ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸೈಕ್ಲೋನಿಕ್ ಚಂಡಮಾರುತ ಮ್ಯಾಂಡೌಸ್ ನಾಳೆ ಡಿಸೆಂಬರ್ 9 ರಂದು ಉತ್ತರ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶವನ್ನು ಪುದುಚೇರಿ ಮತ್ತು ಶ್ರೀಹರಿಕೋಟಾ ನಡುವೆ ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಪದೇಪದೆ ಅಬ್ಬರಿಸುವ ಚಂಡಮಾರುತಗಳಿಗೆ ಒಂದೊಂದು ಕುತೂಹಲಕಾರಿ ಹೆಸರಿಡುವುದು ಸಾಮಾನ್ಯ. ಅಂತೆಯೇ ಈಗ ಅಬ್ಬರಿಸಲಿರುವ ಚಂಡಮಾರುತಕ್ಕೆ ಮ್ಯಾಂಡೌಸ್ ಎಂದು ಹೆಸರಿಟ್ಟವರಾರು? ಏಕೆ? ಎಂಬ ಕುತೂಹಲ ಹಲವರಲ್ಲಿದೆ.
ಇಷ್ಟಕ್ಕೂ ಈ ಚಂಡಮಾರುತಕ್ಕೆ ಮ್ಯಾಂಡೌಸ್ ಎಂದು ಹೆಸರಿಟ್ಟಿದ್ದು ಯುಎಇ. ಅರೇಬಿಕ್ ಭಾಷೆಯಲ್ಲಿ ಮ್ಯಾಂಡೌಸ್ ಎಂದರೆ ನಿಧಿ ಪೆಟ್ಟಿಗೆ ಎಂದರ್ಥ.
ಚಂಡಮಾರುತ ಭೀತಿ; ಭಾರಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ