ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ರೂ.7.5 ಲಕ್ಷ ಪರಿಹಾರಧನವನ್ನು 15 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ. ಕಾಡಾನೆ ಹಾವಳಿ ಹೆಚ್ಚಿರುವ ಚಿಕ್ಕಮಗಳೂರು, ಹಾಸನ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಗಜ ಕಾರ್ಯಪಡೆ (ಎಲೆಫೆಂಟ್ ಟಾಸ್ಕ್ ಫೋರ್ಸ್) ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಗುರುವಾರ ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಪ್ರಾಣೇಶ್.ಎಂ.ಕೆ. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವರು ಉತ್ತರಿಸಿದರು.
ಕಾಡಾನೆ ಹಾಗೂ ಇತರೆ ವನ್ಯಪ್ರಾಣಿಗಳು ಕಾಡಿನಿಂದ ಹೊರಬಾರದಂತೆ ತಡೆಯಲು ವನ್ಯಪ್ರಾಣಿಗಳಿಗಾಗಿ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತ ಅರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ಇರುವ ಕೆರೆಗಳ ಪುನಶ್ಚೇತನಗೊಳಿಸಲಾಗಿದೆ.
ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ, ಕಂದಕ ಹಾಗೂ ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದುವರೆಗೂ 762 ಕಿ.ಮೀ ಆನೆ ತಡೆ ಕಂದಕ, 1106 ಕಿ.ಮೀ ಸೌರಶಕ್ತಿ ಬೇಲಿ, 100 ಕಿ.ಮೀ ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 150.95 ಕಿ.ಮೀ ಆನೆ ತಡೆ ಕಂದಕ, 285.88 ಕಿ.ಮೀ. ಸೌರಶಕ್ತಿ ಬೇಲಿ ಮತ್ತು 71.768 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 95 ಹಿಮ್ಮೆಟ್ಟಿಸುವ ಹಾಗೂ 33 ಕ್ಷಿಪ್ರ ಸ್ಪಂದನ ತಂಡ ರಚಿಸ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ವೈರ್ ಲೆಸ್ ಕಾಡಾನೆಗಳ ಮಾಹಿತಿ ಸಂಗ್ರಹಿಸಿಲು 24 ಗಂಟೆ ನಿರ್ವಹಿಸುವ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ ಎಂದರು.
ಕಾಡು ಪ್ರಾಣಿಯಿಂದ ಉಂಟಾಗುವ ಶಾಶ್ವತ ಅಂಗವಿಕಲತೆಗೆ ನೀಡಿತ್ತಿದ್ದ ಪರಿಹಾರಧನ ಮೊತ್ತವನ್ನು 5 ರಿಂದ 10 ಲಕ್ಷಕ್ಕೆ, ಭಾಗಶಃ ಅಂಗವಿಕಲತೆ ಮೊತ್ತವನ್ನು 2.50 ಲಕ್ಷದಿಂದ 5ಲಕ್ಷಕ್ಕೆರೂ.ಗೆ, ಗಾಯಗೊಂಡವರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.30 ಸಾವಿರದಿಂದ ರೂ.60 ಸಾವಿರಕ್ಕೆ, ಆಸ್ತಿ ನಷ್ಟದ ಮೊತ್ತವನ್ನು ರೂ.10 ಸಾವಿರದಿಂದ 20 ಸಾವಿರ ರೂ.ಗೆ ಹಾಗೂ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಧನಾತ್ಮಕ ಪರಿಹಾರದ ಜೊತೆಗೆ 5 ವರ್ಷದ ಅವಧಿ ನೀಡುತ್ತಿದ್ದ ಮಾಸಾಶನ ಮೊತ್ತ 2 ಸಾವಿರ ರೂ. 4 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ನಾರಾಯಣಪುರ ಕಾಲುವೆಗಳ ದೋಷ ತಾಂತ್ರಿಕ ತಜ್ಞರ ಸಮಿತಿ ವರದಿ ಪರಿಶೀಲಿಸಿ ಕ್ರಮ
https://pragati.taskdun.com/narayanpur-canals-fault-technical-expert-committee-review-action/
ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಸರ್ವಪಕ್ಷ ಸಭೆಯಲ್ಲಿ ನಿರ್ಣಯ
https://pragati.taskdun.com/construction-of-navali-parallel-reservoir-decided-in-all-party-meeting/
*ರಂಗಸ್ಥಳದಲ್ಲೇ ಹೃದಯಾಘಾತ; ಯಕ್ಷಗಾನ ಮಾಡುತ್ತಲೇ ಕೊನೆಯುಸಿರೆಳೆದ ಹಿರಿಯ ಕಲಾವಿದ*
https://pragati.taskdun.com/yakshaganakateelu-melaguruvappa-bayarudeath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ