Kannada NewsLatest

ಅಭಿವೃದ್ಧಿ ಮಾಡುವವರೆಗೆ ಪ್ರವೇಶ ಶುಲ್ಕ ತಡೆಹಿಡಿಯಲು ಶಾಸಕರ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಕೋಟೆ ಕೆರೆಯನ್ನು ಸಮಗ್ರವಾಗಿ ಅಭಿವೃದ್ದಿಪಡಿಸಿದ ನಂತರ ಸಾರ್ವಜನಿಕರಿಂದ ಅವಶ್ಯಕ ಪ್ರವೇಶ ಶುಲ್ಕವನ್ನು ವಸೂಲಿ ಮಾಡುವುದು ಸೂಕ್ತವಾಗಿವಾಗಿದ್ದು, ಅಲ್ಲಿಯವರೆಗೆ ಪ್ರವೇಶ ಶುಲ್ಕ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳಲು ಮಹಾನಗರಪಾಲಿಕೆ ಬೆಳಗಾವಿ ಇವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ  ಪತ್ರ ನೀಡಲಾಗಿದೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ.

ಬೆಳಗಾವಿ ನಗರದ ಕೋಟೆ ಕೆರೆಯಲ್ಲಿ ಸಾರ್ವಜನಿಕರು ಪ್ರವೇಶ ಪಡೆಯಲು ಪ್ರವೇಶ ಶುಲ್ಕವನ್ನು ಮಹಾನಗರಪಾಲಿಕೆಯಿಂದ ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ್ತ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಪತ್ರ ನೀಡಿದ್ದಾರೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button