ಪ್ರಗತಿವಾಹಿನಿ ಸುದ್ದಿ; ತೆಲಂಗಾಣ: ತೆಲಂಗಾಣದಲ್ಲಿ ದುಷ್ಕರ್ಮಿಗಳು ಟಿಡಿಪಿ ನಾಯಕನ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 6 ಜನರು ಸಜೀವದಹನಗೊಂಡಿರುವ ಘಟನೆ ಪಲ್ನಾಡು ಜಿಲ್ಲೆಯ ಮಾಚರ್ಲದಲ್ಲಿ ನಡೆದಿದೆ.
ಟಿಡಿಪಿ ನಾಯಕನ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಮಾಲೀಕ ಮಾಸು ಶಿವಯ್ಯ (50) ಪತ್ನಿ ಮಾಸು ಪದ್ಮಾ (45) ಪದ್ಮಾ ಅಕ್ಕನ ಮಗಳು ಮೌನಿಕಾ(25) ಇಬ್ಬರು ಮಕ್ಕಳು , ಸಿಂಗರೇಣಿ ಉದ್ಯೋಗಿ ಶಾಂತಯ್ಯ (50) ಸೇರಿ ಆರು ಜನರು ಸಜೀವದಹನಗೊಂಡಿದ್ದಾರೆ.
ಅಕ್ರಮ ಸಂಬಂಧ ಹಿನೆಲೆಯಲ್ಲಿ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಫಲ್ನಾಡಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
*ಮತ್ತೆ ಬೆಳಗಾವಿಗೆ ಬರುವುದಾಗಿ ಹೇಳಿಕೆ ನೀಡಿದ ಮಹಾರಾಷ್ಟ್ರ ಸಚಿವ*
https://pragati.taskdun.com/messhambhuraj-deasibelagavivisit/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ