– ಅಶ್ವಿನಿ ಎಸ್. ಅಂಗಡಿ. ಬಾದಾಮಿ
ನಮಸ್ಕಾರ ಬಾಂಧವರೆ,
ಇನ್ನೇನು 2023 ರ ಹೊಸ ಕ್ಯಾಲೆಂಡರ್ ವರ್ಷದ ಆಗಮನಕ್ಕೆ ದಿನಗಣನೆ ಶುರುವಾಗಿದೆ.2022 ರ ಈ ವರ್ಷವು ತನ್ನ ಯಶಸ್ವಿ ಒಂದು ವರ್ಷದ ದರ್ಬಾರನ್ನು ಮುಗಿಸಿ ಕೊನೆಯಾಗುವ ಕಾತುರದಲ್ಲಿ ಕಾದು ನಿಂತಿದೆ ನವ ವರ್ಷಕ್ಕೆ ಸ್ವಾಗತ ಕೋರುತ್ತ..
ಇಡೀ ಪ್ರಪಂಚದಾದ್ಯಂತ ನವ ವರ್ಷದ ಆಚರಣೆಯ ಪಟ್ಟಿಗಳು ಮನಗಳಲ್ಲಿ ನರ್ತನ ಮಾಡುತ್ತಿವೆ ಹೇಗೆ ಆಚರಿಸಬೇಕೆಂಬ ಯೋಚನೆ ಪ್ರತಿ ಕ್ಷಣವೂ ಮಸ್ತಕವನ್ನಾವರಿಸಿ ಕಿರಿ-ಕಿರಿ ಮಾಡುತ್ತಿದೆ ,ಏನೇ ಆಗಲಿ ಇದು ನಮ್ಮ ಭಾರತೀಯ ಕಾಲಮಾನ ಹಾಗೂ ಪಂಚಾಂಗದ ಪ್ರಕಾರ ಹೊಸ ವರ್ಷವಲ್ಲದಿದ್ದರು ಜಗತ್ತಿನ ಎಲ್ಲಾ ರಾಷ್ಟ್ರಗಳ ಸ್ಥಾನಿಕ ವೇಳೆ ,ಕಾಲಮಾನವನ್ನು ಸರಿದೂಗಿಸಲು ಒಂದು ಏಕರೂಪದ ಕ್ಯಾಲೆಂಡರ್ ನ್ನು ಜನೆವರಿಯಿಂದಲೇ ಎಂದು ಅಂಗೀಕರಿಸಿದ್ದರಿಂದ ವ್ಯಾವಹಾರಿಕವಾಗಿ ಎಲ್ಲಾ ದೇಶಗಳು ಈ ನಿಯಮವನ್ನು ಅನುಸರಿಸುವುದು ಅನಿವಾರ್ಯ.
ಹೊಸ ವರ್ಷವನ್ನು ಜನೆವರಿಯಿಂದಲೇ ಆಚರಿಸುವುದೇಕೆ ಎಂಬ ಐತಿಹ್ಯವನ್ನು ತಿಳಿಯೋಣ ರೋಮ ಸಾಮ್ರಾಜ್ಯದಲ್ಲಿ ಅಲ್ಲಿಯ ದೊರೆಯಾದ ಜ್ಯು ಲಿಯಸ ಸೀಸರನು ಕ್ರಿ,ಪೂ,46 ರಲ್ಲಿ ಜನೆವರಿ 1 ನ್ನು ಹೊಸವರ್ಷದ ಮೊದಲ ದಿನವೆಂದು ನಿರ್ಧರಿಸಿ ಜ್ಯುಲಿಯಸ ಕ್ಯಾಲೆಂಡರ್ ಗೆ ನಾಂದಿ ಹಾಡಿದನು,ಮುಂದೆ ಅದು ಕಾಲಮಾನಕ್ಕೆ ಬಡಲಾವಣೆಗೊಂಡು ಇನ್ನಿತರ ರೋಮನ್ ದೊರೆಗಳಿಂದ ಕ್ರಿ,ಪೂ,153 ರಲ್ಲಿ ಅದು ನಿರ್ದಿಷ್ಟತೆಯನ್ನು ಹೊಂದಿತು. ಮೊಟ್ಟ ಮೊದಲು ಹೊಸವರ್ಷದ ಸಂಭ್ರಮಾಚಾರಣೆಯನ್ನು ಜಗತ್ತಿಗೆ ಪರಿಚಯಿಸಿದರು ಜರ್ಮನ್ನರು,ಜೊತೆಗೆ ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆಯೇ ಪ್ರಾಚೀನ ಬ್ಯಾಬಿಲೋನಿಯನ್ನರು (ಈಗಿನ ಇರಾಕ್) ಹೊಸ ವರ್ಷದ ಆಚರಣೆ ಮಾಡುತಿದ್ದರು ಎಂದು ನಮಗೆ ಸಾಕ್ಷ್ಯಾಧಾರಗಳು ದೊರೆತಿವಿ.
ಈ ಹೊಸವರ್ಷ ಸಂಭ್ರಮಾಚಾರಣೆಯ ಪದ್ಧತಿಗಳು ದೇಶದಿಂದ ದೇಶಕ್ಕೆ ವಿಭಿನ್ನವಾಗಿವೆ. ಗ್ರೀಕ್ ದೇಶದಲ್ಲಿ ಹೊಸವರ್ಷವನ್ನು ಕಾರುಣ್ಯಮೂರ್ತಿ ಸಂತ “ಬೇಸಿಲ್”ಸ್ಮರಣಾರ್ಥ ಆಚರಿಸುತ್ತಾರೆ,ಸ್ವಿಟ್ಜರ್ಲೆಂಡ್ನಲ್ಲಿ ಹೊಸವರ್ಷದಂದು ಅಲ್ಲಿಯ ಜನರು ಪರಸ್ಪರ ಐಸ್ಕ್ರೀಂ ಕೊಟ್ಟು ಶುಭಾಶಯ ಹೇಳುತ್ತಾರೆ, ರೋಮನಿಯ ಜನರು “ಕರಡಿ ವೇಷ” ಧರಿಸಿ ನೃತ್ಯಮಾಡಿ ದುಷ್ಟ ಶಕ್ತಿಗಳ ಹರಣ ಮಾಡುವ ದಿನವೆಂದು ಸಂಭ್ರಮಿಸುತ್ತಾರೆ. ಪೆರುವಿನಲ್ಲಿ ಜನರು ಹೊಸವರ್ಷದಂದು ಸ್ಮಶಾನಕ್ಕೆ ಹೋಗಿ ರಾತ್ರಿ ಅಲ್ಲಿಯೇ ಮಲಗಿ ತಮ್ಮ ಪೂರ್ವಜರನ್ನು ನೆನೆಯುತ್ತಾ ಮನಃ ಶಾಂತಿ ಪಡೆಯುತ್ತಾರೆ.ಇನ್ನು ಟಿಬೆಟಿಯನ್ನರು ಜನೆವರಿಯಿಂದ ಮಾರ್ಚ ನಡುವೆ “ಲೋಸಾರ್” ಎಂದು ಆಚರಿಸುತ್ತಾರೆ,ಇನ್ನೂ ಚೀನಿಯರು ಪ್ರತಿವರ್ಷ ಜನೆವರಿ 17 ರಿಂದ ಫೆಬ್ರುವರಿ 19 ರ ನಡುವೆ ಬರುವ ಪಾಡ್ಯದ ದಿನವನ್ನು “ಯು ಆನ್ ಟ್ಯಾನ್”(ಹೊಸವರ್ಷ)ವೆಂದು ಕರೆಯುತ್ತಾರೆ.
ಆದರೆ ಭಾರತದಲ್ಲಿ ನಮಗೆ ಚೈತ್ರ ಮಾಸದ “ಯುಗಾದಿ”ಹಬ್ಬದಿಂದ ಹೊಸವರ್ಷವು ಪ್ರಾರಂಭ,ಭಾರತೀಯ ಪಂಚಾಂಗ ಹಾಗೂ ಕಾಲಮಾನವು ತಿಳಿಸಲ್ಪಡುವಂತೆ ಯುಗಾದಿ ಹಬ್ಬವು ನಮ್ಮೆಲ್ಲರಿಗೂ ಸಡಗರ,ಸಂಭ್ರಮದ ಹಬ್ಬವಾಗಿದೆ. ಅಂದು ದೇಶದಾದ್ಯಂತ ಜನರು ಪುಣ್ಯ ಸ್ನಾನ,ದೇವರ ದರ್ಶನ, ಪೂಜಾ ಕೈಂಕರ್ಯಗಳು ಸಂಭ್ರಮದಿಂದ ಜರುಗುವವು,ಎಲ್ಲರೂ ಶುಭ್ರ ವಸ್ತ್ರಧಾರಣೆ ಮಾಡಿ ದೇವರ ದರ್ಶನ ಪಡೆದು ಮನೆಯಲ್ಲಿ ಸಿಹಿ ಭಕ್ಷ್ಯಗಳನ್ನು ಮಾಡಿ ಬಂಧು, ಬಾಂಧವರಿಗೆ ಬೇವು ಬೆಲ್ಲ ಹಂಚುವ ಪರಿ ರಮಣೀಯ.
ನಮ್ಮ ಜೀವನದಲ್ಲಿ ಬರುವ ಕಹಿಯಂತಹ,ಕಷ್ಟಗಳು ಸಿಹಿಯಂತೆ ಬರುವ ಸುಖಗಳನ್ನು ಸಮಾನವಾಗಿ ತಾಳ್ಮೆಯಿಂದಾ ಸ್ವೀಕರಿಸಿ ಬದುಕಬೇಕೆಂಬುದು ಈ ಹಬ್ಬದ ವಿಶೇಷವಾಗಿದೆ ಹೀಗೆ ಭಾರತೀಯರು ತಮ್ಮ ಹೊಸವರ್ಷಾಚರಣೆಯನ್ನು ಮಾಡುವರು.
ಇನ್ನೂ ಈಗಿನ ವರ್ಷಾಚರಣೆಯು ಬರೀ ಮೋಜು, ಮಸ್ತಿಯಿಂದಾ ಕೂಡಿರುವುದಾಗಿದೆ, ಅಲ್ಲದೆ ಪಟಾಕಿ ಸದ್ದುಗಳು ಶಬ್ದಮಾಲಿನ್ಯದೊಂದಿಗೆ,ವಾಯುಮಾಲಿನ್ಯವನ್ನುಂಟು ಮಾಡುತ್ತಿವೆ. ಯುವ ಜನತೆಯು ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ,ಮನಬಂದಂತೆ ವರ್ತಿಸುತ್ತಾರೆ. ಈ ಅವಧಿಯಲ್ಲಿ ಸಾಕಷ್ಟು ಮಾದಕ ವಸ್ತುಗಳು ಕಳ್ಳತನದ ಮೂಲಕ ಅಮಾಯಕರ ಕೈ ಸೇರಿ ನರಕ ತೋರಿಸುತ್ತವೆ.
ಸರ್ಕಾರ ಬಳಕೆದಾರರ ಒತ್ತಡಕ್ಕೆ ಮಣಿದು ಡಿಸೆಂಬರ್ 31 ರ ತಡ ರಾತ್ರಿ ವಿನೋದ ಕೂಟಗಳಿಗೆ ಅನುಮತಿ ನೀಡಿರುತ್ತದೆ. ಆದರೆ ಅಲ್ಲಿಯ ಜನರು ಕೆಟ್ಟ ಚಟಗಳ ದಾಸರಾಗಿ , ಮಾದಕ ವಸ್ತುಗಳನ್ನು ಸೇವಿಸಿ ನಶೆಯಲ್ಲಿ ಹೊಸ ವರ್ಷಾಚರಣೆಯನ್ನು ಮಾಡಿ ಸರ್ಕಾರಕ್ಕೆ ಮಣ್ಣೆರಚುವ ಕೆಲಸಾ ಮಾಡುತ್ತಾರೆ.ಮದಿರೆಯ ಮತ್ತಿನಲ್ಲಿ ಅತ್ಯಾಚಾರಗಳು, ಮತೀಯ ವ್ಯಾಜ್ಯಗಳು, ಹಾಗೂ ಕಲಹ , ಸಂಘರ್ಷಗಳಾಗುವ ಸಂಭವವೇ ಜಾಸ್ತಿ ಆಗಿರುತ್ತೆ.
ಈ ತೆರನಾಗಿ ನಾವು ಅಪಮೌಲ್ಯದೊಂದಿಗೆ ವರ್ಷಾಚರಣೆ ಮಾಡುವುದು ಎಷ್ಟು ಸರಿ ನೀವೇ ಯೋಚಿಸಿ, ಬೇಡ ಬಾಂಧವರೆ, ಮುಕ್ಕೋಟಿ ಜೀವಿಗಳಲ್ಲಿ ಮನುಷ್ಯ ಜಾತಿ ಅತಿ ಉನ್ನತದಲ್ಲಿರುವುದಾಗಿದೆ, ಹೀಗಿದ್ದಾಗ ನಾವು ಕ್ಯಾಲೆಂಡರ್ ನ್ನು ಮಾತ್ರ ಬದಲಾಯಿಸದೇ ನಮ್ಮ ಕಾಯಕಗಳನ್ನು ಬದಲು ಮಾಡಿಕೊಳ್ಳೋಣ. ಹೊಸ ವರ್ಷಾಚರಣೆಯನ್ನು ನಾವು ಸಮಾಜಕ್ಕೆ ಹಿತಕರವಾಗಿಯೂ ಆಚರಿಸಬಹುದಲ್ಲವೇ ಅಂದಿನ ದಿನ ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಹೋಗಬಹುದು, ಒಳ್ಳೆಯ ಊಟ, ಹಾಗೂ ನೆರೆಯವರಿಗೆ ಸಿಹಿ ಹಂಚುವುದರ ಮೂಲಕ, ಇನ್ನೂ ಸಾಮಾಜಿಕ ಕಾರ್ಯಗಳಾದ, ಸಂಘ, ಸಂಸ್ಥೆಗಳಿಗೆ ಧನ ಸಹಾಯ,ಶಾಲೆಯ ಮಕ್ಕಳಿಗೆ ಕಲಿಕಾ ಪರಿಕರಗಳನ್ನು ಕೊಡಿಸುವುದು,ವೃದ್ಧಾಶ್ರಮಕ್ಕೆ ಹೋಗಿ ವಸ್ತ್ರ, ಊಟ, ಕೊಡುವುದು, ಅನಾಥಾಶ್ರಮಕ್ಕೆ ಹೋಗಿ ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆ, ನಾವು ಮೋಜು ಮಾಸ್ತಿ ಮಾಡಿ ನಮ್ಮ ಜೀವನವನ್ನು ಹಾಳು ಮಾಡುವ ವ್ಯಸನಗಳನ್ನು ಮಾಡಲು ಹಣ ಖರ್ಚು ಮಾಡುವ ಬದಲು ಈ ರೀತಿ ಒಳ್ಳೆಯ ಕೆಲಸಗಳನ್ನು ಮಾಡಿ ಮನಃ ಶಾಂತಿ ಪಡೆಯಬಹುದಲ್ಲವೇ.
ಹಾಗಾದರೆ ಬನ್ನಿ ಸಹೋದರ ,ಸಹೋದರಿಯರೆ ಈ2023 ರ ಕ್ಯಾಲೆಂಡರ್ ಹೊಸವರ್ಷವನ್ನು ಉತ್ತಮ ಕಾಯಕಗಳನ್ನು ಮೈಗೂಡಿಸಿಕೊಂಡು ,ಅವುಗಳನ್ನು ಕಾರ್ಯರೂಪಕ್ಕೂ ತಂದು ಸಂಭ್ರಮಿಸೋಣ.ಇಂದಿನಿಂದ ಕೆಟ್ಟ ಚಟಗಳಿಗೆ ಗುಡ್ ಬೈ ಹೇಳಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಭ್ರಮಿಸಿದ್ದೆ ಆದರೆ ನಮ್ಮ ನಾಡಿನ ಪದ್ದತಿ,ಸಂಪ್ರದಾಯ,ಸಂಸ್ಕೃತಿಗೂ ಒಂದು ಬೆಲೆ ಸಿಕ್ಕಿದಂತಾಗುವುದು.
ತಮ್ಮೆಲ್ಲರಿಗೂ ಹೊಸ ವರ್ಷದ,ಹೊಸ ಜೀವನದ ಹಾರ್ದಿಕ ಶುಭಾಶಯಗಳು ಈ ವರ್ಷವೂ ನಿಮಗೆ ಒಳ್ಳೆಯ ಆಯಸ್ಸು,ಆರೋಗ್ಯ ಹಾಗೂ ಒಳ್ಳೆಯ ಜೀವನಕ್ಕೆ ದಾರಿಯಾಗಲಿ ಎಂದು ಹಾರೈಸುವೆ.
ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸಮಾವೇಶ
https://pragati.taskdun.com/release-of-employees-union-calendar/
https://pragati.taskdun.com/hindu-intercast-married-couple-convention/
ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ಭಕ್ತಸಾಗರ
https://pragati.taskdun.com/thousends-of-devotees-came-to-siddeshwar-swamijis-darshan/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ