ಪ್ರಗತಿವಾಹಿನಿ ಸುದ್ದಿ, ಕಿತ್ತೂರು: ಅಸಮರ್ಪಕ ಬಸ್ ವ್ಯವಸ್ಥೆಯಿಂದ ಬೇಸತ್ತ ವಿದ್ಯಾರ್ಥಿಗಳು ಕಿತ್ತೂರು ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಿತ್ತೂರಿನಿಂದ ಅವರಾದಿ ಗ್ರಾಮಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು. ಗ್ರಾಮದಿಂದ ನಿತ್ಯ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬೇರೆಬೇರೆ ಭಾಗಕ್ಕೆ ತೆರಳುತ್ತಿದ್ದು ಅಸಮರ್ಪಕ ಬಸ್ ಸಂಚಾರದಿಂದಾಗಿ ತೀವ್ರ ತೊಂದರೆಯಾಗುತ್ತಿದೆ ಎಂದು ಅವರಾದಿ ಗ್ರಾಮ ಪಂಚಾಯಿತಿಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ಕಿತ್ತೂರು ಘಟಕದ ವ್ಯವಸ್ಥಾಪಕರಿಗೆ ಡಿ.27ರಂದು ಮನವಿ ಸಲ್ಲಿಸಲಾಗಿತ್ತು. ಸದ್ಯ ಬೈಲಹೊಂಗಲದಿಂದ ಖೋದಾನಪುರ ಮಾರ್ಗವಾಗಿ ಬರುವ ಬಸ್ ನಲ್ಲಿ ಗರಿಷ್ಠ 70-80 ವಿದ್ಯಾರ್ಥಿಗಳು ಮಾತ್ರ ಸಂಚರಿಸಬಹುದಾಗಿದ್ದು ಇನ್ನುಳಿದ 60-70 ವಿದ್ಯಾರ್ಥಿಗಳು ನಡೆದು ಶಾಲಾ ಕಾಲೇಜು ಸೇರುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಆದರೆ ಈವರೆಗೂ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಗ್ರಾಮದ ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಅವರಾದಿಯಿಂದ ಕಿತ್ತೂರಿಗೆ ಹಾಗೂ ಸಂಜೆ 5ಕ್ಕೆ ಕಿತ್ತೂರಿನಿಂದ ಅವರಾದಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ಈ ಮಧ್ಯೆ ಸಾರಿಗೆ ನಿಗಮದ ಅಧಿಕಾರಿಗಳು ವಿದ್ಯಾರ್ಥಿಗಳ ಮನವೊಲಿಸುವ ಯತ್ನ ನಡೆಸಿದ್ದಾರೆ.
*ಬೆಳಗಾವಿ: ಮಾಜಿ ಶಾಸಕರ ಕಾರು ಭೀಕರ ಅಪಘಾತ*
https://pragati.taskdun.com/ex-mlajds-leader-kallappa-magennavarcar-accident/
*ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ*
https://pragati.taskdun.com/karnataka-bankjob-offerrecruitment-2023/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ