Latest

“ಸರ್.. ಮೇಡಂ.. ಅನ್ನೋದು ಬಿಡಿ, ಟೀಚರ್ ಅಂತ ಕರೆಯಿರಿ..”

ಪ್ರಗತಿವಾಹಿನಿ ಸುದ್ದಿ, ತಿರುವನಂತನಪುರಂ: ವಿದ್ಯಾರ್ಥಿಗಳು ಶಿಕ್ಷಕ, ಶಿಕ್ಷಕಿಯರನ್ನು ಸರ್, ಮೇಡಂ ಎಂದು ಸಂಬೋಧಿಸುವುದು ಎಲ್ಲೆಡೆ ಸಾಮಾನ್ಯ. ಆದರೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಈಗ “ಟೀಚರ್..” ಎಂದು ಕರೆಯಲು ನಿರ್ದೇಶಿಸಿದೆ.

ಆಯೋಗದ ಮುಖ್ಯಸ್ಥ ಕೆ.ವಿ. ಮನೋಜ್‌ ಕುಮಾರ್‌ ಹಾಗೂ ಸದಸ್ಯ ಸಿ. ವಿಜಯ್‌ ಕುಮಾರ್‌ ಅವರು ರಾಜ್ಯದ ಶಿಕ್ಷಣ ಇಲಾಖೆಗೆ ಈ ಸೂಚನೆ ನೀಡಿದ್ದಾರೆ.

ಇನ್ನುಮುಂದೆ ಎಲ್ಲ ಶಾಲೆಗಳಲ್ಲಿ ಈ ನಿರ್ದೇಶನದ ಪಾಲನೆಯಾಗಬೇಕಿದೆ. ಸರ್, ಮೇಡಂ ಎಂಬ ಸಂಬೋದನೆಗಳು ಲಿಂಗ ಸೂಚಕವಾಗಿವೆ. ಆದರೆ ಟೀಚರ್ ಪದದಲ್ಲಿ   ಈ ಸಮಸ್ಯೆ ಇಲ್ಲದ್ದರಿಂದ ಈ ಪದ ಸೂಕ್ತವೆನಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಕರನ್ನು ಸರ್, ಮೇಡಂ ಎನ್ನದೇ “ಟೀಚರ್..” ಎಂದೇ ಸಂಬೋಧಿಸಬೇಕು ಎಂದು ಸೂಚಿಸಲು  ಆಯೋಗ ತಿಳಿಸಿದೆ.

ಶಿಕ್ಷಕರೊಂದಿಗಿನ ಬಾಂಧವ್ಯ ಮತ್ತು ಸಮಾನತೆ ಹೆಚ್ಚಳದ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಎಂದು ಆಯೋಗ ಹೇಳಿಕೊಂಡಿದೆ. ಕ್ರಮೇಣ ಇನ್ನುಳಿದ ರಾಜ್ಯಗಳಲ್ಲೂ ಇದನ್ನು ಅನುಸರಿಸಿದರೆ ಅಚ್ಚರಿಯಿಲ್ಲ.

ಶಾಲೆಯಲ್ಲಿ ಮಗು ಮೊಟ್ಟೆ ಕೇಳಿದರೆ ನೀಡಲೇಬೇಕು

https://pragati.taskdun.com/if-a-child-asks-for-an-egg-in-school-should-give-it/

ಬದಲಾಗಿದೆ SSLC ಪರೀಕ್ಷಾ ಮಂಡಳಿ ವೆಬ್ ಸೈಟ್ ವಿಳಾಸ

https://pragati.taskdun.com/sslc-exam-board-website-address-changed/

ಟೆನ್ನಿಸ್ ಗೆ ಸಾನಿಯಾ ಮಿರ್ಜಾ ವಿದಾಯ

https://pragati.taskdun.com/sania-mirza-says-good-bye-to-tennis/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button