Latest

ಬಿಜೆಪಿಗರು ಮುಂದೆ ಉಗ್ರರನ್ನೂ ಸೇರಿಸಿಕೊಂಡು ಇವರೇ ನೋಡಿ ನಮ್ಮ ದೇಶದ ನಿಜವಾದ ದೇಶಪ್ರೇಮಿಗಳು ಎನ್ನುತ್ತಾರಾ?; ಹೆಚ್.ಸಿ.ಮಹದೇವಪ್ಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ರೌಡಿ ರಾಜಕೀಯ ಶುರುವಾಗಿದ್ದು, ಆಡಳಿತ ಹಾಗೂ ವಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ.

ರೌಡಿ ಶೀಟರ್ ಗಳು ಬಿಜೆಪಿ ಸೇರ್ಪಡೆ ವಿಚಾರವಾಗಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಹೆಚ್.ಸಿ.ಮಹದೇವಪ್ಪ ಇಂದಿನ ರೌಡಿಗಳೇ ಮುಂದಿನ ಬಿಜೆಪಿ ಮುಖಂಡರು ಎಂದು ಕಿಡಿಕಾರಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಏನೇನೋ ಸಮರ್ಥನೆ ಕೊಟ್ಟು 30-40 ಕೊಲೆ ಮಾಡಿದಂತಹ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿ ನಾಯಕರು, ಮುಂದೆ ಭಯೋತ್ಪಾದಕರನ್ನೂ ಸೇರಿಸಿಕೊಂಡು ಇವರೇ ನೋಡಿ ನಮ್ಮ ದೇಶದ ನಿಜವಾದ ದೇಶಪ್ರೇಮಿಗಳು ಎನ್ನುತ್ತಾರಾ ಎಂಬ ಆತಂಕ ನನ್ನದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಬಿಜೆಪಿಯ ನಾಯಕ ಸಿ.ಟಿ.ರವಿ ಇಸ್ಲಾಮಾಬಾದ್ ನಲ್ಲಿ ನಮ್ಮ ಧ್ವಜ ಹಾರಿಸುತ್ತೇವೆ ಎಂದು ಆಗಾಗ್ಗೆ ಹೇಳುವುದನ್ನು ನೋಡಿದರೆ ಈ ಮೇಲಿನ ಮಾತು ವಾಸ್ತವಕ್ಕೆ ಹತ್ತಿರವಿದೆಯೇನೋ ಅನಿಸುತ್ತದೆ. ಎಷ್ಟೇ ಆದರೂ ಗೋಡ್ಸೆಯಂತಹ ದೇಶಕ್ಕೆ ಮೊದಲ ಭಯೋತ್ಪಾದಕನನ್ನು ನೀಡಿದ ಸಂತತಿ ಅಲ್ಲವೇ? ಇವರಿಂದ ಇನ್ನೇನು ನಿರೀಕ್ಷಿಸಬಹುದು ಎಂದು ಟ್ವೀಟ್ ಮೂಲಕ ಗುಡುಗಿದ್ದಾರೆ.

Home add -Advt

ಶಿರಾಳಕೊಪ್ಪದಲ್ಲಿ ನಿಷೇಧಿತ ಪಿಎಫ್ ಐ ಪರ ಗೋಡೆ ಬರಹ ವಿಚಾರ; ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

https://pragati.taskdun.com/cm-basavaraj-bommairectionshiralakoppapfi/

Related Articles

Back to top button