ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಡಿ.30ರಿಂದ 2023ರ ಜನವರಿ 29ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್ ಯಾತ್ರೆ ಕೈಗೊಂಡು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.
ಡಿ. 30ರಂದು ವಿಜಯಪುರದಲ್ಲಿ ಕೃಷ್ಣಾ ಮೇಲಡೆ ಯೋಜನೆ ವಿಚಾರವಾಗಿ ಡಿ. ಕೆ. ಶಿವಕುಮಾರ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಭೆ ನಡೆಸುವರು.
ಜನವರಿ 2ರಂದು ಮಹದಾಯಿ ಯೋಜನೆ ಜಾರಿ ವಿಚಾರವಾಗಿ ಹುಬ್ಬಳ್ಳಿ ಪ್ರತಿಭಟನೆ ನಡೆಸಲಿದ್ದಾರೆ.
ಜನವರಿ 10 ರಿಂದ ಬಸ್ ಯಾತ್ರೆ ಎರಡು ತಂಡಗಳಲ್ಲಿ ನಡೆಯಲಿದೆ. ದಕ್ಷಿಣ ಕರ್ನಾಟಕ ಭಾಗಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದ ತಂಡ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ತಂಡ ಯಾತ್ರೆ ಕೈಗೊಳ್ಳಲಿದೆ.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಲಾಗುತ್ತದೆ. ಸಂಸದ ಜಿ. ಸಿ. ಚಂದ್ರಶೇಖರ ಅವರು ದಕ್ಷಿಣ ಕರ್ನಾಟಕ ಭಾಗದಲ್ಲಿ ಬಸ್ ಯಾತ್ರೆಯ ಸಂಯೋಜಕರಾಗಿದ್ದು ಮಾಜಿ ಸಚಿವ ಬಸವರಾಜ ರಾಯ ರೆಡ್ಡಿ ಅವರು ಉತ್ತರ ಕರ್ನಾಟಕ ಭಾಗದ ಪ್ರವಾಸದ ಸಂಯೋಜಕರಾಗಿದ್ದಾರೆ.
ಪ್ರವಾಸದ ಪಟ್ಟಿ
ಕಾಂಗ್ರೆಸ್ ಬಸ್ ಯಾತ್ರೆಯು ಜನವರಿ 11ರಂದು ಬೆಳಗ್ಗೆ 8.30ಕ್ಕೆ ಬೆಳಗಾವಿಯಿಂದ ಪ್ರಾರಂಭಗೊಂಡು ಚಿಕ್ಕೋಡಿಗೆ ತೆರಳಲಿದೆ. ಚಿಕ್ಕೋಡಯಲ್ಲಿ ಸಭೆ ಮುಗಿಸಿ ಮಧ್ಯಾಹ್ನ 3 ಗಂಟೆಗೆ ಚಿಕ್ಕೋಡಿಯಿಂದ ಹೊರಟು 4 ಗಂಟೆಗೆ ಬೆಳಗಾವಿ ತಲುಪಿ ಬೆಳಗಾವಿಯಲ್ಲಿ ಸಭೆ ಹಮ್ಮಿಕೊಳ್ಳಲಾಗುತ್ತದೆ.
ಜ.12ರಿಂದ 16ರವರೆಗೆ ಬಸ್ ಯಾತ್ರೆಗೆ ಬಿಡುವು ನೀಡಲಾಗಿದ್ದು ಜ.17ರ ಬೆಳಗ್ಗೆ 10 ಗಂಟೆಗೆ ಹೊಸಪೇಟೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅಲ್ಲಿಂದ ಮಧ್ಯಾಹ್ನ 3 ಗಂಟೆಗೆ ಕೊಪ್ಪಳಕ್ಕೆ ತೆರಳಲಿದ್ದು 4 ಗಂಟೆಯ ಬಳಿಕ ಕೊಪ್ಪಳದಲ್ಲಿ ಸಭೆ ನಡೆಸಲಾಗುತ್ತದೆ. ಕೊಪ್ಪಳದಿಂದ ಬಾಗಲಕೋಟೆಗೆ ರಾತ್ರಿ ತೆರಳಲಿದೆ.
ಬಾಗಲಕೋಟೆಯಲ್ಲಿ ಜ.18ರಂದು ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದ್ದು ಅಲ್ಲಿಂದ ಮಧ್ಯಾಹ್ನ 2.30ಕ್ಕೆ ಗದಗಕ್ಕೆ ತೆರಳಲಿದೆ. ಗದಗದಲ್ಲಿ ಸಂಜೆ 4 ಗಂಟೆಗೆ ಸಭೆ ಹಮ್ಮಿಕೊಳ್ಳಲಾಗಿದೆ. ಅಲ್ಲಿಂದ ಬಸ್ ಯಾತ್ರೆ ಹುಬ್ಬಳ್ಳಿಗೆ ತೆರಳುವುದು.
ಜ.19ರಂದು ಬೆಳಗ್ಗೆ 8.30ಕ್ಕೆ ಹುಬ್ಬಳ್ಳಿಯಿಂದ ಹೊರಟು 10 ಗಂಟೆಗೆ ಹಾವೇರಿ ತಲುಪಿ ಹಾವೇರಿಯಲ್ಲಿ ಸಭೆ ನಡೆಸಲಾಗುತ್ತದೆ. ಜನವರಿ 20ರಂದು ಯಾತ್ರೆಗೆ ಬಿಡುವು ನೀಡಲಾಗಿದೆ.
ಜ.21ರಂದು ಬೆಂಗಳೂರಿನಿಂದ ಹೊರಟು ಬೆಳಗ್ಗೆ 10 ಗಂಟೆಗೆ ಹಾಸನ ತಲುಪಿ ಹಾಸನದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುತ್ತದೆ. ಹಾಸನದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಸಂಜೆ 4 ಗಂಟೆಗೆ ಚಿಕ್ಕಮಗಳೂರಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಮಂಗಳೂರಿಗೆ ತೆರಳಲಿದೆ.
22ರಂದು ಬೆಳಗ್ಗೆ ಮಂಗಳೂರಿನಿಂದ ಹೊರಟು ಉಡುಪಿ ತಲುಪಲಿದ್ದು ಉಡುಪಿಯಲ್ಲಿ ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿಂದ ಮರಳಿ ಮಂಗಳೂರಿಗೆ ತೆರಳಿ ಸಂಜೆ 4 ಗಂಟೆಗೆ ಮಂಗಳೂರಿನಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುತ್ತದೆ.
23ರಂದು ಬೆಳಗ್ಗೆ 10 ಗಂಟೆಗೆ ಕೋಲಾರದಲ್ಲಿ ಸಂಜೆ 4 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.
24ರಂದು ಬೆಳಗ್ಗೆ 10 ಗಂಟೆಗೆ ತುಮಕೂರು ಹಾಗೂ ಸಂಜೆ 4 ಗಂಟೆಗೆ ದೊಡ್ಡ ಬಳ್ಳಾಪುರದಲ್ಲಿ ಸಭೆ ನಡೆಯಲಿದೆ.
26ರಂದು ಬೆಳಗ್ಗೆ 10 ಗಂಟೆಗೆ ಚಾಮರಾಜ ನಗರ, ಸಂಜೆ 4 ಗಂಟೆಗೆ ಮೈಸೂರಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
27ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯ, ಸಂಜೆ 4 ಗಂಟೆಗೆ ರಾಮನಗರದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
28ರಂದು ಮಧ್ಯಾಹ್ನ 12 ಗಂಟೆಗೆ ಯಾದಗಿರಿ ಹಾಗೂ ಸಂಜೆ 5 ಗಂಟೆಗೆ ಬೀದರ್‍ನಲ್ಲಿ ಸಭೆ ನಡೆಯಲಿದೆ.
*ಚರ್ಚೆಗೆ ಅವಕಾಶ ಕೊಡದೆ ಸರ್ಕಾರ ಓಡಿ ಹೋಗಿದೆ: ಡಿ.ಕೆ.ಶಿವಕುಮಾರ್ ಆಕ್ರೋಶ*
https://pragati.taskdun.com/d-k-shivakumarkrishna-meldandemahadaivijayapurahubliprotest/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ