ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗೋಗಟೆ ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ ಜಾತಿ ವಿವಾದವಾಗಿ ಮಾರ್ಪಟ್ಟಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಗೋಗಟೆ ಕಾಲೇಜಿನಲ್ಲಿ ನಡೆದ ಗಲಾಟೆಯಲ್ಲಿ ಜಾತಿ ಲೇಪನ ಮಾಡುವುದು ಸರಿಯಲ್ಲ. ವಿವಾದಗಳಿಗೆ ಆಸ್ಪದ ನೀಡದೇ ಪೊಲೀಸರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿದೆ. ಪದೇ ಪದೇ ಕನ್ನಡ, ಮರಾಠಿ ಜಗಳ ಆಗಬಾರದು. ಪೊಲೀಸರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕೆಂದು
ಈ ಹಿಂದೆಯೂ ಬೆಳಗಾವಿಯಲ್ಲಿ ಹಿಂದೂ, ಮುಸ್ಲಿಂ ಗಲಾಟೆಯಾಗಿತ್ತು. ಈಗ ಅದು ತಣ್ಣಗಾಗಿದೆ. ಯಾವುದೇ ಒಂದು ವಿಷಯ ದೊಡ್ಡದು ಮಾಡುವುದು ಸರಿಯಲ್ಲ. ಪೊಲೀಸರು ಸಂಯಮದಿಂದ ವರ್ತಿಸಬೇಕು. ಹೋರಾಟಗಾರರ ಮನೆಗೆ ಬೆಂಕಿ ಹಚ್ಚುವುದಾಗಿ ಹೇಳುವ ಪೊಲೀಸರ ನಡೆ ಸರಿಯಿಲ್ಲ ಎಂದರು.
ಸರಕಾರಕ್ಕೆ ಧಮ್ ಇಲ್ಲ:
ಸರಕಾರಕ್ಕೆ ಇಂಥ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳುವ ಅಥವಾ ಯಾವುದೇ ಪ್ರಕರಣದಲ್ಲಿ ಕ್ರಮ ಜರುಗಿಸುವ ಧಮ್ ಇಲ್ಲ. ಇಲ್ಲಿನ ಉಸ್ತುವಾರಿ ಸಚಿವರು, ಶಾಸಕರಿಗೆ ಸರಕಾರಕ್ಕೆ ಹೇಳುವ ಶಕ್ತಿ ಇಲ್ಲ. ಈ ವಿಷಯ ಮಾತ್ರವಲ್ಲ ಬೇರೆ ಬೇರೆ ವಿಷಯದಲ್ಲಿಯೂ ಇದು ಸಾಭೀತಾಗಿದೆ. ಪೊಲೀಸರು ಕೂಡ ನಡೆದಿಉಕೊಂದ ರೀತಿ ಸರಿಯಿಲ್ಲ. ಪೊಲೀಸರೂ ಒಮ್ಮೊಮ್ಮೆ ರಾಂಗ್ ಸೈಡ್ ಹೊಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿಯವರು ರೌಡಿ ಶಿಟರ್ ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ವಿಚಾರವಾಗಿ ಮಾತನಾಡಿದ ಶಾಸಕರು, ಅದು ಅವರ ಪಕ್ಷದ ವಿಚಾರ ನಾವು ಈಬಗ್ಗೆ ಮಾತನಾಡಲ್ಲ ಎಂದರು.
ಮಾಜಿ ಸಚಿವ ಡಿ.ಬಿ.ಇನಾಮದಾರ ಅವರ ಭೇಟಿಯ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಬಿ.ಇನಾಮದಾರ ನಮ್ಮ ಪಕ್ಷದ ನಾಯಕರು,ಮಾಜಿ ಶಾಸಕರು ಪಕ್ಷ ಸಂಘಟನೆ ಸೇರಿದಂತೆ ಸಾಕಷ್ಟು ವಿಷಯದ ಬಗ್ಗೆ ಚರ್ಚೆ ಮಾಡಿದ್ದೇವು. ಅಲ್ಲದೆ, ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಸರ್ವೆಯಲ್ಲಿ ಯಾರ ಹೆಸರು ಬರುತ್ತದೆಯೋ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡುತ್ತೇವೆ. ಬಾಬಾಸಾಹೇಬ ಪಾಟೀಲ ಬಂದರೆ ಅವರದ್ದು, ಡಿ.ಬಿ.ಇನಾಮದಾರ ಅವರುದ್ದು ಬಂದರೆ ಅವರಿಗೆ. ಈಗಾಗಲೇ ಬೆಳಗಾವಿಯ ಎಲ್ಲ ಕ್ಷೇತ್ರದಲ್ಲಿ ಸರ್ವೆ ನಡೆಸಲಾಗುತ್ತಿದೆ. ಎಐಸಿಸಿಯಿಂದ, ಕೆಪಿಸಿಸಿ, ಸಿಎಲ್ ಪಿ ಕಡೆಯಿಂದ ಪ್ರತಿ ಕ್ಷೇತ್ರದಲ್ಲಿ ಸುಮಾರು 10 ಜನ ಆಕಾಂಕ್ಷಿಗಳಿದ್ದಾರೆ ಎಂದು ಹೇಳಿದರು.
ಸವದತ್ತಿ ಮತಕ್ಷೇತ್ರದಲ್ಲಿ ಎಚ್.ಎಂ.ರೇವಣ್ಣ ಟಿಕೆಟ್ ಗಾಗಿ ಅರ್ಜಿ ಹಾಕಿದ್ದು ಅವರಿಗಾಗಿಯೋ ಅಥವಾ ಸಿದ್ದರಾಮಯ್ಯನವರ ಸಲುವಾಗಿಯೋ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅರ್ಜಿ ಹಾಕಲು ಎಲ್ಲರಿಗೂ ಅವಕಾಶ ಇದೆ. ಸವದತ್ತಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕೆಂಬ ಉದ್ದೇಶ ಇದೆ ಎಂದರು.
ಅವರು ಇಲ್ಲಿ ಬರೋಕೆ ಆಗಲ್ಲ. ನಾವು ಅಲ್ಲಿ ಹೋಗೋಕೆ ಆಗಲ್ಲ:
ಮಹಾರಾಷ್ಟ್ರದಲ್ಲಿರುವ ಜತ್, ಅಕ್ಕಲಕೋಟೆಯ ಜನ ಕರ್ನಾಟಕಕ್ಕೆ ಬರುವುದಗಾಗಿ ಹೇಳಿದ್ದಾರೆ. ಅವರು ಇಲ್ಲಿ ಬರೋಕೆ ಆಗಲ್ಲ. ನಾವು ಅಲ್ಲಿ ಹೋಗೋಕೆ ಆಗಲ್ಲ. ಇದು ಕೇವಲ ಚರ್ಚೆಗೆ ಸಿಮೀತವಾಗುತ್ತದೆ. ಒಂದು ಬಾರಿ ವಿಭಜನೆಯಾದರೆ ಅಂತಿಮ ಚರ್ಚೆ. ಈ ಭಾಗದ ಜನರಿಗೆ ಕುಡಿಯು ನೀರು ಕೊಡದೆ ಇರುವುದು ಮಹಾರಾಷ್ಟ್ರದ ರಾಜಕೀಯ ಗಿಮಿಕ್. ಸಚಿವರು ಬೆಳಗಾವಿ ಒಳಗೆ ಬರಲು ಪೊಲೀಸರು ಬಿಡುವುದಿಲ್ಲ. ಅವರನ್ನು ನಿಪ್ಪಾಣಿಯಲ್ಲಿಯೇ ತಡೆ ಹಿಡಿಯುತ್ತಾರೆ ಎಂದರು.
ಇನ್ನು ಸಿದ್ದರಾಮ್ಯನವರ ಸ್ಪರ್ಧೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅದರ ಬಗ್ಗೆ ಅಂತಿಮ ನಿರ್ಧಾರ ಅವರೆ ತೆಗೆದುಕೊಳ್ಳುತ್ತಾರೆ ಎಂದರು. ಪರಿಶಿಷ್ಟ ಸ್ವಾಮೀಜಿ ನೇತೃತ್ವದಲ್ಲಿ ದಲಿತ ಸಿಎಂ ಆಗಬೇಕೆಂಬ ಸಮಾವೇಶ ನಡೆಸುತ್ತಿದ್ದಾರೆ. ಅಹಿಂದ ಸಂಘಟನೆಯನ್ನು ಗಟ್ಟಿಗೊಳಿಸುವುದು ಬಿಜೆಪಿಗೆ ಸಂಬಂಧ ಇಲ್ಲ ಎಂದರು. ಜಾರಕಿಹೊಳಿ ಸಹೋದರರು ಅಹಿಂದ ಸಮಾವೇಶ ಮಾಡುತ್ತಿರುವ ಸುದ್ದಿಗಾರರ ಪ್ರಶ್ನೆಗೆ ನನಗೆ ಕರೆದಿಲ್ಲ. ಕರೆದರೆ ನೋಡುತ್ತೇನೆ ಎಂದರು.
ನಾನು ಯಮಕನಮರಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ನನ್ನ ಸೋಲಿಸಲು ಕಳೆದ ಮೂರು ವರ್ಷದಿಂದ ಬಿಜೆಪಿಯವರು ಐದಾರು ಜನರನ್ನು ಗುರಿ ಮಾಡಿದ್ದಾರೆ. ನಮಗೆ ಬಿಜೆಪಿಯಿಂದ ತೊಂದರೆ ಇಲ್ಲ. ಬಗಲ್ ಮೇ ದುಶ್ಮನ್ ಬಗ್ಗೆ ಕೊಂಚ ಆತಂಕ ಅಷ್ಟೆ ಎಂದು ಹೇಳಿದರು.
ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು; ಮಸಿದಿ ಬಳಿ ಹೈಡ್ರಾಮಾ; ಬಿಗುವಿನ ವಾತಾವರಣ
https://pragati.taskdun.com/shreerangapattanahanumamaladharigalusankeerthana-yatrejamia-masjid/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ