ಪ್ರಗತಿವಾಹಿನಿ ಸುದ್ದಿ, ಮೆಲ್ಬೋರ್ನ್: ಕಳ್ಳಾಟದ ವಾಟ್ಸ್ಆ್ಯಪ್ ಮೆಸೇಜ್ ಒಂದು ಸಹಸ್ರಾರು ಜನರಿಗೆ ಪಂಗನಾಮ ಹಚ್ಚಿದ್ದು ಈವರೆಗೆ ಇದಕ್ಕೆ ಬಲಿಪಶುಗಳಾದವರು ಕಳೆದುಕೊಂಡ ಹಣದ ಮೊತ್ತ ಬೆಚ್ಚಿ ಬೀಳಿಸುವಂತಿದೆ.
2022 ರಲ್ಲಿ ಆಸ್ಟ್ರೇಲಿಯನ್ನರು 7 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಹಣ ಕಳೆದುಕೊಳ್ಳಲು “ಹಾಯ್ ಮೊಮ್..” “ಹಾಯ್ ಡ್ಯಾಡ್..” ಕಳೆದುಕೊಳ್ಳುವಂತೆ ಮಾಡಿದೆ.
ಇಷ್ಟಕ್ಕೂ ಈ ಮೆಸೇಜ್ ರಹಸ್ಯವೇನು? ಎಂಬುದನ್ನು ಅವಲೋಕಿಸಿದಾಗ ಸೈಬರ್ ಕ್ರಿಮಿನಲ್ ಗಳ ಚಾಣಾಕ್ಷತನ ತಲೆದೂಗುವಂತಿದೆ. ಇದರಲ್ಲಿ ವಂಚಕರು ತಮಗೆ “ಸಹಾಯ ಬೇಕು..” ಎಂದು ಹೇಳುವ ಮೂಲಕ ಕುಟುಂಬ ಸದಸ್ಯ ಅಥವಾ ಸ್ನೇಹಿತರಂತೆ ಫೋಸ್ ಕೊಡುವ ಮೆಸೇಜ್ ಕಳುಹಿಸುತ್ತಾರೆ. ತಮ್ಮದೇ ಆದ ಸಮಸ್ಯೆಗಳನ್ನು ಹೇಳಿಕೊಂಡು ಮೆಸೇಜ್ ಪಡೆಯುವವರು ತೀರ ಪರಿಚಯದವರೋ, ಆತ್ಮೀಯರೋ ಎಂಬಂತೆ ಬಿಂಬಿಸುತ್ತಾರೆ.
ಕಂಡವರ ಕಷ್ಟಕ್ಕೆಲ್ಲ “ಅಯ್ಯೋ ಪಾ..ಪ” ಎಂದು ಉಪಕಾರಕ್ಕೆ ಮುಂದಾಗುವವರು ಉಪದ್ರವಕ್ಕೆ ಒಳಗಾಗುತ್ತಾರೆ. ಕಳೆದ ಮೂರು ತಿಂಗಳಲ್ಲಿ ಈ ಮೆಸೇಜ್ ಹಗರಣದ ಬಲಿಪಶುಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ. 2022 ರಲ್ಲಿ ಮಾತ್ರ, ಕನಿಷ್ಠ 11,100 ಬಲಿಪಶುಗಳಿಂದ 7.2 ಮಿಲಿಯನ್ ಲಪಟಾಯಿಸಲಾಗಿದೆ.
* ಗಡಿ ವಿವಾದ ಮಹಾರಾಷ್ಟ್ರಕ್ಕೆ ರಾಜಕೀಯ ವಸ್ತುವಾಗಿದೆ; ಸಿಎಂ ಬೊಮ್ಮಾಯಿ ಕಿಡಿ*
https://pragati.taskdun.com/karnataka-maharashtra-border-issuecm-basavaraj-bommaiamith-shahmeet/
*ನಟಿ ಅಭಿನಯ ಸೇರಿದಂತೆ ಮೂವರಿಗೆ ಜೈಲುಶಿಕ್ಷೆ; ಹೈಕೋರ್ಟ್ ಮಹತ್ವದ ತೀರ್ಪು*
https://pragati.taskdun.com/actress-abhinaya2-yers-jailhigh-courtdowry-harassment-case/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ