Latest

ಭೂಕಂಪ: ಸಾವಿನ ಸಂಖ್ಯೆ 250ಕ್ಕೆ ಏರಿಕೆ

ಪ್ರಗತಿವಾಹಿನಿ ಸುದ್ದಿ; ಜಕಾರ್ತ್: ಇಂಡೋನೇಷ್ಯಾದ ಜಾವಾದಲ್ಲಿ ಸಂಭವಿಸಿದ ಪ್ರಭಲ ಭೂಕಂಪಕ್ಕೆ ಸಾವನ್ನಪ್ಪಿದವರ ಸಖ್ಯೆ 250ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಇಂಡೊನೇಷ್ಯಾದ ಜಾವಾ ದ್ವೀಪದಲ್ಲಿ ಸಿಯಾಂಜೂರ್ ಬಳಿ ಭೀಕರ ಭೂಕಂಪ ಸಂಭವಿಸಿತ್ತು. ಬೃಹತ್ ಕಟ್ಟಡಗಳು, ಮನೆಗಳು, ಶಾಲೆಗಳು ನೆಲಸಮವಾಗಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 250ಕ್ಕೆ ಏರಿಕೆಯಾಗಿದೆ.

ಜಕಾರ್ತ್ ನ ದಕ್ಷಿಣ ಆಗ್ನೇಯ ಭಾಗದ 75 ಕಿ.ಮೀ ವರೆಗೆ ಭೂಕಂಪ ಸಂಭವಿಸಿದೆ. ಆರಂಭದ 10 ಕೀ.ಮೀ ವ್ಯಾಪ್ತಿಯಲ್ಲಿ ಹೆಚ್ಚು ಸಾವು-ನೋವು ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.6ರಷ್ಟು ದಾಖಲಾಗಿದೆ. ಸಾವುನೋವು ಹೆಚ್ಚಾಗುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Home add -Advt

 

ಭೀಕರ ಅಪಘಾತ; 6 ಭಕ್ತರು ದುರ್ಮರಣ

https://pragati.taskdun.com/minivan-lorryaccident-6-devoteesdeath/

 

Related Articles

Back to top button