Karnataka NewsLatest

ಶ್ವಾನ ಗರ್ಭಿಣಿಯಾಗಿದ್ದು ಹೇಗೆ ? ತನಿಖೆಗೆ ಆದೇಶಿಸಿದ ಬಿಎಸ್‍ಎಫ್

ಪ್ರಗತಿ ವಾಹಿನಿ ಸುದ್ದಿ, ಮೇಘಾಲಯ:ಮೇಘಾಲಯದಲ್ಲಿ ಬಿಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ವಾನವೊಂದು ಗರ್ಭಿಣಿಯಾಗಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಗಡಿ ಭದ್ರತಾ ಪಡೆಯ ಅಧಿಕಾರಿಗಳಿಗೆ ತಲೆ ಬಿಸಿ ತಂದಿಟ್ಟಿದೆ.

ಗಡಿ ಭದ್ರತಾ ಪಡೆ ಮತ್ತು ಸೈನ್ಯದಲ್ಲಿ ಚುರುಕು ತಳಿಯ ಶ್ವಾನಗಳನ್ನು ಬಾಂಬ್ ಪತ್ತೆ, ಉಗ್ರರ ಅಡುದಾಣಗಳ ಪತ್ತೆ ಮೊದಲಾದ ಅಪಾಯಕಾರಿ ಕಾರ್ಯಗಳಿಗೆ ಬಳಸಲಾಗುತ್ತದೆ. ಸ್ನೈಫರ್ ಡಾಗ್‍ಗಳೆಂದು ಕರೆಯಲಾಗುವ ವಿಶೇಷ ತಳಿಯ ನಾಯಿಗಳನ್ನು ಈ ಕಾರ್ಯಕ್ಕಾಗಿಯೇ ಸಾಕಲಾಗುತ್ತದೆ.

 

ಆದರೆ ಈ ನಾಯಿಗಳನ್ನು ಯಾವುದೇ ಕಾರಣಕ್ಕೂ ಬೇರೆ ನಾಯಿಗಳೊಂದಿಗೆ ಲೈಂಗಿಕ ಕ್ರಿಯೆಗೆ ಜತೆಯಾಗಲು ಬಿಡುವುದಿಲ್ಲ. ಹಾಗೆ ಬಿಟ್ಟಲ್ಲಿ ಅವುಗಳ ಲಕ್ಷ್ಯ ಬೇರೆ ಕಡೆ ಹೋಗಿ ಅಪಾಯಕಾರಿ ಕೆಲಸಗಳಲ್ಲಿ ಚುರುಕುತನ ಕಡಿಮೆಯಾಗುವ ಕಾರಣ ಈ ಕ್ರಮ ಅನುಸರಿಸಲಾಗುತ್ತದೆ.

ಆದರೆ ಮೇಘಾಲಯದಲ್ಲಿ ಇದೇ ರೀತಿ ಬಿಎಸ್‍ಎಫ್‍ನಲ್ಲಿ ಸ್ನೈಪರ್ ಡಾಗ್ ಆಗಿರುವ ಶ್ವಾನವೊಂದು ಗರ್ಭಿಣಿಯಾಗಿ ಮೂರು ಮರಿಗಳಿಗೆ ಜನ್ಮ ನೀಡಿದೆ.

ಈ ಹಿನ್ನೆಲೆಯಲ್ಲಿ ಡೆಪ್ಯುಟಿ ಕಮಾಂಡೆಂಟ್ ಮಟ್ಟದ ಅಧಿಕಾರಿಯೊಬ್ಬರಿಗೆ ಈ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

 

ಇನ್ನು, ಅಲ್ಲಿನ ಬಿಎಸ್‍ಎಫ್ ಅಧಿಕಾರಿಯೊಬ್ಬರು ಶ್ವಾನವು ಬೇರೆ ಯಾವುದೇ ನಾಯಿಯ ಸಂಗ ಮಾಡಿರಲಿಲ್ಲ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

 

ಜಾಡಮಾಲಿಯಾಗಿದ್ದ ಮಹಿಳೆಗೆ ಡೆಪ್ಯುಟಿ ಮೇಯರ್ ಹುದ್ದೆ

https://pragati.taskdun.com/chinthadevi-elected-as-gaya-deputy-mayor/

*ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ: ಸಿಎಂ ಬೊಮ್ಮಾಯಿ*

https://pragati.taskdun.com/kmfamulcm-basavaraj-bommaireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button