ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರೂಪಾಂತರಿ ವೈರಸ್ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಹೈ ರಿಸ್ಕ್ ದೇಶಗಳಿಂದ ಆಗಮಿಸಿದ 12 ಪ್ರಯಾಣಿಕರಿಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಡಿಸೆಂಬರ್ 24 ರವರೆಗೆ ಬೆಂಗಳೂರಿನ ಕೆಐಎಎಲ್‌ಗೆ ಆಗಮಿಸಿದ 2867 ಪ್ರಯಾಣಿಕರಿಗೆ ಕೋವಿಡ್ -19 ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ 12 ಜನರು ಕೋವಿಡ್ ಪಾಸಿಟಿವ್ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಚೀನಾದಿಂದ ಆಗಮಿಸಿರುವ ವ್ಯಕ್ತಿ ಸೇರಿದಂತೆ 12 ಜನರಲ್ಲಿ ಸೋಂಕು ದೃಢವಾಗಿದೆ. ಕೊರೊನಾ ರೂಪಾಂತರಿ ಪತ್ತೆಹಚ್ಚಲು ಎಲ್ಲಾ 12 ಸೋಂಕಿತರ ಮಾದರಿಗಳನ್ನು ಜೀನೋಮಿಕ್ ಟೆಸ್ಟ್ ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ವರ್ಷಾಚರಣೆಗೆ ಕ್ಷಣ ಗಣನೆ ಆರಂಭವಾಗಿರುವ ಹೊತ್ತಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆತಂಕ ಹೆಚ್ಚುತ್ತಿದ್ದು, ಸಂಭ್ರಮಾಚರಣೆಗೆ ಮತ್ತೆ ತಣ್ಣಿರೆರಚುವ ಸಾಧ್ಯತೆ ದಟ್ಟವಾಗಿದೆ.
In the month of December as on 24th, 2867 passengers have been tested for Covid-19 on arrival at KIAL, Bengaluru out of which 12 people have been found positive. Samples of all 12 positive cases have been sent for genomic testing to track variants of concern.@BLRAirport @DHFWKA
— Dr Sudhakar K (@DrSudhakar_) December 26, 2022
*ಎಲ್ಲರೂ ಮಾಸ್ಕ್ ಧರಿಸಿ; ಆರೋಗ್ಯ ಸಚಿವ ಡಾ.ಸುಧಾಕರ್ ಖಡಕ್ ಸೂಚನೆ*
https://pragati.taskdun.com/covid-increasemaskdr-sudhakarbelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ