Kannada News

ಬೆಂಗಳೂರಿನ ಐಎಂಎ ಜ್ಯುವೆಲರಿಯಲ್ಲಿ ಏನು ನಡೆಯುತ್ತಿದೆ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಇಲ್ಲಿಯ ಶಿವಾಜಿನಗರದ ಪ್ರಸಿದ್ಧ ಐಎಂ ಎಜ್ಯುವೆಲರಿ ಮಾಲಿಕ ಮನ್ಸೂರ್ ನಾಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವ ಆಡಿಯೋ ಒಂದು ಪೊಲೀಸರ ಕೈ ಸೇರಿದೆ.

ಈ ಬೆಳವಣಿಗೆಯಿಂದಾಗಿ ಜ್ಯುವೆಲರ್ ಶಾಪ್ ಮುಂದೆ ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದು, ಹೂಡಿಕೆದಾರರು ಆತಂಕಕ್ಕೊಳಗಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯದ ಅಧಿಕಾರಿಗಳಿಂದ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನನಗೆ ಸಾಕಾಗಿದೆ. ಸ್ಥಳೀಯ ರಾಜಕಾರಣಿಗಳಿಂದಲೂ ನನಗೆ ಕಿರುಕುಳ ಉಂಟಾಗಿದೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ 500 ಕೋಟಿ ರೂ ಮತ್ತು 30 ಸಾವಿರ ಕ್ಯಾರೆಟ್ ವಜ್ರಾಭರಣಗಳನ್ನು ಮಾರಿ ಹೂಡಿಕೆದಾರರಿಗೆ ಹಣ ಕೊಡಿ ಎಂದು ಆಡಿಯೋದಲ್ಲಿ ಹೇಳಿದ್ದಾರೆ.

ಸ್ಥಳೀಯ ರಾಜಕಾರಣಿ ಹಾಗೂ ಉದ್ಯಮಿಯೊಬ್ಬರು ನನ್ನಿಂದ ಹಣ ಪಡೆದಿದ್ದಾರೆ. ಅದನ್ನು ವಾಪಸ್ ಪಡೆದು ಗ್ರಾಹಕರಿಗೆ ಕೊಡಿ ಎಂದೂ ಹೇಳಿದ್ದಾನೆ.

ಲಕ್ಷಾಂತರ ಕೋಟಿ ಹೂಡಿಕೆ ಮಾಡಲಾಗಿದೆ ಎನ್ನುವ ವದಂತಿ ಇದೆ. ಶಾಹಿದ್ ಎನ್ನುವ ವ್ಯಕ್ತಿಯೊಬ್ಬರು ತಾನು 4 ವರ್ಷದ ಹಿಂದೆಯೇ 15 ಲಕ್ಷ ರೂ. ಹಾಕಿದ್ದಾಗಿ, ತನ್ನ ಸೀರಿಯಲ್ ನಂಬರ್ 45 ಸಾವಿರ ಇದೆ ಎಂದೂ ಹೇಳಿದ್ದಾನೆ.

ಒಟ್ಟೂ 1.15 ಲಕ್ಷ ಜನ ಹಣ ತೊಡಗಿಸಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಯಿಂದಾಗಿ ಬೆಂಗಳೂರಿನಲ್ಲಿ ದೊಡ್ಡ ಆತಂಕ ಸೃಷ್ಟಿಯಾಗಿದೆ. ಮನ್ಸೂರ ದೇಶ ಬಿಟ್ಟು ತೆರಳಿದ್ದಾನಾ ಎನ್ನುವ ಅನುಮಾನವೂ ಉಂಟಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button