ಪ್ರಗತಿವಾಹಿನಿ ಸುದ್ದಿ, ಪಣಜಿ: ಭಾರತದ ಪ್ರಮುಖ ಪ್ರವಾಸೋದ್ಯಮ ತಾಣಗಳಲ್ಲೊಂದಾದ ಗೋವಾ ಈಗ ಪ್ರವಾಸಿಗರಿಗೆ ಮತ್ತೊಂದು ಗೇಟ್ ವೇ ತೆರೆದಿದೆ.
ಇಂದೇ ಗೋವಾ ರಾಜಧಾನಿ ಪಣಜಿ ಬಳಿಯ ಮೋಪಾದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿದ್ಧಗೊಂಡಿದ್ದು ಇಂದೇ ಮಧ್ಯಾಹ್ನ 4 ಗಂಟೆಗೆ ಇದರ ಉದ್ಘಾಟನೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ, ಕೇಂದ್ರ ವಿಮಾನಯಾನ ಮತ್ತು ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧ್ಯ, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, ಕೇಂದ್ರ ಹಡಗುಯಾನ, ಜಲಮಾರ್ಗ ಮತ್ತು ಪ್ರವಾಸೋದ್ಯಮ MoS ಶ್ರೀಪಾದ ನಾಯ್ಕ, ಸಂಸದ ವಿನಯ ತೆಂಡೂಲ್ಕರ್, ಶಾಸಕ ಪ್ರವೀಣ ಅರ್ಲೆಕರ ಭಾಗವಹಿಸುವರು.
ಇದೇ ವೇಳೆ 2300 ಕೋಟಿ ವೆಚ್ಚದ ಜುವಾರಿ ಸೇತುವೆ, 3,860 ಕೋಟಿ ವೆಚ್ಚದ 6 ಹೈವೇಗಳು, 3631.9 ಕೋಟಿ ವೆಚ್ಚದ ಬೆಳಗಾವಿ- ಪಣಜಿ ಹೈವೇ ಅಗಲೀಕರಣ, ಮನೋಹರ ಪರಿಕ್ಕರ್ ಕಾಣಕೋಣ ಬೈಪಾಸ್, ಭಾರತದ 3ನೇ ಅತಿ ಉದ್ದದ ತೂಗು ಸೇತುವೆ ಅಟಲ್ ಸೇತು ಉದ್ಘಾಟನೆಯನ್ನೂ ಪ್ರಧಾನಿ ನೆರವೇರಿಸುವರು.
2023ರ ಜನವರಿ 5 ರಿಂದ ಮೋಪಾ ನೂತನ ಏರ್ ಪೋರ್ಟ್ ನಲ್ಲಿ ವಿಮಾನಗಳ ಲ್ಯಾಂಡಿಂಗ್, ಟೇಕಾಫ್ ಶುರುವಾಗಲಿದೆ. ದೆಹಲಿ ಮತ್ತು ಹೈದರಾಬಾದ್ನಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಜಿಎಂಆರ್ ಇಲ್ಲಿ ಕಾರ್ಯಾಚರಿಸಲಿದೆ. ಇಂಡಿಗೊ ಮತ್ತು ಗೋ ಫಸ್ಟ್ ಬ್ಲಾಕ್ಗಳು ಮೊದಲ ಉಡ್ಡಯನ ಭರಿಸಲಿದ್ದು ಮತ್ತು ಜಿಒಎಕ್ಸ್ ನಿಂದ ಎಂಟು ಭಾರತೀಯ ನಗರಗಳಿಗೆ ವಿಮಾನಗಳ ಸಂಪರ್ಕ ಜಾಲ ಪ್ರಾರಂಭವಾಗಲಿದೆ.
ಉತ್ತರ ಗೋವಾದ ಪೆಡ್ನೆಯಲ್ಲಿರುವ ‘ಮೋಪಾ’ ಪುಟ್ಟ ಗ್ರಾಮ. ಇಲ್ಲಿ ವಿಮಾನ ಸುಸಜ್ಜಿತ ನಿಲ್ದಾಣ ನಿರ್ಮಾಣಗೊಂಡಿದೆ. ಇದು ಪಣಜಿಯಿಂದ ಸುಮಾರು 35 ಕಿಮೀ ಮತ್ತು ದಕ್ಷಿಣ ಗೋವಾದಿಂದ ಸರಿಸುಮಾರು 100 ಕಿಮೀ ದೂರದಲ್ಲಿದೆ. ಅಸ್ಸಾಗಾಂವ, ಸಾಲಿಗಾಂವ ಎರಡೂ 20 ಕಿಲೋಮೀಟರ್ ಅಂತರದಲ್ಲಿವೆ. ವಾಗೇಟರ್ ಮತ್ತು ಬೀಚ್ ನಿಂದಲೇ ಜಾಗತಿಕ ಗಮನ ಸೆಳೆದ ಅಂಜುನಾ ಸುಮಾರು 25ಕಿ.ಮೀ. ದಕ್ಷಿಣದಲ್ಲಿರುವ ಕೋಲಾವಾ ಬೀಚ್ 64 ಕಿಮೀ ದೂರದಲ್ಲಿದೆ.
ಗೋ ಫಸ್ಟ್ 42 ತಡೆರಹಿತ ವಾರದ ವಿಮಾನಗಳನ್ನು ಕಾರ್ಯಾಚರಿಸಲಿದೆ. ಅದರ ಮೊದಲ ವಿಮಾನ ಜನವರಿ 5 ರಂದು ಬೆಳಗ್ಗೆ 8.50 ಕ್ಕೆ ಬೆಂಗಳೂರಿನಿಂದ ಗೋವಾಕ್ಕೆ ಉಡ್ಡಯನ ಆರಂಭಿಸಲಿದೆ. ವಿಮಾನಯಾನವು ಗೋವಾವನ್ನು ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ನೊಂದಿಗೆ ಸಂಪರ್ಕಿಸುತ್ತದೆ. ರೋಸ್ಟರ್ ಪ್ರಕಾರ, ಈಗಿನಂತೆ 2023ರ ಮಾರ್ಚ್ 25 ರವರೆಗೆ ವಿಮಾನಗಳನ್ನು ಸ್ಲಾಟ್ ಮಾಡಲಾಗಿದೆ. ಎಲ್ಲ ವಿಮಾನಗಳೂ ವಾರವಿಡೀ ಸೇವೆ ನೀಡಲಿವೆ.
ಅನುದಾನಿತ ಮಹಿಳಾ ಶಿಕ್ಷಣ ಸಂಸ್ಥೆಗಳ ಮಹಿಳಾ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ
https://pragati.taskdun.com/childcare-leave-facility-for-women-employees-of-aided-womens-educational-institutions/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ