Latest

*1.9 ಕೋಟಿ ನಕಲಿ ನೋಟುಗಳು ಸೀಜ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗಲೇ ಕುರುಡು ಕಾಂಚಾಣದ ಸದ್ದು ಜೋರಾಗಿದೆ. ರಾಜ್ಯ ಚುನಾವಣಾ ಅಖಾಡ ರಂಗೇರುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಬರೋಬ್ಬರಿ 1.9 ಕೋಟಿ ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ತಮಿಳುನಾಡು ಮೂಲದ ಪಿಚ್ಚಿ ಮುತ್ತು ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ತಮಿಳುನಾಡಿನ ತುತ್ತುಕುಡಿಯಿಂದ ನಕಲಿ ನೋಟುಗಳನ್ನು ತರುತ್ತಿದ್ದ ಎನ್ನಲಾಗಿದೆ. ಆರೋಪಿ ಬಳಿಯಿದ್ದ ನೀಲಿ ಬ್ಯಾಗ್ ಪರಿಶೀಲಿಸಿದಾಗ 2000 ಮುಖ ಬೆಲೆಯ 6,203 ನಕಲಿ ನೋಟುಗಳು, 500 ಮುಖ ಬೆಲೆಯ 174 ನೋಟುಗಳು ಪತ್ತೆಯಾಗಿವೆ.

ಆರೋಪಿಯ ಮೊಬೈಲ್ ವಸಕ್ಕೆ ಪಡೆದು ಪರಿಶೀಲಿಸಲಾಗುತ್ತಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
*ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಭೀಕರ ಅಪಘಾತ*

https://pragati.taskdun.com/tractor-accident26-college-students-injuerdsirsiuttara-kannada/

Home add -Advt

Related Articles

Back to top button