ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಕಾಂಗ್ರೆಸ್ ಪಕ್ಷ ತಳಸಮುದಾಯಗಳಿಗೆ ರಕ್ಷಣೆ ನೀಡದೇ, ಕೇವಲ ಸುಳ್ಳು ಭರವಸೆಗಳು ನೀಡಿದ್ದಾರೆ. ಇನ್ನು ಮುಂದೆ ಅವರ ಮತಬ್ಯಾಂಕ್ ರಾಜಕಾರಣ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಭಾರತೀಯ ಜನತಾ ಪಕ್ಷದ ಎಸ್.ಟಿ. ಮೋರ್ಚಾ ವತಿಯಿಂದ ಬಳ್ಳಾರಿಯ ಜೀ ವೃತ್ತದ ಬಳಿ ಆಯೋಜಿಸಿರುವ “ ಎಸ್.ಟಿ.ಮೋರ್ಚಾ ಬೃಹತ್ ಸಮಾವೇಶ”ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿದ್ದರಾಮಯ್ಯ ನವರ ‘ಅಹಿಂದ’ ಎಲ್ಲಿದೆ, ಆ ಸಮುದಾಯದವರಿಗೆ ಬಡತನ ನಿರ್ಮೂಲನೆ ಮಾಡಲಿಲ್ಲ, ಸ್ವಾಭಿಮಾನದ ಬದುಕನ್ನು ನೀಡಲಿಲ್ಲ. ಆದರೆ ಇಂದು ಎಸ್ ಸಿ ಎಸ್ ಟಿ ಸಮುದಾಯಗಳು ಜಾಗೃತರಾಗಿದ್ದಾರೆ. ಅವರ ಜೊತೆ ಭಾಜಪ ಸರ್ಕಾರವಿದೆ. ಅವರ ಏಳಿಗೆಗೆ ಸರ್ಕಾರ ಹೆಗಲಿಗೆ ಹೆಗಲು ನೀಡಲಿದೆ ಎಂದರು.
ಕಾಂಗ್ರೆಸ್ ಎಸ್ ಸಿ ಎಸ್ ಟಿಗಳ ಬಡತನ ನಿರ್ಮೂಲನೆಗೆ ಶ್ರಮಿಸಲಿಲ್ಲ :
ಕಾಂಗ್ರೆಸ್ ನವರು 60 ವರ್ಷ ದೇಶವಾಳಿದರು. ಎಸ್ ಸಿ ಎಸ್ ಟಿ ನಮ್ಮ ಬಾಂಧವರು ಎಂದು ಬಾಯಿಮಾತಿನಲ್ಲಿ ಹೇಳಿದರೆ ಹೊರತು , ಅವರ ಬಡತನ ನಿರ್ಮೂಲನೆಗೆ ಶ್ರಮಿಸಲಿಲ್ಲ. ಕಾಂಗ್ರೆಸ್ ನವರು ಎಸ್ ಸಿ , ಎಸ್ ಟಿ ಜನಾಂಗದವರನ್ನು ಕೇವಲ ಮತಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಸಣ್ಣ ಮೈದಾನದಲ್ಲಿ ಕಾರ್ಯಕ್ರಮ ನಡೆಸಿ,ಕಾಂಗ್ರೆಸ್ ನವರ ಭಾರತ್ ಜೋಡೋಯಾತ್ರೆ ಸುನಾಮಿ ಎಬ್ಬಿಸಿದೆ ಎಂದು ಸುಳ್ಳು ಹೇಳುತ್ತಾರೆ. ಎಸ್ ಸಿ ಎಸ್ ಟಿ , ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಭಾಜಪ ಸರ್ಕಾರ ಶ್ರಮಿಸಲಿದ್ದು, ಸ್ವಾಭಿಮಾನದ ಬದುಕನ್ನು ನಿಮ್ಮದಾಗಿಸಲಿದೆ ಎಂದರು. ಈಗ ಪರಿವರ್ತನೆಯ ಕಾಲ ಬಂದಿದೆ ಎಂದರು.
ಭಾಜಪ ಸುನಾಮಿಯಲ್ಲಿ ಕಾಂಗ್ರೆಸ್ ಧೂಳಿಪಟ :
ಬಳ್ಳಾರಿಯಿಂದ ಲೋಕಸಭೆಗೆ ಗೆದ್ದ ಶ್ರೀಮತಿ ಸೋನಿಯಾಗಾಂಧಿಯವರು ಬಳ್ಳಾರಿಗೆ 3 ಸಾವಿರ ಕೋಟಿ ನೀಡುವುದಾಗಿ ತಿಳಿಸಿದ್ದರು. ಆದರೆ ಅವರು ಮೂರು ಕಾಸನ್ನು ನಿಮಗೆ ನೀಡದೇ ಬಳ್ಳಾರಿ ಜನರಿಗೆ ಮೋಸ ಮಾಡಿದರು. ಇದು ಕಾಂಗ್ರೆಸ್ ಪಕ್ಷದ ನೀತಿ. ಕಾಂಗ್ರೆಸ್ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಸರಿಯಾದ ಪಾಠವನ್ನು ಬಳ್ಳಾರಿಯ ಜನ ಕಲಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಸುನಾಮಿಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಕಾಂಗ್ರೆಸ್ ಅವಧಿಯಲ್ಲಿ ಕೇವಲ 8 ಸಾವಿರ ಕೋಟಿ, 15 ಸಾವಿರ ಕೋಟಿ ನಿಗದಿಪಡಿಸಿ, ಕೆಲಸ ಮಾಡಲಿಲ್ಲ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಹಾಲು ಮತದ ಸಮುದಾಯಕ್ಕೆ ನ್ಯಾಯ ನೀಡಲಿಲ್ಲ. ಕೇವಲ ಬಾಯಿಮಾತಿನಲ್ಲಿ ಸಾಮಾಜಿಕ ನ್ಯಾಯವೆನ್ನುತ್ತಾರೆ ಎಂದರು.
ತಳಸಮುದಾಯದವರಿಗೆ ಸ್ವಾಭಿಮಾನದ ಬದುಕು ನೀಡಿದೆ :
ಎಸ್ ಸಿ ಸಮುದಾಯಕ್ಕೆ 15 ರಿಂದ 17 % ಹಾಗೂ ಎಸ್ ಟಿ ಸಮುದಾಯಗಳಿಗೆ 3 ರಿಂದ 7 % ಮೀಸಲಾತಿ ಹೆಚ್ಚಳ ಸಂವಿಧಾನಬದ್ಧವಾದ ನಿರ್ಧಾರವಾಗಿದ್ದು, ತಳಸಮುದಾಯದವರಿಗೆ ಸ್ವಾಭಿಮಾನದ ಬದುಕನ್ನು ನೀಡಿದೆ ಎಂದು ತಿಳಿಸಿದರು.
ಅವರು ಇಂದು ಭಾರತೀಯ ಜನತಾ ಪಕ್ಷದ ಎಸ್.ಟಿ. ಮೋರ್ಚಾ ವತಿಯಿಂದ ಬಳ್ಳಾರಿಯ ಜೀ ವೃತ್ತದ ಬಳಿ ಆಯೋಜಿಸಿರುವ “ ಎಸ್.ಟಿ.ಮೋರ್ಚಾ ಬೃಹತ್ ಸಮಾವೇಶ”ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎನ್ನುವ ಮೂಲಕ ಇಡೀ ಭಾರತವನ್ನು ಒಗ್ಗೂಡಿಸಿದ್ದಾರೆ. ಏಕ್ ಭಾರತ ,ಶ್ರೇಷ್ಠ ಭಾರತ ಎಂದು ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಿದ್ದಾರೆ. ತಳಸಮುದಾಯದವರಿಗೆ ಸ್ವಾಭಿಮಾನದ ಬದುಕನ್ನು ನೀಡಲು ಸರ್ಕಾರ, ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳದ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.
ಸಾಮಾಜಿಕ ನ್ಯಾಯ ಒದಗಿಸಿದ ಸರ್ಕಾರದ ಯೋಜನೆಗಳು :
ಸರ್ಕಾರ ಎಸ್ ಸಿ ಎಸ್ ಟಿ ಸಮುದಾಯಗಳಿಗೆ 28 ಸಾವಿರಕ್ಕೂ ಹೆಚ್ಚಿನ ಅನುದಾನವನ್ನು ನೀಡಿದೆ. ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಿಗೆ 6 ಸಾವಿರ ಕೋಟಿ ರೂ. ನೀಡಲಾಗಿದೆ. ಎಸ್ ಟಿ ಸಮುದಾಯಕ್ಕೆ ಪ್ರತ್ಯೇಕ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು. ಹಾಲು ಮತದ ಸಮುದಾಯಕ್ಕೆ ನ್ಯಾಯ ಒದಗಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಗಿನೆಲೆ ಅಭಿವೃದ್ಧಿ ಅನುದಾನ ನೀಡಿದರು. ವಾಲ್ಮೀಕಿ ಜಯಂತಿಯನ್ನು ಘೋಷಣೆ ಮಾಡಿದರು. ಸಾಮಾಜಿಕ ನ್ಯಾಯವನ್ನು ನಮ್ಮ ಸರ್ಕಾರ ಅಕ್ಷರಶ: ನೀಡಿದೆ. ಎಸ್ ಸಿ ಎಸ್ ಟಿ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬ ಆಶಯದೊಂದಿದೆ ನಮ್ಮ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. 100 ಅಂಬೇಡ್ಕರ್ ಹಾಸ್ಟೆಲ್ ಗಳು, 50 ಕನಕದಾಸ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುತ್ತಿದೆ. ಐದು ಲಕ್ಷ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ಐದು ಲಕ್ಷ ಯುವಕರಿಗೆ ವಿವೇಕಾನಂದ ಯುವಶಕ್ತಿ ಯೋಜನೆಗಳ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದರು.
ವಾಲ್ಮೀಕಿ ನಮ್ಮ ಸರ್ಕಾರಕ್ಕೆ ಸ್ಪೂರ್ತಿ:
ವಾಲ್ಮೀಕಿ ರಚಿಸಿದ ರಾಮಾಯಣ, ಪವಿತ್ರ ಧರ್ಮಗ್ರಂಥಗಳಲ್ಲಿ ಒಂದು. ವಾಲ್ಮೀಕಿಯವರು ನಮಗೆ ಸ್ಪೂರ್ತಿ. ದೇಶವನ್ನು ಕಟ್ಟುವ ಕೆಲಸವನ್ನು ವಾಲ್ಮೀಕಿ ಸಮುದಾಯದವರು ಮಾಡಬೇಕು. ಮೊಘಲರನ್ನು ಹಿಮ್ಮೆಟ್ಟಿಸಿದ್ದು, ಈ ಸಮುದಾಯದ ವೀರ ನಾಯಕರು. ವೀರ ಮದಕರಿ, ಏಕಲವ್ಯ,ಬೇಡರ ಕಣ್ಣಪ್ಪ ಎಲ್ಲರೂ ವಾಲ್ಮೀಕಿ ಕುಲವನ್ನು ಶ್ರೇಷ್ಟಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಾರಿಗೆ ಹಾಗೂ ಎಸ್ಟಿ ಇಲಾಖೆಗಳ ಸಚಿವ ಬಿ. ಶ್ರೀರಾಮುಲು, ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್, ಪ್ರಭು ಚೌಹ್ವಾಣ್, ಶಾಸಕರಾದ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ರಾಜು ಗೌಡ ಹಾಗೂ ಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಾರಿಗೆ ಹಾಗೂ ಎಸ್ಟಿ ಇಲಾಖೆಗಳ ಸಚಿವ ಬಿ. ಶ್ರೀರಾಮುಲು, ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್, ಪ್ರಭು ಚೌಹ್ವಾಣ್, ಶಾಸಕರಾದ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ರಾಜು ಗೌಡ ಹಾಗೂ ಮತ್ತಿತರರು ಹಾಜರಿದ್ದರು.
ಮಂಗಳೂರಿನಲ್ಲಿ ಬಾಂಬ್ ಸ್ಪೋಟ ಪ್ರಕರಣ: ಈ ಜಾಲವನ್ನು ಸರ್ಕಾರ ಬೇಧಿಸಲಿದೆ ಎಂದ ಸಿಎಂ ಬೊಮ್ಮಾಯಿ
https://pragati.taskdun.com/mangalorebomb-blast-casecm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ