Breaking News -ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ: ಓರ್ವ ಪೊಲೀಸ್ ವಶಕ್ಕೆ (ವಿಡೀಯೋ ನೋಡಿ)

 

ಪ್ರಗತಿವಾಹಿನಿ ಸುದ್ದಿ, ಪುಣೆ – ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಮುಖಕ್ಕೆ ಮಸಿ ಬಳಿಯಲಾಗಿದೆ.

ಪುಣೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಹೊರಗೆ ಬರುತ್ತಿರುವಾಗ ಎದುರಿನಿಂದ ಬಂದ ವ್ಯಕ್ತಿಯೋರ್ವ ಮುಖಕ್ಕೆ ಮಸಿ ಎರಚಿದ್ದಾನೆ.

 

ಸಚಿವ ಚಂದ್ರಕಾಂತ ಪಾಟೀಲ 2 ದಿನಗಳ ಹಿಂದೆ ಮಹಾತ್ಮಾ ಫುಲೆ ಮತ್ತು ಅಂಬೇಡ್ಕರ್ ಕುರಿತು ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಮಸಿ ಬಳಿಯಲಾಗಿದೆ.

2 ದಿನಗಳ ಹಿಂದೆ ಪೈಠಾಣ ನಗರದಲ್ಲಿ,.  ಮಹಾತ್ಮಾ ಫುಲೆ ಮತ್ತು ಅಂಬೇಡ್ಕರ್ ಅವರು ಶಾಲೆ ನಿರ್ಮಿಸುವಾಗ ಸರಕಾರ ಅವರಿಗೆ ಸಹಾಯ ಮಾಡಿರಲಿಲ್ಲ. ಹಾಗಾಗಿ ಅವರು ಭಿಕ್ಷೆ ಬೇಡಿದ್ದರು ಎನ್ನುವ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ, ದಮ್ಮಿದ್ದರೆ ಮುಂದೆ ಬನ್ನಿ, ನಾನು ಪೊಲೀಸ್ ರಕ್ಷಣೆ ಇಲ್ಲದೆ ಬರುತ್ತೇನೆ ಎಂದು ಚಂದ್ರಕಾಂತ ಪಾಟೀಲ ಸವಾಲೆಸೆದಿದ್ದರು.

ಈ ಹಿನ್ನೆಲೆಯಲ್ಲಿ ಪುಣೆಯ ಪಿಂಪ್ರಿ ಚುಂಚವಾಡದಲ್ಲಿ  ಶನಿವಾರ ಕಾರ್ಯಕ್ರಮಕ್ಕೆ ಬಂದಿದ್ದ ಸಂದರ್ಭದಲ್ಲಿ ಮುಖಕ್ಕೆ ಮಸಿ ಬಳಿಯಲಾಗಿದೆ. ಕೆಲವರು ದಿಕ್ಕಾರ ಕೂಗಿದ್ದಾರೆ. ಈ ಸಂದರ್ಭದಲ್ಲಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಕೆಲವು ದಿನಗಳಿಂದ ಇತಿಹಾಸ ಪುರುಷರ ಕುರಿತು ಬಿಜೆಪಿಯ ಹಲವು ಮುಖಂಡರು ನೀಡುತ್ತಿರುವ ಹೇಳಿಕೆಗಳಿಂದಾಗಿ ಮಹಾರಾಷ್ಟ್ರದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ.

*ಬೆಳಗಾವಿ ಕೆಣಕಿದ ಮಹಾರಾಷ್ಟ್ರಕ್ಕೆ ಮತ್ತೊಂದು ದೊಡ್ಡ ಸಂಕಷ್ಟ* *ಬೇಕಿತ್ತಾ ಇದೆಲ್ಲಾ?*

https://pragati.taskdun.com/another-big-trouble-for-maharashtra-is-this-all-you-need/

ಅಧಿವೇಶನದಂದೇ ಬೆಳಗಾವಿಯಲ್ಲಿ ಮಹಾಮೇಳಾವ್ ಆಯೋಜಿಸಿದ MES; ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಗಡಿ ಉಸ್ತುವಾರಿ ಚಂದ್ರಕಾಂತ್ ಪಾಟೀಲ್, ಶಂಭುರಾಜ್ ದೇಸಾಯಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಆಹ್ವಾನ

https://pragati.taskdun.com/karnataka-maharashtra-border-isuebelagavimesmahamelavdecember-19/

‘ಮಹಾ’ಮಂತ್ರಿಗಳ ಬೆಳಗಾವಿ ಭೇಟಿ ರದ್ದು: ಬಾಲ ಮುದುಡಿಕೊಂಡ ಕಿಡಿ ವೀರರು

https://pragati.taskdun.com/maharashtra-border-incharge-ministers-visit-to-belagavi-cancelled/

ಮಹಾ ಸಚಿವರಿಗೆ ಕೊಗನೋಳಿಯಲ್ಲೇ ತಡೆ : ಕರ್ನಾಟಕ ಸರಕಾರದ ಗಟ್ಟಿ ನಿರ್ಧಾರ?

https://pragati.taskdun.com/stopping-the-maharashtra-minister-in-koganoli-karnataka-governments-tough-decision/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button