ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಸಂಕ್ರಾಂತ್ರಿ ಹಬ್ಬದ ದಿನದಂದೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಸಿಹಿ ಸುದ್ದಿ ನೀಡಿದೆ. ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಹಿತಿ ನೀಡಿದ್ದಾರೆ.
ಮೀಸಲಾತಿ ವಿಚಾರವಾಗಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಬಿಜೆಪಿ ವರಿಷ್ಠರು ಕರೆ ಮಾಡಿರುವ ಬಗ್ಗೆ ತಿಳಿಸಿದರು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರವಾಗಿ ಸಭೆ ನಡೆಸುವುದಾಗಿ ವರಿಷ್ಠರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ನಮ್ಮ ಪಕ್ಷದ ವರಿಷ್ಠರು ಕರೆ ಮಾಡಿದ್ದರು. ಮೀಸಲಾತಿ ವಿಚಾರವಾಗಿ ಸಭೆ ಬಗ್ಗೆ ಹೇಳಿದ್ದಾರೆ. ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಪಾದಯತರೆಯ ಫಲವಿದು. ಆದಷ್ಟು ಬೇಗ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ನಾಯಕರನ್ನು ಭೇಟಿಯಾಗುತ್ತೇವೆ. ಶೀಘ್ರವೇ ಕೇಂದ್ರ ಸರ್ಕಾರ ಒಳ್ಳೆ ಸುದ್ದಿ ನೀಡಲಿದೆ ಎಂದರು.
ಇದೇ ವೇಳೆ ಸಚಿವ ನಿರಾಣಿ ವಿರುದ್ಧ ಟಾಂಗ್ ನೀಡಿದ ಯತ್ನಾಳ್, ಸಂಕ್ರಾಂತಿ ಹಬ್ಬ ಹಾಗಾಗಿ ಒಳ್ಳೆಯ ವಿಚಾರಗಳನ್ನು ಮಾತನಾಡೋಣ. ಚಿಲ್ಲರೆ ವ್ಯಕ್ತಿಗಳ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಬಾರದು. ಹಾಗಾಗಿ ಚಿಲ್ಲರೆ ವ್ಯಕ್ತಿಗಳು, ಸಂಸ್ಕಾರ ಇಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡಲ್ಲ. ಹಬ್ಬವಿರುವುದರಿಂದ ಒಳ್ಳೆಯದನ್ನು ಮಾತನಾಡೋಣ ಎಂದು ಹೇಳಿದರು.
*ಭೀಕರ ವಿಮಾನ ದುರಂತ; ಥಾಣೆ ಮೂಲದ ಒಂದೇ ಕುಟುಂಬದ ನಾಲ್ವರು ಸೇರಿ 72 ಜನ ಸಜೀವದಹನ*
https://pragati.taskdun.com/nepalaflight-crash72-passenger-deathpokhara-international-airport/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ