Karnataka News

ಜಾಡಮಾಲಿಯಾಗಿದ್ದ ಮಹಿಳೆಗೆ ಡೆಪ್ಯುಟಿ ಮೇಯರ್ ಹುದ್ದೆ

ಪ್ರಗತಿ ವಾಹಿನಿ ಸುದ್ದಿ, ಗಯಾ: ಬಿಹಾರದ ಗಯಾ ನಗರ ಸ್ಥಳೀಯ ಸಂಸ್ಥೆ ಜಾಡಮಾಲಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಡೆಪ್ಯುಟಿ ಮೇಯರ್ ಪಟ್ಟ ನೀಡಿ ಹೊಸ ಇತಿಹಾಸ ಬರೆದಿದೆ.

ಚಿಂತಾದೇವಿ ಎಂಬ ಮಹಿಳೆ ಗಯಾ ನಗರ ಸಂಸ್ಥೆಯಲ್ಲಿ ಜಾಡಮಾಲಿಯಾಗಿ ಸುಮಾರು 40 ವರ್ಷ ಸೇವೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ನಡೆದ ಗಯಾ ಪಾಲಿಕೆ ಚುನಾವಣೆಯಲ್ಲಿ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಈ ಮೊದಲೂ ಸಹ ಬಿಹಾರದಲ್ಲಿ ಇಂಥಹ ಐತಿಹಾಸಿಕ ಘಟನೆ ನಡೆದಿದೆ.

 

ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿರುವ ಮುಸಾಹರ್ ಸಮುದಾಯದಿಂದ ಬಂದ ಭಗವತಿ ದೇವಿ ಎಂಬುವವರು 1996ರಲ್ಲಿ ನಿತೀಶ್ ಕುಮಾರ ಅವರ ಸಂಯುಕ್ತ ಜನತಾದಳದಿಂದ ಗಯಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದು ಉಲ್ಲೇಖನೀಯ.

 

ಹೊಸ ವರ್ಷದ ಸಂಭ್ರಮಕ್ಕೆ ಬಂದ ಪ್ರವಾಸಿಗರ ದುರ್ಮರಣ: ಅಪಘಾತದಲ್ಲಿ ನಾಲ್ವರ ಸಾವು

https://pragati.taskdun.com/car-bus-accident-4-died/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button