ದೇಶದ ಶಿಕ್ಷಣ ನೀತಿ ಹಾಳುಗೆಡವಲು ಮೊಘಲರು, ಬ್ರಿಟಿಷರು ಕಾರಣ: ಸಚಿವ ಬಿ.ಸಿ. ನಾಗೇಶ
ಪ್ರಗತಿವಾಹಿನಿ ಸುದ್ದಿ, ನೇಸರಗಿ: ದೇಶದ ಶಿಕ್ಷಣ ನೀತಿ ಹಾಳುಗೆಡವಲು ಮೊಘಲರು ಹಾಗೂ ಬ್ರಿಟಿಷರು ಕಾರಣ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ. ಸಿ.ನಾಗೇಶ ಹೇಳಿದರು.
ಅವರು ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ 1.60 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಲಿರುವ ನೂತನ ಕಾಲೇಜು ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಬ್ರಿಟಿಷರು ಮತ್ತು ಮೊಘಲರು ವ್ಯಾಪಾರಕ್ಕಾಗಿ ದೇಶ ದೋಚಲು ಮತ್ತು ಮತಾಂತರ ಮಾಡಲು ಬಂದು ನಮ್ಮ ದೇಶದ ಹಿನ್ನಡೆಗೆ ಕಾರಣರಾದರು. ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾದ ನಂತರ ಶೈಕ್ಷಣಿಕ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು ಎಂದು ಅವರು ಹೇಳಿದರು.
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣದಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ “ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆ ಮಹತ್ವಪೂರ್ಣವಾಗಿದೆ. ಹಾಗೇಯೆ ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಹಾಲಿ ಸಿಎಂ ಬೊಮ್ಮಾಯಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಧಾರಾಳವಾಗಿ ಅನುದಾನ ನೀಡಿದ್ದಾರೆ. ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಅನುದಾನಿತ ಸಂಸ್ಥೆಗಳಾಗಿ ಮಾಡಿದ್ದಾರೆ,” ಎಂದರು.
“ನಾಲ್ಕು ವರ್ಷಗಳಲ್ಲಿ 16,900 ಕೊಠಡಿ ನಿರ್ಮಾಣ ಮಾಡಿ ಬಿಜೆಪಿ ಸರ್ಕಾರ ದಾಖಲೆ ಮಾಡಿದೆ. ಬಡವ ,ಬಲ್ಲಿದ ಎಂಬ ತಾರತಮ್ಯ ಅನುಸರಿಸದೆ. ಸ್ವಾತಂತ್ರ್ಯ ಹೋರಾಟಗಾರ, ಮಹಾ ತಪಸ್ವಿಗಳ ಜೀವನ ತತ್ವಗಳನ್ನು ಪಠ್ಯದಲ್ಲಿ ಅಳವಡಿಸಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದರು.
“ಭಾರತೀಯ ಜನತಾ ಪಾರ್ಟಿ ಆಡಳಿತ ಸಮಯದಲ್ಲಿ ಶಿಕ್ಷಣ ಸುಧಾರಣೆ ಮತ್ತು ಶಿಕ್ಷಣ ಉನ್ನತಿಕರಣ, ಬಡವರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ದೇಶದ ಅಭಿವೃದ್ಧಿಗೆ ಸೇವೆ ಸಲ್ಲಿಸಬೇಕು,” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಅನೇಕ ವರ್ಷಗಳ ಹಿಂದೆ ಸ್ಥಾಪಿತವಾದ ಈ ಕಾಲೇಜು ಭೂಮಿ ಅಡಿಪಾಯ ಸರಿ ಇಲ್ಲದ ಕಾರಣ ಶಿಥಿಲವಾಗಿದೆ. ಹೀಗಾಗಿ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿದಾಗ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡದ್ದು, ಮುಂದೆಯೂ ಹಣಕಾಸಿನ ನೆರವಿನ ಭರವಸೆ ನೀಡಿದ್ದಾರೆ ಎಂದರು.
“ಭಯದಿಂದ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳು, ವಿದ್ಯಾರ್ಜನೆ ಮಾಡುವ ಶಿಕ್ಷಕರು ಇನ್ನೂ ಮುಂದೆ ಭಯ ಮುಕ್ತ ಶಿಕ್ಷಣ ಪಡೆಯಲು ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಭಾಗಕ್ಕೆ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ನಮ್ಮ ಸ್ವಾಭಿಮಾನ ಮತ್ತು ನಮ್ಮ ರಾಷ್ಟ್ರೀಯತೆ ಅಭಿಯಾನದಿಂದ ಶಿಕ್ಷಣ ಪಡೆಯಬೇಕಿದೆ,” ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಫ್. ಕೊಳದೂರ, ಪದವಿ ಪೂರ್ವ ಉಪ ನಿರ್ದೇಶಕ ಎಂ.ಎಂ. ಕಾಂಬಳೆ,ಪಿಡ್ಲುಡಿ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರ ಎಸ್. ಎಸ್. ಸೊಬರದ, ಅಧೀಕ್ಷಕ ಅಭಿಯಂತರ ಅರುಣ ಕುಮಾರ ಪಾಟೀಲ, ಅಡಿವಪ್ಪ ಮಾಳಣ್ಣವರ, ಎಸ್. ಎಂ. ಪಾಟೀಲ, ಸೋಮಪ್ಪ ಸೋಮಣ್ಣವರ, ಯುವ ಮುಖಂಡ ನಿಂಗನಗೌಡ ದೊಡಗೌಡರ ಮಹಾಂತೇಶ ಕೂಲಿನವರ, ತಾಪಂ ಮಾಜಿ ಸದಸ್ಯ ಶ್ರೀಶೈಲ ಕಮತಗಿ, ಶಂಕರ ತಿಗಡಿ, ಮಲ್ಲೇಶಿ ಮಾಳಣ್ಣವರ, ಪದವಿ ಕಾಲೇಜು ಪ್ರಾಚಾರ್ಯ ಎಂ.ವೈ. ಹಿತ್ತಲಗೌಡರ್ ಕುದುರೆಮುಖ, ಉಪಾಧ್ಯಕ್ಷ ಸೋಮಶೇಖರ ಮಾಳಣ್ಣವರ, ಸೋಮನಗೌಡ ಪಾಟೀಲ, ದೇಮಣ್ಣ ಗುಜನಟ್ಟಿ, ಸಲೀಂ ನದಾಫ್, ಗುರು ತುಬಚಿ, ನಾಗರಾಜ ತುಬಾಕಿ, ತೇಜಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಸೋಮಣ್ಣವರ, ಮಲ್ಲಿಕಾರ್ಜುನ ತುಬಾಕಿ, ವೀರಭದ್ರ ಚೋಭಾರಿ, ಪ್ರಕಾಶ ತೋಟಗಿ, ವಿಷ್ಣು ಮೂಲಿಮನಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಅಡಿವಪ್ಪ ಚಿಗರಿ, ಸುತ್ತಮುತ್ತಲಿನ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಪಿಡಬ್ಲುಡಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
75 ಲಕ್ಷ ರೂ, ವೆಚ್ಚದಲ್ಲಿ ಹಿಂಡಲಗಾ ಗ್ರಾಮದ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
https://pragati.taskdun.com/road-development-works-of-hindalaga-village-started-at-a-cost-of-rs-75-lakh/
*ಎರಡು ಶಾಲಾ ಬಸ್ ಗಳ ಭೀಕರ ಅಪಘಾತ; 15 ವಿದ್ಯಾರ್ಥಿಗಳು ದುರ್ಮರಣ*
https://pragati.taskdun.com/manipurtwo-school-busaccident15-students-death/
ಆನ್ ಲೈನ್‌ನಲ್ಲಿ ಸಾರಿಗೆ ಸೇವೆಗಳು: ಹೊಸ ಆರ್‌ಟಿಒ ಕಚೇರಿಗಳ ಸ್ಥಾಪನೆ ಇಲ್ಲ
https://pragati.taskdun.com/online-transport-services-no-establishment-of-new-rto-offices/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ