ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ, ಎಪಿಎಂಸಿ ಮತ್ತು ಉದ್ಯಮಭಾಗ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಡಾಲ ಅಂಕಲಗಿಯ ಕೃಷ್ಣ ಅಲಿಯಾಸ್ ರಾಜು ಅಶೋಕ ರಾಮನ್ನವರ್ (23), ಹಾಗೂ ರಂಗಧೋಳಿಯ ನಾಗರಾಜ ಅಲಿಯಾಸ್ ಅಪ್ಪು ಸಂಗಪ್ಪ ಬುದ್ಲಿ (30) ಬಂಧಿತ ಆರೋಪಿಗಳು.
2022ರ ನವೆಂಬರ್ 2ರಂದು ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯ ಮಚ್ಚೆ ಗ್ರಾಮದ ಲಕ್ಷ್ಮೀ ನಗರದ ಮನೆಯೊಂದರಲ್ಲಿ ಕಳುವಾಗಿತ್ತು. ಅದೇ ವೇಳೆ ಒಂದು ಕಾರ್ ಕಳುವಾಗಿತ್ತು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ ಎಸಿಪಿ ಎಸ್. ವಿ. ಗಿರೀಶ್, ಪಿಐ ಶ್ರೀನಿವಾಸ ಹಾಂಡ ಮತ್ತು ಸಿಬ್ಬಂದಿ ಜ.7ರಂದು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ವಿಚಾರಣೆಯ ವೇಳೆ ಆರೋಪಿಗಳು ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯ 3 ಮನೆ ಕಳುವು, ಎಪಿಎಂಸಿ ಮತ್ತು ಉದ್ಯಮಭಾಗ್ ಠಾಣೆ ವ್ಯಾಪ್ತಿಯಲ್ಲಿ ತಲಾ 1 ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ 8,50,000 ಮೌಲ್ಯದ ಒಂದು ಕಾರ್, ಎರಡು ಮೋಟಾರ್ ಸೈಕಲ್‍ಗಳು, ಬಂಗಾರ ಮತ್ತು ಬೆಳ್ಳಿಯ ಆಭರಣಗಳು, ಲ್ಯಾಪ್‍ಟಾಪ್, ಟಿವಿ ವಶಪಡಿಸಿಕೊಳ್ಳಲಾಗಿದೆ.
98 ವರ್ಷದ ಕೈದಿಗೆ ಜೈಲಿನಲ್ಲಿ ಬೀಳ್ಕೊಡುಗೆ
https://pragati.taskdun.com/farewell-party-arranged-for-98-year-old-man/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ