ಕ್ಷೇತ್ರಗಳು ಕಾಂಗ್ರೇಸಿನವಾಗಿರುತ್ತದೆ.
 ಕಾಂಗ್ರೇಸ್‌ ಆರೋಪಿಸುತ್ತಿರುವ ಶಿವಾಜಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇವಲ 14,737 ಮತದಾರರನು ಕೈಬಿಡಲಾಗಿದ್ದು, ಕೆ.ಆರ್.‌ ಪುರಂ ಕ್ಷೇತ್ರದಲ್ಲಿ 45,985 ಮತದಾರರನ್ನು ಕೈಬಿಡಲಾಗಿರುತ್ತದೆ.
 ಈ ರೀತಿಯಲ್ಲಿ, ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರದ ವಿವರವನ್ನು ಗಮನಿಸಬಹುದಾಗಿದೆ.
ಆರೋಪ 4. ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನೀಡಲಾಗಿರುತ್ತದೆ.
 ಸಂಪೂರ್ಣ ಸುಳ್ಳು.
 ೨೦೧೭-೧೮ನೇ ಸಾಲಿನಲ್ಲಿ ಅಂದಿನ ಕಾಂಗ್ರೇಸ್‌ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆಗೆ ಬಿ.ಬಿ.ಎಂ.ಪಿ ಅಧಿಕಾರಿಗಳೇ ನಿರ್ವಹಿಸಬೇಕಾದ ಮತದಾರರ ಪರಿಷ್ಕರಣೆಯನ್ನು ಚಿಲುಮೆ ಸಂಸ್ಥೆ ನೀಡಿರುವುದು ದಾಖಲೆಗಳಿಂದ ಸಾಬೀತಾಗಿದೆ.
 ಪ್ರಸ್ತುತ 2022-23ನೇ ಸಾಲಿನಲ್ಲಿ ಚಿಲುಮೆ ಸಂಸ್ಥೆಗೆ ಕೇವಲ ಮತದಾರರ ಜಾಗೃತಿ ಕಾರ್ಯಕ್ರಮದ ಕೆಲಸವನ್ನು ನೀಡಲಾಗಿರುತ್ತದೆ.
 ಸಂಸ್ಥೆ ವತಿಯಿಂದ ಯಾವುದಾದರೂ ನಿಯಮ ಉಲ್ಲಂಘನೆಯಾಗಿರುವ ಅಂಶ ಮೇಲ್ನೋಟಕ್ಕೆ ಕಂಡುಬಂದ ತಕ್ಷಣ, ಸಂಸ್ಥೆಯನ್ನು ವಜಾ ಗೊಳಿಸಿ, 17.11.2022 ರಂದು ಪೊಲೀಸ್‌ ದೂರು ನೀಡಿ, ತೀಕ್ಷ್ಣವಾಗಿ ಕ್ರಮ ಕೈಗೊಳ್ಳಲಾಗಿದೆ.
 ಇದೇ ಸಿದ್ದರಾಮಯ್ಯನವರ ಅವಧಿಯಲ್ಲಿ, ದಿನಾಂಕ: 15.09.2017ರಂದು ಕೆ.ಆರ್.‌ ಪುರ ತಹಶೀಲ್ದಾರ್‌ರವರು ಚಿಲುಮೆ ಟ್ರಸ್ಟ್‌ಗೆ ನೀಡಿರುವ ಆದೇಶದಲ್ಲಿ, ಮತದಾರರ ಪರಿಷ್ಕರಣೆ ಕಾರ್ಯಕ್ಕೆ ಚಿಲುಮೆ ಸಂಸ್ಥೆಯು ಬಿ.ಎಲ್.ಓ ಗಳ ಭರ್ತಿಮಾಡಿಕೊಂಡು ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನೂ ಸಹ ಕಾನೂನು ಬಾಹಿರವಾಗಿ ನೀಡಲಾಗಿರುತ್ತದೆ.
ಆರೋಪ 5. ಬೆಂಗಳೂರಿನಲ್ಲಿ ೨೭ ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
 ಹಸೀ ಸುಳ್ಳು.
 ಭಾರತ ಚುನಾವಣಾ ಆಯೋಗವು ನೀಡಿದ PSE ಸಂಶಯಾಸ್ಪದ 12,13,644 ಮತದಾರರ ಪಟ್ಟಿಯಿಂದ 6.73 ಲಕ್ಷ ಮತದಾರರನ್ನು ಮಾತ್ರ ಕೈಬಿಡಲಾಗಿದ್ದು, ಇದರ ಅರ್ಥ ಅವರ ಮತದಾನದ ಹಕ್ಕನ್ನು ಕಸಿದು ಕೊಳ್ಳುವುದಲ್ಲ, ಬದಲಿಗೆ ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾನ ಮಾಡುವ ದುರುದ್ಧೇಶಕ್ಕೆ ಕೊನೆಗಾಣಿಸಲು, ದೇಶಾದ್ಯಂತ ಈ ಕ್ರಮವನ್ನು ಚುನಾವಣಾ ಆಯೋಗ ಕೈಗೊಂಡಿದೆ. ಮೇಲ್ಕಂಡ ಕಾರಣದಿಂದ ರಾಜ್ಯದಲ್ಲಿ ಸುಮಾರು 16 ಲಕ್ಷ ಹಾಗೂ ದೇಶಾದ್ಯಂತ ಈವರೆಗೆ 1.02 ಕೋಟಿ ಹೆಸರನ್ನು ಕೈಬಿಡಲಾಗಿದೆ.
 ಹಾಗೂ, ಚುನಾವಣಾ ಆಯೋಗವು ಈಗ ಪ್ರಚುರಪಡಿಸಿರುವ ಬಿ.ಬಿ.ಎಂ.ಪಿ ಕರಡು ಮತದಾರರ ಪಟ್ಟಿಯಲ್ಲಿನ ನ್ಯೂನತೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಂತರ ಆಕ್ಷೇಪಣೆ ಪರಿಗಣಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆದ್ದರಿಂದ, ಕಾಂದ್ರೇಸ್‌ ಪಕ್ಷವು ಅರ್ಹ ಮತದಾರರ ಹಕ್ಕನ್ನು ಕಸಿದುಕೊಂಡಿದೆ ಎಂಬುದಕ್ಕೆ ಯಾವುದೇ ಅರ್ಥ ಇಲ್ಲ.
 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇರುವುದೇ, ಒಟ್ಟು 91,15,805 ಮತದಾರರು, ಇದರಲ್ಲಿ ೨೭ ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂಬ ಆರೋಪ ಅತ್ಯಂತ ನಿರಾಧಾರ.
 ಆದರೆ, ಬಿ.ಬಿ.ಎಂ.ಪಿ ಇಂದ ಕೈಬಿಡಲಾಗಿರುವ ಮತದಾರರ ಸಂಖ್ಯೆ ಕೇವಲ 6.73 ಲಕ್ಷ ಮಾತ್ರ. ರಾಜ್ಯದಲ್ಲಿ ಒಟ್ಟು ೧೬ ಲಕ್ಷ.

,*ಮತದಾರರ ಪರಿಷ್ಕರಣೆಗೆ ಬಿ.ಬಿ.ಎಂ.ಪಿ ತೆಗೆದುಕೊಂಡ ಕ್ರಮ*

1. ಚಿಲುಮೆ ಸಂಸ್ಥೆಗೆ ನೀಡಿದ ಅನುಮತಿ ರದ್ದತಿ:  02.11.2022
2. ಮುಖ್ಯ ಚುನಾವಣಾಧಿಕಾರಿಗೆ ತಿಳುವಳಿಕೆ: 04.11.2022
3. BLO ಗುರುತಿನ ಚೀಟಿ ಪ್ರಕರಣದ ದೂರು: 10.11.2022
4. Mahadevapura ERO ವತಿಯಿಂದ ಲೋಕೇಶರವರ ಮೇಲೆ FIR: 15.11.2022
5. ಜನರಿಗೆ ಎಚ್ಚರಿಕೆವಹಿಸಲು ಪತ್ರಿಕಾ ಪ್ರಕಟಣೆ 16.11.2022
6. ಜಿಲ್ಲಾಧಿಕಾರಿ ಹಾಗೂ ಅಪರ ಚುನಾವಣಾಧಿಕಾರಿಯವರ ವರದಿ: 17.11.2022
7. ಚಿಲುಮೆ ಸಂಸ್ಥೆ ಮೇಲೆ FIR: 17.11.2022
ಬಿ.ಬಿ.ಎಂ.ಪಿ ಸ್ವಯಂಪ್ರೇರಿತವಾಗಿ, ಚಿಲುಮೆ ಸಂಸ್ಥೆಗೆ ನೀಡಿದ ಆದೇಶ ರದ್ದತಿ ಹಾಗೂ ತೆಗೆದುಕೊಂಡ ಕ್ರಮ ಮತ್ತು ಪತ್ರಿಕಾ ಪ್ರಕಟಣೆ ನೋಡಿ ಕಾಂಗ್ರೇಸ್‌ ಪತ್ರಿಕಾ ಘೋಷ್ಠಿ ಮಾಡಿರುತ್ತದೆ.
https://pragati.taskdun.com/voter-id-scamd-k-shivakumarpressmeet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button