ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂದೋಳ – ನಿಪ್ಷಾಣಿ ರಾಜ್ಯ ಹೆದ್ದಾರಿ 18 ರಸ್ತೆಯಲ್ಲಿ ಗುಲಾ೯ಪುರ ಹತ್ತಿರ ಸಂಭವಿಸಿದ ಇಂದು ಬೆಳಗಿನಜಾವ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಧಾರವಾಡದಿಂದ ಕಪ್ಪಲಗುದ್ದಿ ಗ್ರಾಮಕ್ಕೆ ಹೊರಟದ್ದ ಟಾಟಾ ಟೀಯಾಗೋ ಕಾರ್ ನಂಬರ KA23 N7307 ಹಾಗೂ ಲೋಕಾಪೂರದಿಂದ ಪಣೆ ಕಡೆ ಹೊರಟಿದ್ದ ಎರಟೀಗಾ ಕಾರ್ ನಂಬರ KA.16 N 4256 ನೇದ್ದರ ಮಧ್ಯೆ ಅಪಘಾತ ಸಂಭವಿಸಿದೆ.
ಟಾಟಾ ಟೀಯಾಗೋ ಕಾರನಲ್ಲಿ ಇದ್ದ ದುಂಡಪ್ಪ ಅಡಿವೇಪ್ಪ ಬಡಿಗೇರ (34) ಹಾಗೂ ಸಹೋದರಿ ಬಾಗ್ಯಶ್ರೀ ನವೀನ ಕಂಬಾರ (22) ಸಾಕೀನ ಕಪ್ಪಲಗುದ್ದಿ ಇವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಕೆಲವರು ಗಾಯಗೊಂಡಿದ್ದು, ಅವರನ್ನು ಗೋಕಾಕ ಉಮರಾಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ