ಪ್ರಗತಿವಾಹಿನಿ ಸುದ್ದಿ, ಬೀಜಿಂಗ್: ಇದು ವಿಶ್ವದ ಅತ್ಯಂತ ಭಾರೀ ಪ್ರಮಾಣದ ಕೋವಿಡ್ ದಾಳಿ.
ಚೀನಾದಲ್ಲಿ ಈ ವಾರದ ಒಂದೇ ದಿನ 3.7 ಕೋಟಿಯಷ್ಟು ಜನ ಸೋಂಕಿಗೆ ಒಳಗಾಗಿದ್ದಾರೆ. ಚೀನಾ ಸರ್ಕಾರದ ಉನ್ನತ ಆರೋಗ್ಯ ಪ್ರಾಧಿಕಾರದ ಅಂದಾಜನ್ನು ಉಲ್ಲೇಖಿಸಿ ಬ್ಲೂಮ್ಬರ್ಗ್ ನ್ಯೂಸ್ ಇದನ್ನು ವರದಿ ಮಾಡಿದೆ.
ಡಿಸೆಂಬರ್ ತಿಂಗಳ ಮೊದಲ 20 ದಿನಗಳಲ್ಲಿ ಸುಮಾರು 24.8 ಕೋಟಿ ಜನರು ವೈರಸ್ಗೆ ತುತ್ತಾಗಿರುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
“ಕೋವಿಡ್ ನ ಜನಕ’ ಎಂಬ ಕುಖ್ಯಾತಿಗೆ ಒಳಗಾದ ಚೀನಾ 2019ರಲ್ಲಿ ಇಡೀ ಜಗತ್ತಿಗೆ ಹಂಚಿದ ವೈರಸ್ ಮೊದಲ ಅಲೆಯನ್ನು ಸುಸಜ್ಜಿತ ಆಸ್ಪತ್ರೆಗಳನ್ನು ತೆರೆಯುವುದರೊಂದಿಗೆ ಸಮರ್ಥವಾಗಿ ನಿಭಾಯಿಸಿತ್ತು. ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಕೋವಿಡ್ ರುದ್ರನರ್ತನ ಆರಂಭವಾದಾಗ ಚೀನಾ ಆಂತರಿಕವಾಗಿ ಅದರ ಮೇಲೆ ನಿಯಂತ್ರಣ ಸಾಧಿಸಿ ನಿರುಮ್ಮಳವಾಗಿತ್ತು.
ಇದೇ ವೇಳೆ ಕೋವಿಡ್ ಅನಾಹುತಗಳನ್ನು ಆದದ್ದಕ್ಕಿಂತ ಕಡಿಮೆ ಬಿಂಬಿಸಿ ಮಾನ ಉಳಿಸಿಕೊಳ್ಳುವ ಚೀನಾಕ್ಕೆ ಈ ಬಾರಿ ಹತೋಟಿ ತಪ್ಪಿದೆ. ದೇಶದ ಶೇ.60ಕ್ಕೂ ಹೆಚ್ಚು ಜನಸಂಖ್ಯೆ ಕೋವಿಡ್ ಹೊಡೆತಕ್ಕೆ ತುತ್ತಾಗಿದ್ದು ಎಲ್ಲಿ ನೋಡಿದಲ್ಲಿ ಹೆಣಗಳ ರಾಶಿ ಜನತೆಯನ್ನು ಕಂಗೆಡಿಸಿದೆ. ಇದು ಚೀನಾ ಪಾಲಿಗೆ ಮುಚ್ಚಿಕೊಳ್ಳಲಾಗದ ರಹಸ್ಯವಾಗಿ ಮಾರ್ಪಾಡಾಗಿದೆ.
ಇದೇ ವೇಳೆ ಜಗತ್ತಿನ ಅತಿ ದೊಡ್ಡ ಪ್ರಮಾಣದ ಕೋವಿಡ್ ಆಕ್ರಮಣದ ದಾಖಲೆ ಈಗ ಒಲ್ಲೆಯೆಂದರೂ ಚೀನಾ ಪಾಲಿಗೆ ಬಂದೊದಗಿದೆ.
*ಶಾಲಾ ಪ್ರವಾಸದ ಬಸ್ ಪಲ್ಟಿ; 7 ಜನರಿಗೆ ಗಾಯ*
https://pragati.taskdun.com/school-busaccident7-people-injuerdbeluru/
ಅಂಗನವಾಡಿ ಆವರಣದಲ್ಲಿ ಹಾವು ಕಚ್ಚಿ ಬಾಲಕ ಸಾವು
https://pragati.taskdun.com/boy-dies-of-snake-bite-in-anganwadi-premises/
ಅಂಗನವಾಡಿ ಆವರಣದಲ್ಲಿ ಹಾವು ಕಚ್ಚಿ ಬಾಲಕ ಸಾವು
https://pragati.taskdun.com/boy-dies-of-snake-bite-in-anganwadi-premises/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ