ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಈ ಹಿಂದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಹೋರಾಟ ಮಾಡಿದ್ದ ಹಿರೇಬಾಗೇವಾಡಿ ಗ್ರಾಮಸ್ಥರು ಈಗ ವಿವಿ ಬೇಡ ಎನ್ನುವ ಹೋರಾಟಕ್ಕೆ ಅಣಿಯಾಗಿದ್ದಾರೆ. ಬೆಳಗಾವಿ ತಾಲುಕಿನ ಹಿರೇಬಾಗೇವಾಡಿ ಗ್ರಾಮದ ಗುಡ್ಡದ ಮಲ್ಲಪ್ಪನ ಬಳಿ ನಿರ್ಮಿಸಲಾಗುತ್ತಿರುವ ಜಾಗೆ ಸ್ಥಳಕ್ಕೆ ಬಂದಿದ್ದ ವಿವಿ ಅಧಿಕಾರಿಗಳು ಮತ್ತು ಬೆಳಗಾವಿ ಎಸಿ ಅವರಿಗೆ ರೈತರು ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ.
ಗುಡ್ಡದ ಮಲ್ಲಪ್ಪನ ಬಳಿ ಇರುವ ಸುಮಾರು ನೂರು ಎಕರೆ ಪ್ರದೇಶದಲ್ಲಿ ರಾಣಿ ಚನ್ನಮ್ಮ ವಿವಿಯವರು ಕಟ್ಟಡ ನಿರ್ಮಿಸುತ್ತಿದ್ದಾರೆ.
ಈ ಸ್ಥಳಕ್ಕೆ ಹೋಗುವುದಕ್ಕಾಗಿ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ವಿವಿಯವರು ರೈತರ ಫಲವತ್ತಾದ ಜಮೀನನ್ನು ಕಬಳಿಕೆ ಮಾಡುತ್ತಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿ ರೈತರು ಈ ರಸ್ತೆ ನಿರ್ಮಾಣಕ್ಕಾಗಿ ೨೦ ಅಡಿ ಅಗಲದ ಬದಲು ಇನ್ನೂ ಹತ್ತಡಿ ಹೆಚ್ಚು ಅಗಲ ಜಮೀನನ್ನು ಬಿಟ್ಟು ಕೊಟ್ಟಿದ್ದಾರೆ, ಆದರೆ ವಿವಿಯವರು ಯಾವುದೇ ಮಾಹಿತಿ ನೀಡದೇ ರೈತರ ಜಮೀನು ಮಧ್ಯದಲ್ಲಿ ಮತ್ತೊಂದು ರಸ್ತೆ ಮಾಡುವುದು ಅಷ್ಟೇ ಅಲ್ಲ ಅಲ್ಲಿ ಬೆಳೆದಿರುವ ಬೆಳೆಯನ್ನು ಜೆಸಿಬಿ ಮೂಲಕ ನಾಶ ಮಾಡುವ ಕೆಲಸ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ,
ಕಳೆದ ಹಲವು ವರ್ಷಗಳಿಂದ ರೈತರು ಉಪಯೋಗಿಸುತ್ತಿರುವ ಕಾಲು ದಾರಿಯನ್ನು ಬಂದ್ ಮಾಡಿ ಬೃಹದಾಕಾರದ ಆವರಣ ಗೋಡೆ ನಿರ್ಮಿಸಿದ್ದಾರೆ, ಜಮೀನು ಕೊಟ್ಟ ರೈತರನ್ನು ಆ ಗೋಡೆ ಆವರಣದೊಳಗೆ ಬಾರದಂತೆ ತಡೆಯುವ ಕೆಲಸವನ್ನು ವಿವಿಯವರು ಮಾಡುತ್ತಿದ್ದಾರೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದವರು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ, ಕಬ್ಬು ಸಾಗಾಟಕ್ಕೂ ಅಡ್ಡಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು,
ಕಳೆದ ಹಲವು ತಿಂಗಳುಗಳಿಂದ ರೈತರು ತಮ್ಮ ಅಳಲನ್ನು ವಿವಿಯ ಅಧಿಕಾರಿಗಳ ಮುಂದೆ ಪ್ರಸ್ಪಾಪ ಮಾಡುತ್ತಿದ್ದರೂ ಯಾವುದೇ ಪ್ರುಯೋಜನವಾಗಿಲ್ಲ . ಈ ಹಿನ್ನೆಲೆಯಲ್ಲಿಂದು ಗುಡ್ವದ ಮಲ್ಲಪ್ಪನ ಸ್ಥಳಕ್ಕೆ ಆಗಮಿಸಿದ್ದ ವಿವಿ ಅಧಿಕಾರಿಯನ್ನು ರೈತರು ತರಾಟೆಗೆ ತೆಗೆದುಕೊಂಡರು.
ರೈತರ ಮೇಲೆ ಇದೇ ರೀತಿ ದೌರ್ಜನ್ಯ ಮುಂದುವರೆಸಿದರೆ ರಾಣಿ ಚನ್ನಮ್ಮ ವಿವಿ ಬೇಡ ಎನ್ನುವ ಹೋರಾಟ ಮಾಡಬೇಕಾದ ಪರಿಸ್ಥಿತಿ ಬರಬಹುದು ಎನ್ನುವ ಎಚ್ಚರಿಕೆ ನೀಡಿದರು, ಆದ್ದರಿಂದ ಇಲ್ಲಿ ತೆಗೆದುಕೊಳ್ಳಲಾಗುವ ಕಾಮಗಾರಿ ಬಗ್ಗೆ ಬ್ಲುಪ್ರಿಂಟ್‌ನ್ನು ರೈತರ ಮುಂದಿಟ್ಟು ಮುಂದಿನ ಕೆಲಸ ಮಾಡಬೇಕು. ಅಲ್ಲಿಯವರೆಗೆ ರಸ್ತೆ ನಿರ್ಮಾಣ ಕಾರ್ಯವನ್ನು ಆರಂಭಿಸಬಾರದು ಎಂದು ಸ್ಪಷ್ಟಪಡಿಸಿದರು.
ರೈತರ ಜಮೀನನ್ನು ಅನ್ಯಾಯವಾಗಿ ಕಬಳಿಸಿ ವಿವಿ ನಿರ್ಮಾಣಕ್ಕೆ ಮುಂದಾದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಮುಂದಾಗುವ ಅನಾಹುತಕ್ಕೆ ಸರ್ಕಾರ ಮತ್ತು ವಿವಿ ಕಾರಣ ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ, ಕಳೆದ ಕೆಲ ದಿನಗಳ ಹಿಂದಷ್ಟೇ ವಿವಿ ದೌರ್ಜನ್ಯದ ಬಗ್ಗೆ ಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಿಎಂ ಜೊತೆ ಚರ್ಚಿಸಿದ ಬೆಳಗಾವಿ ನಿಯೋಗ; ಟೆಕ್ ಪಾರ್ಕ್ ಸೇರಿ ಸಿಕ್ಕಿತು 3 ಪ್ರಮುಖ ಭರವಸೆ
https://pragati.taskdun.com/belgaum-delegation-discussed-with-cm/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ